Friday, November 22, 2024

BESCOM : ಇನ್ನು ಮುಂದೆ ಬಿಲ್ ಬಂದ 30 ದಿನದೊಳಗೆ ಪಾವತಿಸದಿದ್ದರೇ, ವಿದ್ಯುತ್ ಸಂಪರ್ಕ ಕಟ್ ಎಂದ ಬೆಸ್ಕಾಂ….!

ಬೆಸ್ಕಾಂ ಗ್ರಾಹಕರಿಗೆ ಇಲ್ಲೊಂದು ಪ್ರಮುಖ (BESCOM) ಸುದ್ದಿಯಿದೆ. ಪ್ರತಿ ಮಾಹೆ ನಾವು ಬಳಕೆ ಮಾಡುವ ವಿದ್ಯುತ್ ಗೆ ಬೆಸ್ಕಾಂ ಬಿಲ್ ನೀಡುತ್ತಿದ್ದು, ಈ ಬಿಲ್ ಬಂದ 30 ದಿನದೊಳಗೆ ಪಾವತಿಸದೇ ಇದ್ದರೇ ಹಾಗೂ ಹೆಚ್ಚುವತಿ ಭದ್ರತಾ ಠೇವಣಿ ಮೊತ್ತ ಪಾವತಿಸದೇ ಇದ್ದರೇ KERC ನಿಯಾಮವಳಿಯಂತೆ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು (BESCOM)ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿಯಮ ಸೆ.1 ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಸೆ.1 ರಿಂದ ಜಾರಿಯಾಗಲಿದೆ ಈ ಹೊಸ ನಿಯಮ:

ಬೆಸ್ಕಾಂ (BESCOM)ನ ಗೃಹ, ವಾಣಿಜ್ಯ, ಅಪಾರ್ಟ್‌ಮೆಂಟ್ ಗಳು ಹಾಗೂ ತಾತ್ಕಲಿಕ ವಿದ್ಯುತ್ ಸಂಪರ್ಕ ಪಡೆದಂತಹ ಗ್ರಾಹಕರು ತಮ್ಮ ವಿದ್ಯುತ್ ಬಳಕೆ ಬಿಲ್ ಬಂದ 30 ದಿನದ ಒಳಗೆ ಬಿಲ್ ಪಾವತಿಸಬೇಕು. (BESCOM)ಈ ನಿಯಮ ಸೆ.1 ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಬೆಸ್ಕಾಂ ತೀರ್ಮಾನಿಸಿದೆ. ಮೀಟರ್‍ ರೀಡಿಂಗ್ ಗೆ ಬರುವ ದಿನ ಅಂದರೇ ಪ್ರತಿ ಮಾಹೆಯ (BESCOM)ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಬೆಸ್ಕಾಂ ಗ್ರಾಹಕರು ಅವಧಿಯೊಳಗೆ ವಿದ್ಯುತ್ ಬಳಕೆಯ ಶುಲ್ಕ ಪಾವತಿಸುವಂತೆ ಬೆಸ್ಕಾಂ (BESCOM)ಪ್ರಕಟಣೆಯ ಮೂಲಕ ಕೋರಿದೆ.

Pay Bill Within 30 Days or Face Electricity Disconnection
Bescom announcement

ಇನ್ನೂ ಇಲ್ಲಿಯವರೆಗೂ ಪ್ರತಿ ಮಾಹೆಯ ಮೊದಲು (BESCOM)15 ದಿನದಲ್ಲಿ ಮೀಟರ್‍ ರೀಡಿಂಗ್ ಬಳಿಕ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್ ಮೆನ್ ಗಳ ಜೊತೆಗೆ ರೀಡಿಂಗ್ ಮಾಡುವವರು ಅದೇ ಸ್ಥಳಕ್ಕೆ ಹೋಗುತ್ತಿದ್ದರು. ಇನ್ನೂ ಮುಂದೆ ಮಾಪಕ ಓದುಗರೊಂದಿಗೆ ಇರುವ (BESCOM)ಲೈನ್ ಮೆನ್ ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ. (BESCOM)ಇನ್ನೂ ವಿದ್ಯುತ್ ಬಿಲ್ ಪಾವತಿಗೆ ಅಂತಿಮ ಅಂದರೇ ಬಿಲ್ ನೀಡಿದ 15 ದಿನಗಳು ಯಾವುದೇ ಬಡ್ಡಿಯಿಲ್ಲದೇ 15 ದಿನ ಕಾಲಾವಕಾಶ ನೀಡಲಾಗುತ್ತದೆ. (BESCOM) ಅಂತಿಮ ದಿನಾಂಕದ ಬಳಿಕ ಬಡ್ಡಿಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಬಿಲ್ ಪಾವತಿಸದಿದ್ದಲ್ಲಿ ಮುಂದಿನ ರೀಡಿಂಗ್ ದಿನವೇ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಬೆಸ್ಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ಅನೇಕ ಗ್ರಾಹಕರು ಆನ್ ಲೈನ್ ಮೂಲಕ (BESCOM)ವಿದ್ಯುತ್ ಬಿಲ್ ಪಾವತಿ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸಾಫ್ಟ್ ವೇರ್‍ ನಲ್ಲಿ ವಿವರ ನಮೂದಾಗದೇ ಇದ್ದಾಗ ಬಿಲ್ ಬಾಕಿ ತೋರಿಸುತ್ತಿರುತ್ತದೆ. ಅಂತಹವರು (BESCOM)ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಕ್ಕೆ ಮುಂದಾದರೇ, ತಾವು ಪಾವತಿಸಿದ ಬಿಲ್ ರಸೀದಿಯನ್ನು ಸಿಬ್ಬಂದಿಗೆ ತೋರಿಸಿ ಬಿಲ್ ಕಡಿತ ಮಾಡುವುದನ್ನು ತಪ್ಪಿಸಬಹುದು. ಆದ್ದರಿಂದ ಬೆಸ್ಕಾಂ ಸಿಬ್ಬಂದಿಯೊಂದಿಗೆ (BESCOM) ಸಹಕರಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!