ಇತ್ತೀಚಿನ ದಿನಗಳಲ್ಲಿ ‘ರೀಲ್ಸ್’ (Reels) ಹುಚ್ಚು ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಲೈಕ್ಸ್ (Likes) ಮತ್ತು ವ್ಯೂಸ್‌ಗಾಗಿ (Views) ಜನರು ಎಂತಹ ಹುಚ್ಚಾಟಕ್ಕೂ ಸಿದ್ಧರಾಗುತ್ತಿದ್ದಾರೆ. ಕೆಲವೊಮ್ಮೆ ಇದು ತಮಾಷೆಯಾಗಿ ಕಂಡರೂ, ಇನ್ನು ಕೆಲವೊಮ್ಮೆ ಬೇರೆಯವರ ಪ್ರಾಣಕ್ಕೆ ಸಂಚಕಾರ ತರುವಂತಿದೆ. ಇದೀಗ ಬಿಹಾರದಲ್ಲಿ ಯುವಕನೊಬ್ಬನ ಅತಿರೇಕದ ವರ್ತನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Viral Video – ಏನಿದು ಘಟನೆ?
ಬಿಹಾರದ ನಲಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ನಡುರಸ್ತೆಯಲ್ಲಿ ವಿಚಿತ್ರವಾಗಿ ಸ್ಟಂಟ್‌ಗಳನ್ನು (Stunts) ಮಾಡುತ್ತಾ, ಆ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಬೇಕಂತಲೇ ಹೆದರಿಸಲು ನೋಡಿದ್ದಾನೆ. ಆತನ ಅನಿರೀಕ್ಷಿತ ಮತ್ತು ಹುಚ್ಚು ವರ್ತನೆಯಿಂದ ಗಾಬರಿಗೊಂಡ ಬಾಲಕಿಯರು ಬೆದರಿ ಓಡುವ ದೃಶ್ಯ ವಿಡಿಯೋದಲ್ಲಿದೆ. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರೂ ಎಗ್ಗಿಲ್ಲದೆ ಆತ ಕುಣಿಯುತ್ತಾ, ರಸ್ತೆಯ ಮಧ್ಯೆ ಹಾರಿ ಬಾಲಕಿಯರಿಗೆ ಅಡ್ಡ ಹೋಗಿದ್ದಾನೆ. ಇದನ್ನು ಕಂಡ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Read this also : ರೈಲಿನಲ್ಲಿ ಸೀಟ್ ವಿಚಾರಕ್ಕೆ ರಂಪಾಟ: “ಪಟ್ನಾ ಬರಲಿ, ನಿನ್ನನ್ನು ಪೀಸ್ ಪೀಸ್ ಮಾಡ್ತೀನಿ” ಎಂದು ಪ್ರಯಾಣಿಕನಿಗೆ ಮಹಿಳೆ ವಾರ್ನಿಂಗ್!
Viral Video – ನೆಟ್ಟಿಗರು ಫುಲ್ ಗರಂ!
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಈ ಯುವಕನ ವಿರುದ್ಧ ಕಿಡಿಕಾರಿದ್ದಾರೆ. “ಇಂತಹವರನ್ನು ಸುಮ್ಮನೆ ಬಿಡಬಾರದು, ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸುತ್ತಿದ್ದಾರೆ. ಒಬ್ಬ ಬಳಕೆದಾರರಂತೂ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದು, “ಇವನನ್ನು ಯಾವುದಾದರೂ ಫೇಮಸ್ ಪ್ರಾಣಿಸಂಗ್ರಹಾಲಯದ (Zoo) ಬೋನಿನಲ್ಲಿ ಇಡಬೇಕು. ಅಲ್ಲಿ ಅವನು ಯಾರಿಗೂ ತೊಂದರೆ ಕೊಡದೆ ತನ್ನ ಕಸರತ್ತು ಪ್ರದರ್ಶಿಸಬಹುದು, ಸರ್ಕಾರಕ್ಕೂ ಒಂದಿಷ್ಟು ಆದಾಯ ಬರುತ್ತದೆ” ಎಂದು (Viral Video) ವ್ಯಂಗ್ಯವಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ಪೊಲೀಸರ ಗಮನಕ್ಕೆ ಬಂದ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ (Social Media) ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಿಹಾರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ, ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ನ್ಯೂಸೆನ್ಸ್ (Nuisance) ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗಿದೆ.
