ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಂಬಿದ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪತ್ನಿಯೊಬ್ಬಳು (Bengaluru Wife Escape Case) ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವುದು ಒಂದು ಕಡೆಯಾದರೆ, ಆಕೆ ಹೋಗುವ ಮುನ್ನ ನಡೆಸಿದ್ದಾಳೆ ಎನ್ನಲಾದ ಸಂಚು ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ಬಗ್ಗೆ ಪತಿ ಶರತ್ ಕುಮಾರ್ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪತ್ನಿಯ ವಿರುದ್ಧ ಹಲವು ಶಾಕಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.

Bengaluru Wife Escape Case – ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ಲಾ ಪತ್ನಿ?
ಪತಿ ಶರತ್ ಕುಮಾರ್ ಮಾಡಿರುವ ಅತ್ಯಂತ ದೊಡ್ಡ ಆರೋಪವೆಂದರೆ ಪತ್ನಿ ಪ್ರಿಯಾಂಕಾ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಾಳೆ ಎಂಬುದು. ತಾವು ಮತ್ತು ಮಕ್ಕಳು ಗಾಢ ನಿದ್ದೆಗೆ ಜಾರುವಂತೆ ಮಾಡಿ, ಆಕೆ ಮನೆಯಿಂದ (Bengaluru Wife Escape Case) ಪರಾರಿಯಾಗಿದ್ದಾಳೆ ಎಂದು ಶರತ್ ದೂರಿದ್ದಾರೆ. ಸಂಸಾರದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಕ್ಷಣಿಕ ಸುಖಕ್ಕಾಗಿ ಮತ್ತು ಪ್ರಿಯಕರನ ಮೋಹಕ್ಕೆ ಬಿದ್ದು ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ತಳ್ಳಿದ್ದಾಳೆ ಎಂದು ನೊಂದ ಪತಿ ಆರೋಪಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿದೆ ಕಿಲಾಡಿ ಪತ್ನಿಯ ಮಾಸ್ಟರ್ ಪ್ಲಾನ್
ಈ ಎಸ್ಕೇಪ್ ಪ್ರಕರಣ ಕೇವಲ ಆಕಸ್ಮಿಕವಾಗಿ ನಡೆದಿಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ಸಂಚು ಎಂಬುದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗುತ್ತಿದೆ. ಏಪ್ರಿಲ್ 11ರ ತಡರಾತ್ರಿ 11:57ರ ಸುಮಾರಿಗೆ ಪ್ರಿಯಾಂಕಾ ಮನೆಯಿಂದ ಹೊರಬಂದಿದ್ದಾಳೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಒಂದು ಕೈಯಲ್ಲಿ ಕಸದ ಬಕೆಟ್ ಹಿಡಿದುಕೊಂಡಿದ್ದರೆ, (Bengaluru Wife Escape Case) ಮತ್ತೊಂದು ಕೈಯಲ್ಲಿ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಬಟ್ಟೆ ಬ್ಯಾಗನ್ನು ಹಿಡಿದಿದ್ದಾಳೆ. ಕಸ ಎಸೆಯಲು ಹೋಗುವವಳಂತೆ ನಟಿಸಿ ತನ್ನ ಪ್ರಿಯಕರನ ಜೊತೆ ಓಡಿಹೋಗುವ ಆಕೆಯ ದೃಶ್ಯ ಈಗ ಪೊಲೀಸರ ಕೈ ಸೇರಿದೆ. Read this also : ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಹಾಸನದ ಮಹಿಳೆ: ಅಜ್ಞಾತ ಸ್ಥಳದಿಂದ ಹರ್ಷಿತಾ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ?
ಕಟಿಂಗ್ ಶಾಪ್ ಪ್ರಭು ಜೊತೆಗಿನ ಅಕ್ರಮ ಸಂಬಂಧಕ್ಕೆ ಕುಟುಂಬ ಬಲಿ?
ಪ್ರಿಯಾಂಕಾಳ ಈ ನಿರ್ಧಾರದ ಹಿಂದೆ ಪ್ರಭು ಎಂಬಾತನ ಕೈವಾಡವಿದೆ ಎಂದು ಶರತ್ ಆರೋಪಿಸಿದ್ದಾರೆ. ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಜೊತೆಗೆ ಪ್ರಿಯಾಂಕಾ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಶರತ್ ಕೆಲಸಕ್ಕೆ ಹೋದ ಸಮಯದಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ಪ್ರಭು ಆಗಾಗ ಪ್ರಿಯಾಂಕಾಳ (Bengaluru Wife Escape Case) ಮೊಬೈಲ್‌ಗೆ ಕರೆನ್ಸಿ ಹಾಕಿಸಿಕೊಡುತ್ತಿದ್ದ ಎಂಬ ವಿಷಯವೂ ಪತಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ಶರತ್ ಹಲವು ಬಾರಿ ಪತ್ನಿಗೆ ಬುದ್ಧಿವಾದ ಹೇಳಿ, ಎಚ್ಚರಿಕೆ ನೀಡಿದ್ದರೂ ಸಹ ಆಕೆ ಕೇಳಿರಲಿಲ್ಲ ಎನ್ನುವುದು ಈಗ ಬೆಳಕಿಗೆ ಬಂದಿದೆ.

ಬಾಗಲಗುಂಟೆ ಪೊಲೀಸರಿಂದ ತನಿಖೆ ಚುರುಕು: ಮಕ್ಕಳ ಭವಿಷ್ಯದ ಬಗ್ಗೆ ಆತಂಕ
ಸದ್ಯ ಪತಿ ಶರತ್ ಕುಮಾರ್ ನೀಡಿದ ದೂರಿನನ್ವಯ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇಬ್ಬರು ಮುಗ್ಧ (Bengaluru Wife Escape Case) ಮಕ್ಕಳನ್ನು ಬಿಟ್ಟು ಹೋಗಿರುವ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಪ್ರಭು ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಶರತ್ ಕಂಗಾಲಾಗಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಚಿಕ್ಕ ಕಸದ ಬಕೆಟ್ ನೆಪ ಇಟ್ಟುಕೊಂಡು ಇಡೀ ಸಂಸಾರಕ್ಕೇ ಕೊಳ್ಳಿ ಇಟ್ಟು ಹೋದ ಪತ್ನಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
