Bharat Taxi – ದೇಶದಲ್ಲಿ ಟ್ಯಾಕ್ಸಿ ಎಂದ ಕೂಡಲೇ ಮೊದಲು ನೆನಪಾಗುವುದು ಓಲಾ (Ola) ಮತ್ತು ಊಬರ್ (Uber). ಮಾರುಕಟ್ಟೆಯಲ್ಲಿ ಇವುಗಳದ್ದೇ ದೊಡ್ಡ ಪಾಲು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಖಾಸಗಿ ಕ್ಯಾಬ್ ಸೇವೆಗಳ ಕುರಿತು ಗ್ರಾಹಕರಿಂದ ದೂರುಗಳು ಹೆಚ್ಚಾಗಿದ್ದವು. ಅಧಿಕ ದರ, ಟ್ರಿಪ್ ರದ್ದತಿ ಮತ್ತು ಚಾಲಕರಿಂದ ಕಮಿಷನ್ ವಸೂಲಿಯಂತಹ ಸಮಸ್ಯೆಗಳಿಂದಾಗಿ ಅನೇಕರು ಬೇಸರಗೊಂಡಿದ್ದರು.

ಇಂತಹ ಸಮಸ್ಯೆಗಳಿಗೆ ಇನ್ಮುಂದೆ ಬ್ರೇಕ್ ಬೀಳುವ ಸಮಯ ಬಂದಿದೆ! ಖಾಸಗಿ ಕ್ಯಾಬ್ ಸಂಸ್ಥೆಗಳ ಅನಿಯಮಿತ ದರಗಳಿಗೆ ಕಡಿವಾಣ ಹಾಕಲು, ನೇರವಾಗಿ ಕೇಂದ್ರ ಸರ್ಕಾರವೇ ದೇಶದ ಮೊದಲ ಸಹಕಾರಿ ಕ್ಯಾಬ್ ಸೇವೆ – ‘ಭಾರತ್ ಟ್ಯಾಕ್ಸಿ’ (Bharat Taxi) ಯನ್ನು ಪರಿಚಯಿಸಿದೆ. ನವೆಂಬರ್ ತಿಂಗಳಿನಿಂದ ಈ ಸೇವೆಗಳು ಲಭ್ಯವಾಗಲಿವೆ.
Bharat Taxi – ಚಾಲಕರಿಗೆ ಸಂಪೂರ್ಣ ಆದಾಯ, ಗ್ರಾಹಕರಿಗೆ ನ್ಯಾಯಯುತ ದರ
ಭಾರತ್ ಟ್ಯಾಕ್ಸಿಯ ಪ್ರಮುಖ ವೈಶಿಷ್ಟ್ಯವೆಂದರೆ, ಇದು ಸಹಕಾರಿ ಮಾದರಿಯಲ್ಲಿ (Cooperative Model) ಕಾರ್ಯನಿರ್ವಹಿಸುತ್ತದೆ. ಓಲಾ-ಊಬರ್‌ನಲ್ಲಿ ಚಾಲಕರು ತಮ್ಮ ಆದಾಯದ ಶೇ. 25ರಷ್ಟು ಕಮಿಷನ್ ನೀಡಬೇಕಿತ್ತು. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಕಮಿಷನ್ ನೀಡುವ ಅಗತ್ಯವಿಲ್ಲ. ಬದಲಾಗಿ, ಚಾಲಕರು ಸದಸ್ಯತ್ವದ ಅಡಿಯಲ್ಲಿ ಕೇವಲ ಸಣ್ಣ ಶುಲ್ಕವನ್ನು ಪಾವತಿಸಿದರೆ ಸಾಕು. ಇಲ್ಲಿನ ಎಲ್ಲಾ ಲಾಭಗಳು ನೇರವಾಗಿ ಚಾಲಕರಿಗೆ (ಸಾಥಿಗಳಿಗೆ) ಸೇರುತ್ತವೆ. ಚಾಲಕರು ಕೇವಲ ಉದ್ಯೋಗಿಗಳಾಗಿರದೆ, ಸಹಕಾರಿಯ ಸಹ-ಮಾಲೀಕರಾಗಿರುತ್ತಾರೆ. ಖಾಸಗಿ ಸಂಸ್ಥೆಗಳಂತೆ ಭಾರತ್ ಟ್ಯಾಕ್ಸಿಯಲ್ಲಿ ಅನಿಯಮಿತ ದರ ಹೆಚ್ಚಳ (Surge Pricing) ಇರುವುದಿಲ್ಲ. ನ್ಯಾಯಯುತ ಮತ್ತು ಪಾರದರ್ಶಕ ದರ ನಿಗದಿ ಮಾಡಲಾಗುತ್ತದೆ. ಈ ಹೊಸ ವ್ಯವಸ್ಥೆಯಿಂದ ಚಾಲಕರು ಹೆಚ್ಚಿನ ಆದಾಯ ಗಳಿಸಬಹುದು ಮತ್ತು ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಸೇವೆ ಲಭ್ಯವಾಗಲಿದೆ.
Bharat Taxi – ಭಾರತ್ ಟ್ಯಾಕ್ಸಿಯ ರೋಲ್‌ಔಟ್ ಮತ್ತು ಗುರಿ
ಕೇಂದ್ರ ಸಹಕಾರ ಸಚಿವಾಲಯ (Union Ministry of Cooperation) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ (National e-Governance Division – NeGD) ಜಂಟಿಯಾಗಿ ಈ ಮಹತ್ವದ ಯೋಜನೆಯನ್ನು ಅಭಿವೃದ್ಧಿಪಡಿಸಿವೆ. ಮೊದಲ ಹಂತವಾಗಿ, ನವೆಂಬರ್ ತಿಂಗಳಿನಿಂದ ದೆಹಲಿಯಲ್ಲಿ ಈ ಸೇವೆಗಳು ಪ್ರಾರಂಭವಾಗಲಿವೆ. ಆರಂಭದಲ್ಲಿ 650 ಸ್ವಂತ ವಾಹನಗಳನ್ನು ಹೊಂದಿರುವ ಚಾಲಕರು ಸೇವೆಗಳನ್ನು ಒದಗಿಸಲಿದ್ದಾರೆ. Read this also : ಬೆಂಗಳೂರಿನ ರಸ್ತೆ ಮಧ್ಯೆಯೇ ಕ್ಯಾಬ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್, ವೈರಲ್ ಆದ ವಿಡಿಯೋ…!
Bharat Taxi – ಮಾರ್ಚ್ 2026ರ ವೇಳೆಗೆ ಎಲ್ಲಾ ಮೆಟ್ರೋಗಳಲ್ಲಿ ಭಾರತ್ ಟ್ಯಾಕ್ಸಿ
ಈ ಪೈಲಟ್ ಯೋಜನೆ ಯಶಸ್ವಿಯಾದರೆ, ಡಿಸೆಂಬರ್ ತಿಂಗಳಿನಲ್ಲಿ ದೇಶದಾದ್ಯಂತ ಈ ಸೇವೆಗಳು ಲಭ್ಯವಾಗುವಂತೆ ಮಾಡುವ ಗುರಿ ಇದೆ. ಕೇಂದ್ರ ಸರ್ಕಾರವು 2026ರ ಮಾರ್ಚ್ ವೇಳೆಗೆ ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಭಾರತ್ ಟ್ಯಾಕ್ಸಿಯನ್ನು ಲಭ್ಯವಾಗುವಂತೆ ಮಾಡಲು ಯೋಜಿಸಿದೆ. 2030ರ ವೇಳೆಗೆ ಒಟ್ಟು ಒಂದು ಲಕ್ಷ ಚಾಲಕರನ್ನು ಈ ವೇದಿಕೆಯಲ್ಲಿ ಸೇರಿಸಲು ಉದ್ದೇಶಿಸಲಾಗಿದೆ.

ದ್ವಿಚಕ್ರ ವಾಹನಗಳು (ಬೈಕ್ ಟ್ಯಾಕ್ಸಿ), ಆಟೋಗಳು ಮತ್ತು ನಾಲ್ಕು ಚಕ್ರದ ವಾಹನಗಳು ಸಹ ಈ ಸಹಕಾರ್ ಟ್ಯಾಕ್ಸಿಯ (Sahakar Taxi) ಭಾಗವಾಗಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಈ ಹಿಂದೆ ಮಾಹಿತಿ ನೀಡಿದ್ದರು. ಒಟ್ಟಾರೆಯಾಗಿ, ಖಾಸಗಿ ಕ್ಯಾಬ್ ಸೇವೆಗಳಿಗೆ ಪ್ರಬಲ ಪರ್ಯಾಯವಾಗಿ ಮತ್ತು ಸಾರ್ವಜನಿಕ ಸೇವಾ ಮನೋಭಾವದೊಂದಿಗೆ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ (Sahakar Taxi Cooperative Limited) ಅಡಿಯಲ್ಲಿ ಈ ‘ಭಾರತ್ ಟ್ಯಾಕ್ಸಿ’ ಸೇವೆ ಬರಲಿದೆ. ಇದು ಭಾರತದ ಮೊಬಿಲಿಟಿ ಕ್ಷೇತ್ರದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.
