ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವ್ಯಾಪ್ತಿ ಹಾಗೂ ಗೌರಿಬಿದನೂರು ರಸ್ತೆಯ ಕಣಿವೆ ವ್ಯಾಪ್ತಿಯಲ್ಲಿ ಎರಡು ಅಪಘಾತಗಳು (Accident) ಸಂಭವಿಸಿದೆ. ಗುಡಿಬಂಡೆ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಗಾನಹಳ್ಳಿ ಗ್ರಾಮದ ಸಮೀಪ ಬುಲೆರೋ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ (Accident) ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿಯನ್ನು ಹೊಸಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನರೆಡ್ಡಿ (23) ಎಂದು ಗುರ್ತಿಸಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಮತ್ತೊಂದು ಅಪಘಾತ (Accident) ಗೌರಿಬಿದನೂರು ರಸ್ತೆಯ ಕಣಿವೆ ಪ್ರದೇಶದಲ್ಲಿ ನಡೆದಿದೆ. ವಾರಾಂತ್ಯ ಸಮಯದಲ್ಲಿ ಅನೇಕ ಪ್ರವಾಸಿಗರು ಗುಡಿಬಂಡೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಿರುತ್ತಾರೆ. ಅದೇ ರೀತಿ ಗುಡಿಬಂಡೆಯಿಂದ ವಾಟದಹೊಸಹಳ್ಳಿ ಕೆರೆಗೆ ಹೋಗುವಾ ದ್ವಿಚಕ್ರ ವಾಹನ ಅಪಘಾತವಾಗಿದ್ದು, ಈ ವೇಳೆ ಬೈಕ್ ಸವಾರನ ಕಾಲುಗಳು ಮುರಿದಿವೆ ಎಂದು ಹೇಳಲಾಗಿದೆ. ಇನ್ನೂ ಗಾಯಾಳುಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.