BHEL Jobs 2026 : ಐಟಿಐ ಪಾಸಾದವರಿಗೆ ಬಿಎಚ್‌ಇಎಲ್‌ನಲ್ಲಿ 660 ಹುದ್ದೆಗಳು; ಬೆಂಗಳೂರಿನಲ್ಲೂ ಕೆಲಸ, ತಿಂಗಳಿಗೆ ₹65,000 ವರೆಗೆ ವೇತನ!

BHEL Jobs 2026 for 660 Artisan Grade-IV vacancies

ಕೇಂದ್ರ ಸರ್ಕಾರದ ಮಹಾರತ್ನ ಸಾರ್ವಜನಿಕ ವಲಯದ ಪ್ರತಿಷ್ಠಿತ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL Jobs 2026) ತಾಂತ್ರಿಕ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಇರುವ ತನ್ನ ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ ಬರೋಬ್ಬರಿ 660 ಆರ್ಟಿಸನ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Notification No. 01/2026) ಹೊರಡಿಸಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷವಾಗಿ ಬೆಂಗಳೂರಿನ ಘಟಕಗಳಲ್ಲೇ 75 ಹುದ್ದೆಗಳು ಲಭ್ಯವಿರುವುದು ಉತ್ತಮ ಅವಕಾಶ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

BHEL Jobs 2026 for 660 Artisan Grade-IV vacancies

BHEL Jobs 2026: ಪ್ರಮುಖ ದಿನಾಂಕಗಳು ಮತ್ತು ಹುದ್ದೆಗಳ ವಿವರ

ಈ ಬೃಹತ್ ನೇಮಕಾತಿಯಲ್ಲಿ ಫಿಟ್ಟರ್, ವೆಲ್ಡರ್ ಸೇರಿದಂತೆ ಪ್ರಮುಖ 7 ತಾಂತ್ರಿಕ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.

ಪ್ರಮುಖ ವಿವರ ದಿನಾಂಕ / ವಿವರ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 21 ಅಕ್ಟೋಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ನವೆಂಬರ್ 2026
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) 11 ಡಿಸೆಂಬರ್ 2026 (ತಾತ್ಕಾಲಿಕ)
ಒಟ್ಟು ಹುದ್ದೆಗಳ ಸಂಖ್ಯೆ 660 ಹುದ್ದೆಗಳು
ಹುದ್ದೆಯ ಹೆಸರು ಆರ್ಟಿಸನ್ ಗ್ರೇಡ್-IV (Artisan Grade-IV)

ಟ್ರೇಡ್‌ವಾರು ಖಾಲಿ ಹುದ್ದೆಗಳ ಪಟ್ಟಿ

  • ಫಿಟ್ಟರ್ (Fitter): 278 ಹುದ್ದೆಗಳು (ಅತಿ ಹೆಚ್ಚು ಹುದ್ದೆಗಳು)
  • ವೆಲ್ಡರ್ (Welder): 104 ಹುದ್ದೆಗಳು
  • ಮೆಷಿನಿಸ್ಟ್ (Machinist): 101 ಹುದ್ದೆಗಳು
  • ಎಲೆಕ್ಟ್ರಿಷಿಯನ್ (Electrician): 90 ಹುದ್ದೆಗಳು
  • ಟರ್ನರ್ (Turner): 52 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic): 23 ಹುದ್ದೆಗಳು
  • ಫೌಂಡ್ರಿಮ್ಯಾನ್ (Foundryman): 12 ಹುದ್ದೆಗಳು

ಘಟಕವಾರು ಹುದ್ದೆಗಳ ಹಂಚಿಕೆ (Unit-wise Vacancies)

  • ಬೆಂಗಳೂರು (ಕರ್ನಾಟಕ): ಎಲೆಕ್ಟ್ರಾನಿಕ್ಸ್ ಡಿವಿಷನ್ – 45, ಸೋಲಾರ್ ಬಿಸಿನೆಸ್ ಡಿವಿಷನ್ – 30 (ಒಟ್ಟು 75)
  • ತಿರುಚಿರಾಪಳ್ಳಿ (ತಮಿಳುನಾಡು): 150 ಹುದ್ದೆಗಳು
  • ವಿಶಾಖಪಟ್ಟಣಂ (ಆಂಧ್ರಪ್ರದೇಶ): 120 ಹುದ್ದೆಗಳು
  • ರಾಣಿಪೇಟೆ (ತಮಿಳುನಾಡು): 75 ಹುದ್ದೆಗಳು
  • ಹರಿದ್ವಾರ (ಉತ್ತರಾಖಂಡ): 60 ಹುದ್ದೆಗಳು
  • ಹೈದರಾಬಾದ್ (ತೆಲಂಗಾಣ): 60 ಹುದ್ದೆಗಳು
  • ಭೋಪಾಲ್ (ಮಧ್ಯಪ್ರದೇಶ): 60 ಹುದ್ದೆಗಳು
  • ಝಾನ್ಸಿ (ಉತ್ತರಪ್ರದೇಶ): 60 ಹುದ್ದೆಗಳು

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯ ನಿಯಮಗಳು

ಶೈಕ್ಷಣಿಕ ಅರ್ಹತೆ: ಐಟಿಐ ಜೊತೆಗೆ ಅಪ್ರೆಂಟಿಸ್‌ಶಿಪ್ ಕಡ್ಡಾಯ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ ಐಟಿಐ ಮುಗಿಸಿದರೆ ಸಾಲದು, ಅಪ್ರೆಂಟಿಸ್‌ಶಿಪ್ ಕೂಡ ಪೂರ್ಣಗೊಳಿಸಿರಬೇಕು:

  1. SSLC / 10ನೇ ತರಗತಿ ತೇರ್ಗಡೆಯಾಗಿರಬೇಕು.
  2. ಸಂಬಂಧಿಸಿದ ಟ್ರೇಡ್‌ನಲ್ಲಿ ಪೂರ್ಣಾವಧಿಯ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ (NTC / ITI) ಹೊಂದಿರಬೇಕು.
  3. ಇದರ ಜೊತೆಗೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವುದು ಕಡ್ಡಾಯ.
  4. ಈ ಎಲ್ಲಾ ಅರ್ಹತೆಗಳನ್ನು 2026ರ ಅಕ್ಟೋಬರ್ 1ರೊಳಗೆ ಪಡೆದಿರಬೇಕು. ಕರ್ನಾಟಕದ ಘಟಕಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷಾ ಜ್ಞಾನ ಅಪೇಕ್ಷಣೀಯ.

BHEL Jobs 2026 for 660 Artisan Grade-IV vacancies

ಕನಿಷ್ಠ ಅಂಕಗಳ ಅರ್ಹತೆ

ವಯೋಮಿತಿ ಮತ್ತು ಸಡಿಲಿಕೆ (Age Limit)

2026ರ ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ ವಯೋಮಿತಿ ನಿಗದಿಪಡಿಸಲಾಗಿದೆ:

  • ಸಾಮಾನ್ಯ & EWS ವರ್ಗ: ಗರಿಷ್ಠ 27 ವರ್ಷ
  • OBC (NCL) ವರ್ಗ: ಗರಿಷ್ಠ 30 ವರ್ಷ (3 ವರ್ಷ ಸಡಿಲಿಕೆ)
  • SC / ST ವರ್ಗ: ಗರಿಷ್ಠ 32 ವರ್ಷ (5 ವರ್ಷ ಸಡಿಲಿಕೆ)
  • PwBD ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳವರೆಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ.
  • ಸಂಬಂಧಿತ ಕೆಲಸದ ಅನುಭವ ಹೊಂದಿರುವವರಿಗೆ ಗರಿಷ್ಠ 7 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ (ಕನಿಷ್ಠ 6 ತಿಂಗಳ ಕೆಲಸದ ಅನುಭವ ಅಗತ್ಯ). ಯಾವುದೇ ಕಾರಣಕ್ಕೂ ಗರಿಷ್ಠ ವಯಸ್ಸು 56 ವರ್ಷ ಮೀರುವಂತಿಲ್ಲ.

ವೇತನ ಶ್ರೇಣಿ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಸಿಗುವ ವೇತನ ಎಷ್ಟು?

  • ತರಬೇತಿ ಅವಧಿ (ಮೊದಲ 1 ವರ್ಷ): ತಾತ್ಕಾಲಿಕ ಆರ್ಟಿಸನ್ ಆಗಿ ಕಾರ್ಯನಿರ್ವಹಿಸಬೇಕಿದ್ದು, ಪ್ರತಿ ತಿಂಗಳು ₹24,000 ನಿಗದಿತ ವೇತನ ಸಿಗಲಿದೆ.
  • ಖಾಯಂಗೊಂಡ ನಂತರ: ಆರ್ಟಿಸನ್ ಗ್ರೇಡ್-IV ಹುದ್ದೆಗೆ ನಿಯಮಿತಗೊಳಿಸಲಾಗುವುದು. ಆಗ ಮಾಸಿಕ ₹29,500 ರಿಂದ ₹65,000 ವೇತನ ಶ್ರೇಣಿ ಜತೆಗೆ ಭತ್ಯೆಗಳು ಲಭ್ಯವಾಗಲಿವೆ.

ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ (CBT Pattern)

ಆಯ್ಕೆಯು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಮೆರಿಟ್ ಆಧಾರದ ಮೇಲೆ ನಡೆಯಲಿದೆ. ನಂತರ ಕೌಶಲ ಪರೀಕ್ಷೆ (Skill Test) ಹಾಗೂ ದಾಖಲೆ ಪರಿಶೀಲನೆ ನಡೆಯಲಿದ್ದು, ಇವು ಕೇವಲ ಅರ್ಹತಾ (Qualifying) ಸ್ವರೂಪದ್ದಾಗಿರುತ್ತವೆ.

  • ಒಟ್ಟು ಪ್ರಶ್ನೆಗಳು: 120 | ಸಮಯ: 90 ನಿಮಿಷಗಳು
  • ಟ್ರೇಡ್ ಸಂಬಂಧಿತ ವಿಷಯಗಳು: 70 ಪ್ರಶ್ನೆಗಳು
  • ಎಂಜಿನಿಯರಿಂಗ್ ಮತ್ತು ಲೆಕ್ಕಾಚಾರ: 30 ಪ್ರಶ್ನೆಗಳು
  • ರೀಸನಿಂಗ್ (Reasoning): 20 ಪ್ರಶ್ನೆಗಳು
  • ನೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ25 ಅಂಕ ಕಡಿತವಾಗಲಿದೆ.
  • ಭಾಷೆ: ಪರೀಕ್ಷೆಯು ಇಂಗ್ಲಿಷ್, ಹಿಂದಿ ಸೇರಿದಂತೆ ನೀವು ಆಯ್ಕೆ ಮಾಡುವ ಪ್ರಾದೇಶಿಕ ಭಾಷೆಯಲ್ಲಿ (ಕನ್ನಡದಲ್ಲೂ) ಲಭ್ಯವಿರುತ್ತದೆ.

ಅರ್ಜಿ ಶುಲ್ಕದ ವಿವರ

  • General / OBC / EWS ಅಭ್ಯರ್ಥಿಗಳಿಗೆ: ₹1,072 (ಪರೀಕ್ಷಾ ಶುಲ್ಕ ₹600 + ಪ್ರಕ್ರಿಯೆ ಶುಲ್ಕ ₹400 + GST)
  • SC / ST / PwBD / ಮಾಜಿ ಸೈನಿಕರಿಗೆ: ₹472 (ಪರೀಕ್ಷಾ ಶುಲ್ಕ ವಿನಾಯಿತಿ ಇದ್ದು, ಪ್ರಕ್ರಿಯೆ ಶುಲ್ಕ ₹400 + GST ಮಾತ್ರ)

BHEL Jobs 2026 for 660 Artisan Grade-IV vacancies

ಅರ್ಜಿ ಸಲ್ಲಿಸುವ ವಿಧಾನ ಮತ್ತು ನೀವು ತಿಳಿದಿರಲೇಬೇಕಾದ ಪ್ರಮುಖ ಷರತ್ತು

ಆನ್‌ಲೈನ್ ಅರ್ಜಿ ಸಲ್ಲಿಕೆ ಹಂತಗಳು

  1. BHEL ಅಧಿಕೃತ ನೇಮಕಾತಿ ಪೋರ್ಟಲ್‌ಗೆ ಭೇಟಿ ನೀಡಿ.
  2. ‘Artisan Recruitment’ ವಿಭಾಗದಲ್ಲಿ ಜಾಹೀರಾತು ಸಂಖ್ಯೆ 01/2026 ಅನ್ನು ಆಯ್ಕೆ ಮಾಡಿಕೊಳ್ಳಿ.
  3. ನಿಮ್ಮ ವೈಯಕ್ತಿಕ ವಿವರ, ಶೈಕ್ಷಣಿಕ ದಾಖಲೆ ಹಾಗೂ ಟ್ರೇಡ್ ವಿವರಗಳನ್ನು ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ.
  5. ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಗಮನಿಸಿ: ಒಬ್ಬ ಅಭ್ಯರ್ಥಿಯು ಕೇವಲ ಒಂದು ಉತ್ಪಾದನಾ ಘಟಕ ಮತ್ತು ಒಂದು ಟ್ರೇಡ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಕೊನೆಯ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ.

ಅಭ್ಯರ್ಥಿಗಳು ಗಮನಿಸಲೇಬೇಕಾದ 20 ವರ್ಷಗಳ ಕಡ್ಡಾಯ ನಿಯಮ!

ಈ ನೇಮಕಾತಿಯಲ್ಲಿ ಒಂದು ಪ್ರಮುಖ ನಿಬಂಧನೆ ಇದೆ. ಆಯ್ಕೆಯಾದ ಅಭ್ಯರ್ಥಿಗಳು ತಮಗೆ ಹಂಚಿಕೆಯಾದ ಘಟಕದಲ್ಲೇ ಕನಿಷ್ಠ 20 ವರ್ಷಗಳ ಕಾಲ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಮೊದಲ 20 ವರ್ಷ ಯಾವುದೇ ಕಾರಣಕ್ಕೂ ಬೇರೆ ಊರಿಗೆ ಅಥವಾ ಘಟಕಕ್ಕೆ ವರ್ಗಾವಣೆ (Transfer) ನೀಡಲಾಗುವುದಿಲ್ಲ. ಆದ್ದರಿಂದ, ಬೆಂಗಳೂರು ಅಥವಾ ಇತರೆ ಘಟಕಗಳನ್ನು ಆಯ್ಕೆ ಮಾಡುವ ಮುನ್ನ ನಿಮ್ಮ ಕುಟುಂಬದ ಸನ್ನಿವೇಶ ಮತ್ತು ವಾಸಸ್ಥಳವನ್ನು ಯೋಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ.

ಪ್ರಮುಖ ಅಧಿಕೃತ ಲಿಂಕ್‌ಗಳು (Important Official Links)

  • ಅಧಿಕೃತ ವೃತ್ತಿ/ನೇಮಕಾತಿ ಪೋರ್ಟಲ್ (BHEL Careers Portal):

👉 careers.bhel.in

  • BHEL ಅಧಿಕೃತ ಮುಖ್ಯ ವೆಬ್‌ಸೈಟ್ (Official Corporate Website):

👉 www.bhel.com

Leave a Comment

Your email address will not be published. Required fields are marked *

Scroll to Top