Saturday, August 30, 2025
HomeStateKoregaon Vijay Diwas: ಗುಡಿಬಂಡೆಯಲ್ಲಿ ಭೀಮಾ ಕೊರೆಂಗಾವ್ ವಿಜಯೋತ್ಸವ ದಿನಾಚರಣೆ...!

Koregaon Vijay Diwas: ಗುಡಿಬಂಡೆಯಲ್ಲಿ ಭೀಮಾ ಕೊರೆಂಗಾವ್ ವಿಜಯೋತ್ಸವ ದಿನಾಚರಣೆ…!

Koregaon Vijay Diwas : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ವೃತ್ತದಲ್ಲಿ ಗುಡಿಬಂಡೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮಾ ಭೀಮ ಕೊರೆಗಾಂವ್‌ ವಿಜಯೋತ್ಸವವನ್ನು ಆಚರಿಸಲಾಯಿತು. ಇದೇ ಸಮಯದಲ್ಲಿ ಅಂಬೇಡ್ಕರ್‍ ರವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು.

Koregav vijayostava in Gudibande 1

ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಎಲ್.ಎನ್.ಈಶ್ವರಪ್ಪ ಮಾತನಾಡಿ, ಮಹಾರಾಷ್ಟ್ರದ ಪೇಶ್ವೆಯರ ಆಡಳಿತದಲ್ಲಿ ಶೋಷಿತ ಜನಾಂಗದ ಕೇವಲ 500 ಮಹರ್ ಸೈನಿಕರು, (Koregaon Vijay Diwas) ಶೋಷಣೆ ಮಾಡುತ್ತಿದ್ದ 28 ಸಾವಿರ ಪೇಶ್ವೆಯ ಸೈನಿಕರ ವಿರುದ್ಧ 1818ರ ಜನವರಿ 1ರಂದು ಜಯ ಸಾಧಿಸಿದರು. ಆದ್ದರಿಂದ ಈ ದಿನವನ್ನು ಶೋಷಣೆಯ ವಿರುದ್ಧ ಹೋರಾಡಿ ಜಯಿಸಿದ ದಿನವೆಂದು ಆಚರಿಸಲಾಗುತ್ತದೆ. 12 ಗಂಟೆಗಳ ಹೋರಾಟದಲ್ಲಿ 22 ಜನ ಹುತಾತ್ಮರಾದರು. ಅಂಬೇಡ್ಕರ್ ಅವರು ಈ ಯುದ್ಧವನ್ನು ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನದ ಯುದ್ಧ ಎಂದು ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಈ ಹೋರಾಟದಲ್ಲಿ ಮಡಿದಂತಹ ವೀರ ಸೈನಿಕರು ಇಂದಿನ ಯುವಕರಿಗೆ (Koregaon Vijay Diwas)  ಮಾದರಿಯಾಗಿದ್ದಾರೆ ಎಂದರು.

ಬಳಿಕ ದಲಿತ ಸಂಘರ್ಷ ಸಮಿತಿಯ ಮುಖಂಡ ಚೆಂಡೂರು ರಮಣ ಮಾತನಾಡಿ, ದೇಶದಾದ್ಯಂತ ಇಂದು ಕೊರೆಗಾಂವ್‌ ವಿಜಯೋತ್ಸವ ಆಚರಣೆ (Koregaon Vijay Diwas) ಮಾಡಲಾಗುತ್ತಿದೆ. ಸ್ವಾಭಿಮಾನಕ್ಕಾಗಿ, ಗೌರವವಕ್ಕಾಗಿ ಈ ಹೋರಾಟ ನಡೆದಿತ್ತು. ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದಿರುವ ಇಂಥ ಹೋರಾಟಗಳೇ ಉತ್ತಮ ಸಂವಿಧಾನ ನಿರ್ಮಾಣವಾಗಲು, ಜನರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಅಸ್ಪೃಶ್ಯರೆಂದು ಗುರುತಿಸಿಕೊಂಡ ಜನರು ಈ ದೇಶದ ಇತಿಹಾಸದಲ್ಲಿ (Koregaon Vijay Diwas)  ಮೊದಲ ಬಾರಿಗೆ ಪೇಶ್ವೆಗಳ ಜಾತೀಯತೆಯ ವಿರುದ್ಧ ಪಡೆದ ಗೆಲುವಾಗಿ ಕೊರೆಗಾಂವ್‌ ವಿಜಯ ದಿನವನ್ನು ಆಚರಿಸಲಾಗುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೇ ಬ್ರಿಟೀಷರು ಸಹ ಈ ವಿಜಯೋತ್ಸವದಲ್ಲಿ ಮಡಿದಂತಹ (Koregaon Vijay Diwas) ನಾಯಕರಿಗೆ ಗೌರವ ನಮನ ಸಲ್ಲಿಸುತ್ತಾರೆ ಎಂದರು.

Koregav vijayostava in Gudibande 2

ಇದೇ ಸಮಯದಲ್ಲಿ ಜೀವಿಕ ಸಂಘಟನೆಯ ನಾರಾಯಣಸ್ವಾಮಿ ಮಾತನಾಡಿ, (Koregaon Vijay Diwas)  ಭೀಮಾ ನದಿಯ ದಡದಲ್ಲಿ ಕೊರೆಂಗಾವ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು. ಪೇಶ್ವೆಯ ಸೈನ್ಯದಲ್ಲಿದ್ದ ಆಯುದ್ಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ (Koregaon Vijay Diwas)  ಹೋರಾಡಿ ಜಯಗಳಿಸಿತ್ತು. 22 ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧವಾಗಿತ್ತು ಎಂದರು.

ಈ ವೇಳೆ ಕೊರೆಗಾಂವ್ (Koregaon Vijay Diwas) ಯುದ್ದದಲ್ಲಿ ಜಯಗಳಿಸಿದ ವೀರ ಸೇನಾನಿಗಳನ್ನು ನೆನಪಿಸುವಂತಹ ಗೀತೆಯನ್ನು ಹಾಡಲಾಯಿತು. ಈ ಸಮಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ಚೆನ್ನರಾಯಪ್ಪ, ರಾಜು, ಚಿಕ್ಕನರಸಿಂಹಪ್ಪ, ನರಸಿಂಹಪ್ಪ, ರಾಮಾಂಜಿ, ರವಿ, ಸುಬ್ಬರಾಯಪ್ಪ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular