Bimana Amavasye – ಭಾನುವಾರ (ಆ.4) ರಂದು ಭೀಮನ ಅಮಾವಾಸ್ಯೆಯನ್ನು ಅನೇಕರು ಅದ್ದೂರಿಯಾಗಿ ಆಚರಿಸಿದ್ದಾರೆ. ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳೂ ಸಹ ನಡೆದಿದೆ. ವಿಶೇಷವಾಗಿ ಭೀಮನ ಅಮಾವಾಸ್ಯೆ ಅಂಗವಾಗಿ ಚಾಮರಾಜನಗರ ತಾಲೂಕಿನ ಸಂತೆ ಮರಳಿ ಗ್ರಾಮದಲ್ಲಿರುವ ಮಾದಪ್ಪನ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು (Bimana Amavasye) ಆಯೋಜಿಸಲಾಗಿತ್ತು. ಇನ್ನೂ ದೇವರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಹಿಂದೂ ಸಂಪ್ರದಾಯದಂತೆ (Bimana Amavasye) ಹಿಂದೂಗಳು ಭೀಮನ ಅಮಾವಾಸ್ಯೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಅದರಲ್ಲೂ ಪತಿಯ ಪಾದಪೂಜೆ ಮಾಡುವ ಮೂಲಕ ಪತ್ನಿ ವಿಶೇಷವಾಗಿ ಆಚರಣೆ ಮಾಡುತ್ತಾರೆ ಎನ್ನಬಹುದಾಗಿದೆ. ಜೊತೆಗೆ ಹಿಂದೂ ದೇವಾಲಯಗಳಲ್ಲೂ ಸಹ ವಿಶೇಷ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಚಾಮರಾಜನಗರ ತಾಲೂಕಿನ ಸಂತೆಮರಳ್ಳಿ ಗ್ರಾಮದಲ್ಲಿನ ಮಾದಪ್ಪನ (Bimana Amavasye) ದೇವಾಲಯದಲ್ಲೂ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಿಳಾ ಭಕ್ತರು ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಯುವಕ ಯುವತಿರು (Bimana Amavasye) ಸಂಪ್ರದಾಯಬದ್ದವಾದ ಉಡುಗೆ ತೊಟ್ಟು ದೇವರ ದರ್ಶನ ಪಡೆದುಕೊಂಡರು.
ಇನ್ನೂ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂತೆಮರಳ್ಳಿ ಗ್ರಾಮದಲ್ಲಿ (Bimana Amavasye) ಭೀಮನ ಅಮಾವಾಸ್ಯೆಯಂದು ವಿಶೇಷ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಜಾತ್ರೆಗೆ ಲಕ್ಷಾಂತರ ಮಂದಿ ಮಾದಪ್ಪನ ಭಕ್ತರು ಭಾಗವಹಿಸಿದ್ದರು. ಈ ಜಾತ್ರೆಯಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಉಡುಗೆ ಧರಿಸಿ ಭಾಗವಹಿಸಿ ಸಂತಸಪಟ್ಟರು. ಇನ್ನೂ ಪುರಾಣಗಳ ಪ್ರಕಾರ ಮಾದೇಶ್ವರರು ಭಿಕ್ಷೆ ಬೇಡುತ್ತಾ ಬಂದು ಈ ಭಾಗದಲ್ಲಿ ಐಕ್ಯರಾಗಿದ್ದಾರೆ (Bimana Amavasye) ಎಂಬ ಪ್ರತೀತಿ ಇದೆ. ಅಂದಿನಿಂದ ಇಲ್ಲಿ ಭೀಮನ ಅಮಾವಾಸ್ಯೆಯಂದು ವಿಶೇಷ ಜಾತ್ರಾ ಮಹೋತ್ಸವವನ್ನು ಆಯೋಜನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇನ್ನೂ ರಾಜ್ಯದಲ್ಲಿ ಶಕ್ತಿ ಯೋಜನೆಯ ಜೊತೆಗೆ ಭಾನುವಾರ ರಜಾ ದಿನ (Bimana Amavasye) ಇರುವ ಕಾರಣ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿತ್ತು ಎನ್ನಬಹುದಾಗಿದೆ. ಜಾತ್ರೆಗೆ ಬಂದ ಭಕ್ತರಿಗೆ ವಿಶೇಷ ಅನ್ನ ಪ್ರಸಾದವನ್ನು ಸಹ ಏರ್ಪಡಿಸಲಾಗಿತ್ತು.