ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಸೀಸನ್ 12 ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಎಂದಿನಂತೆ, ಈ ಬಾರಿಯೂ ಬಿಗ್ ಬಾಸ್ ಲೋಗೋದಲ್ಲಿ ಕಣ್ಣಿನ ಆಕೃತಿ ಇದ್ದು, ಅದು 12 ಎಂಬ ಸಂಖ್ಯೆಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ.
ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ, ಈ ಬಾರಿ ಬಿಗ್ ಬಾಸ್ 12 ರ ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಸದ್ಯ, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಸಂಭಾವ್ಯ ಸ್ಪರ್ಧಿಗಳ ಹೆಸರುಗಳ ಪಟ್ಟಿ ಇಲ್ಲಿದೆ.
Bigg Boss Kannada 12 – ಸಂಭಾವ್ಯ ಸ್ಪರ್ಧಿಗಳ ಪಟ್ಟಿ
ಕಿರುತೆರೆ ಮತ್ತು ಸಿನಿಮಾ ನಟರು
- ವಿಜಯ್ ಸೂರ್ಯ: ‘ಅಗ್ನಿಸಾಕ್ಷಿ’ ಮತ್ತು ‘ದೃಷ್ಟಿಬೊಟ್ಟು’ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ವಿಜಯ್ ಸೂರ್ಯ ಈ ಬಾರಿ ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರ ಹೆಸರು ಈ ಬಾರಿ ಬಲವಾಗಿ ಕೇಳಿಬರುತ್ತಿದೆ.
- ಅಶೋಕ್ ಶರ್ಮಾ: ರಾಕಿಂಗ್ ಸ್ಟಾರ್ ಯಶ್ ಅವರ ಆಪ್ತ ಸ್ನೇಹಿತ ಅಶೋಕ್ ಶರ್ಮಾ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಯಾವುದೇ ಧಾರಾವಾಹಿಗಳಲ್ಲಿ ಸಕ್ರಿಯರಾಗಿಲ್ಲದ ಕಾರಣ, ಅವರ ಭಾಗವಹಿಸುವಿಕೆ ಸಾಧ್ಯತೆ ಹೆಚ್ಚಿದೆ. (Bigg Boss Kannada 12)
- ಕರಣ್ ಆರ್ಯನ್: ಯುವ ನಟ ಮತ್ತು ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಟಾರ್ ಓಪನರ್ ಆಗಿರುವ ಕರಣ್ ಆರ್ಯನ್ ಕೂಡ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ. ಇವರು ರಂಗಭೂಮಿ ಕಲಾವಿದರೂ ಹೌದು.
ಯೂಟ್ಯೂಬರ್‌ಗಳು ಮತ್ತು ಇತರರು
- ಡಾ. ಬ್ರೋ (ಗಗನ್): ಯೂಟ್ಯೂಬರ್ ಗಗನ್ ಅಲಿಯಾಸ್ ಡಾ. ಬ್ರೋ ಹೆಸರು ಕಳೆದ ಹಲವು ಸೀಸನ್‌ಗಳಿಂದಲೂ ಕೇಳಿಬರುತ್ತಲೇ ಇದೆ. ಈ ಬಾರಿ ಅವರ ಎಂಟ್ರಿ ಬಹುತೇಕ ಖಚಿತ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಅವರು ಇತ್ತೀಚಿನ ತಿಂಗಳುಗಳಲ್ಲಿ ಹೊಸ ವಿಡಿಯೋಗಳನ್ನು ಅಪ್‌ಲೋಡ್ ಮಾಡಿಲ್ಲ.
- (Bigg Boss Kannada 12)
- ಆನಂದ್ ಗುರೂಜಿ: ಕಳೆದ ಕೆಲವು ಸೀಸನ್‌ಗಳಲ್ಲಿ ಬಿಗ್ ಬಾಸ್ ಮನೆಗೆ ಒಬ್ಬ ಗುರೂಜಿ ಅವರನ್ನು ಕರೆತರುವ ಸಂಪ್ರದಾಯವಿದೆ. ಅದರಂತೆ, ಈ ಬಾರಿ ಖ್ಯಾತ ಗುರೂಜಿ ಆನಂದ್ ಗುರೂಜಿ ಅವರು ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. Read this also : ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ 12, ದೊಡ್ಮನೆ ಈ ಬಾರಿ ಎಲ್ಲಿ? ಹೊಸ ಅಪ್‌ಡೇಟ್ ಇಲ್ಲಿದೆ..!
- ಗಿಲ್ಲಿ (ಕಾಮಿಡಿ ಕಿಲಾಡಿಗಳು): ಬಿಗ್ ಬಾಸ್ ಮನೆಯಲ್ಲಿ ಹಾಸ್ಯದ ಕೊರತೆಯಾಗದಂತೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿ ಈ ಬಾರಿ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ.
Bigg Boss Kannada 12 – ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ
ಇದರ ಜೊತೆಗೆ, ಸುದ್ದಿ ನಿರೂಪಕಿ ದಿವ್ಯಾ ವಸಂತ, ನಟ ಮಡೆನೂರು ಮನು, ‘ಸರಿಗಮಪ’ ಖ್ಯಾತಿಯ ಬಾನು ಬೆಳಗುಂದಿ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ನಟ ಧನುಷ್ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವರುಣ್ ಆರಾಧ್ಯ ಅವರ ಹೆಸರುಗಳೂ ಕೂಡ ಚರ್ಚೆಯಲ್ಲಿವೆ. ಆದರೆ, ಈ ಎಲ್ಲ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಷ್ಟೇ. ಕಲರ್ಸ್ ಕನ್ನಡ ವಾಹಿನಿ ಅಥವಾ ಬಿಗ್ ಬಾಸ್ ತಂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಗ್ ಬಾಸ್ ಮನೆಯ ನಿಜವಾದ ಸ್ಪರ್ಧಿಗಳ ಪಟ್ಟಿ ತಿಳಿಯಲು ಅಧಿಕೃತ ಪ್ರಕಟಣೆಗಾಗಿ ಕಾಯಬೇಕು.