ಕನ್ನಡದ ಬಿಗ್ ಬಾಸ್ ಸೀಸನ್ 10 ರ ಮೂಲಕ ಫೇಂ ಪಡೆದುಕೊಂಡ ನೀತು ವನಜಾಕ್ಷಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿಬಂದ ಬಳಿಕ ಆಕೆ ತುಂಬಾನೆ ಪಾಪ್ಯುಲರ್ ಆಗಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ತಮ್ಮ ಜೀವನದಲ್ಲಿ ನಡೆದಂತಹ ಕೆಲವೊಂದು ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.
ಇನ್ನೂ ಸಂದರ್ಶನದಲ್ಲಿ ಮಾತನಾಡಿದ ನೀತು ವನಜಾಕ್ಷಿ, ನನ್ನದು ಮೂಲತಃ ಗದಗ, ಮೂಲ ಹೆಸರು ಮಂಜುನಾಥ್. ನಾನು ಏಳನೇ ತರಗತಿ ಓದುತ್ತಿರುವಾಗಲೇ ಒಂದಷ್ಟು ಬದಲಾವಣೆಗಳನ್ನು ಅರಿತುಕೊಂಡು ಹೆಣ್ಣಾಗುವ ನಿರ್ಧಾರ ಮಾಡಿದೆ. ಏನೇ ಆಗಲಿ ನಾನು ಹೆಣ್ಣು ಆಗಲೇ ಬೇಕು ಎಂದು ನಿರ್ಧಾರ ಮಾಡಿದ್ದೇನೆ. ನಮ್ಮ ತಾಯಿಯ ಮನವೊಲಿಸಿ ಅವರ ಒಪ್ಪಿಗೆ ಸಹ ಪಡೆದುಕೊಂಡೆ. ವೈದ್ಯರ ಬಳಿ ತೆರಳಿ ಹೆಣ್ಣಾಗುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ. ಹಾರ್ಮೋನ್ಸ್ ತೆಗೆದುಕೊಳ್ಳುತ್ತಿದ್ದೆ. ಅದರಿಂದ ತುಂಬಾನೆ ಸಮಸ್ಯೆಯಾಗುತ್ತಿತ್ತು. ಸ್ನಾನ ಮಾಡುವಾಗ ನನ್ನ ಖಾಸಗಿ ಅಂಗ ನೋಡಲು ನನಗೆ ಮುಜುಗರ ಆಗ್ತಾ ಇತ್ತು. ಯಾವಾಗ ಹೆಣ್ಣಾಗಿ ಬದಲಾಗುತ್ತೀನೋ ಎಂದು ಅನ್ನಿಸುತ್ತಿತ್ತು. ಯಾರಿಗೂ ಹೇಳಿಕೊಳ್ಳಲಾಗದೇ ತುಂಬಾ ನೋವನ್ನು ಅನುಭವಿಸುತ್ತಿದ್ದೆ.
ಬಳಿಕ ದೆಹಲಿಗೆ ಹೋಗಿ, ಅಲ್ಲಿನ ವೈದ್ಯರನ್ನು ಸಂಪರ್ಕ ಮಾಡಿದೆ. ಅವರು ಕೌನ್ಸಲಿಂಗ್ ಮಾಡಿದರು. ಈ ಪ್ರಕ್ರಿಯೆಯಲ್ಲಿ ಒಂದು ವೇಳೆ ಸತ್ತು ಹೋದರೇ ನಾವು ಹೊಣೆಯಲ್ಲ ಎಂದು ನಮ್ಮ ಬಳಿ ಸಹಿ ಮಾಡಿಸಿಕೊಂಡರು. ಸಹಿ ಮಾಡೋವಾಗ ನನ್ನ ಕಣ್ಣಲ್ಲಿ ನೀರು ಬಂತು. ಅದು ದುಃಖದಲ್ಲಿ ಬಂದಂತಹ ಕಣ್ಣೀರಲ್ಲ. ಬದಲಿಗೆ ಅದು ಸಂತೋಷದ ಕಣ್ಣೀರು. ಬೇಗ ಹೆಣ್ಣಾಗುತ್ತೇನೆ ಎಂಬ ಖುಷಿಯಲ್ಲಿ ಸಹಿ ಮಾಡಿದ್ದೆ. ಐದು ಗಂಟೆಯ ಸರ್ಜರಿ ಇದಾಗಿತ್ತು. ಇದಕ್ಕೆ ಸಿಗ್ನಾ ಸರ್ಜರಿ ಎನ್ನುತ್ತಾರೆ. ದಿನಕ್ಕೆ ಒಂದೇ ಸರ್ಜರಿ ಆಗುತ್ತದೆ. ಅನೇಸ್ತಿಯಾ ಕಡಿಮೆ ಆದಂತೆ ನೋವು ಸಹ ಜಾಸ್ತಿ ಆಗುತ್ತಿತ್ತು. ಆಪರೇಷನ್ ಆದ ಭಾಗಕ್ಕೆ ವೈದ್ಯರು ಡ್ರೆಸ್ಸಿಂಗ್ ಮಾಡುವಾಗ ಜೀವ ಹೋದಂಗೆ ಆಗುತ್ತದೆ. ಆದರೂ ನೋವಿನಲ್ಲೆ ಖುಷಿ ಪಟ್ಟೆ. ಎಲ್ಲ ಟ್ರಾನ್ಸ್ ಜೆಂಡರ್ ಗಳಿಗೂ ಅದೇ ಫೀಲ್ ಆಗುತ್ತದೆ. ಒದೊಂದು ಮರು ಹುಟ್ಟು ಇದ್ದಂತೆ. ನಾವಾಗಿಯೇ ಪಡೆದುಕೊಂಡ ಜನ್ಮ ಇದು. 5 ಗಂಟೆಯ ಸರ್ಜರಿಗೆ 10 ಲಕ್ಷ ಖರ್ಚಾಯಿತು ಎಂದು ತಮ್ಮ ಖಾಸಗಿ ಜೀವನದಲ್ಲಾದ ಕೆಲವೊಂದು ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಇನ್ನೂ ಸಂಪೂರ್ಣ ಹೆಣ್ಣಾಗಿ ಪರಿವರ್ತಣೆ ಆಗುತ್ತೇವೆ ಆದರೆ ಗರ್ಭಕೋಶ ಮಾತ್ರ ಇರುವುದಿಲ್ಲ. ಸರ್ಜರಿ ಆದ್ರೆ ಸುಮ್ಮನೆಯಲ್ಲ. ತುಂಬಾ ಕಷ್ಟ ಇರುತ್ತದೆ. ಸರ್ಜರಿ ಯಾವಾಗ ಮುಗಿಯಿತೋ ಆಗ ನಾನು ಗೆದ್ದೆ. ನಾನು ನನ್ನದೇ ಆದ ಉದ್ಯಮ ಶುರು ಮಾಡಿದ್ದೇನೆ. ಅದರಲ್ಲಿಯೇ ಖುಷಿಯನ್ನು ಕಾಣುತ್ತಿದೇನೆ. ಟ್ರಾನ್ಸ್ ಆಗಿ ಬದಲಾವಣೆಯಾದ ಬಳಿಕ 2019ರಲ್ಲಿ ಸೂಪರ್ ಕ್ವೀನ್ ಮಿಸ್ ಟ್ರಾನ್ಸ್ ಕ್ವೀನ್ ಎಂಬ ಪಟ್ಟವನ್ನು ಸಹ ಪಡೆದುಕೊಂಡೆ. 2020ರಲ್ಲಿ ಮಿಸ್ ಇಂಟರ್ ನ್ಯಾಷನಲ್ ಕ್ವೀನ್ ಕಿರೀಟ ಮುಡಿಗೇರಿಸಿಕೊಂಡಿದ್ದೇನೆ. ಭಾರತದ ಮೊದಲ ಟ್ರಾನ್ಸ್ ಟ್ಯಾಟೂ ಆರ್ಟಿಸ್ಟ್ ಆಗಿಯೂ ಗುರ್ತಿಸಿಕೊಂಡು ನನ್ನ ಸ್ವಂತ ಪರಿಶ್ರಮದಿಂದ ಜೀವನ ಸಾಗಿಸುತ್ತಿದ್ದೇನೆ ಎಂದು ನೀತು ಹೇಳಿದ್ದಾರೆ. ಆಕೆಯ ಈ ಹೇಳಿಕೆಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿವೆ.