Vidhana Soudha – ಕರ್ನಾಟಕದ ಆಡಳಿತ ಶಕ್ತಿಕೇಂದ್ರ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ಭವ್ಯ ವಿಧಾನಸೌಧದ ಒಳಗೆ ಇನ್ನು ಮುಂದೆ ಜನಸಾಮಾನ್ಯರು ಕೂಡ ಕಾಲಿಡಬಹುದು! ಹೌದು, ದೂರದ ಊರಿನಿಂದ ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ವಿಧಾನಸೌಧವನ್ನು ಹತ್ತಿರದಿಂದ ನೋಡಬೇಕೆಂಬ ಆಸೆ ಇರುತ್ತದೆ. ಇಷ್ಟು ದಿನ ಕೇವಲ ಹೊರಗಿನಿಂದಲೇ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದವರಿಗೆ ಈಗ ಸಿಹಿಸುದ್ದಿ. ರಾಜ್ಯ ಸರ್ಕಾರ ‘ಮಾರ್ಗದರ್ಶಿ ಪ್ರವಾಸ’ (ಗೈಡ್ ಟೂರ್) ಯೋಜನೆಯಡಿ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಇಂದಿನಿಂದಲೇ (ಜೂನ್ 2, 2025) ಈ ವಿಧಾನಸೌಧ ಪ್ರವಾಸ ಅಧಿಕೃತವಾಗಿ ಆರಂಭವಾಗಿದೆ!
Vidhana Soudha – ವಿಧಾನಸೌಧಕ್ಕೆ ಈಗ ನಿಮ್ಮ ಪ್ರವೇಶ: ಏನಿದು ‘ಮಾರ್ಗದರ್ಶಿ ಪ್ರವಾಸ’?
ವಿಧಾನಸೌಧ ವೀಕ್ಷಣೆಯ ಈ ಹೊಸ ಯೋಜನೆಯಡಿ, ಸಾರ್ವಜನಿಕರು ವಿಧಾನಸೌಧದ ಭವ್ಯತೆಯನ್ನು ಹತ್ತಿರದಿಂದ ಅನುಭವಿಸಬಹುದು. ಮಾರ್ಗದರ್ಶಿಗಳು ಕಟ್ಟಡದ ಇತಿಹಾಸ, ಮಹತ್ವ, ವಾಸ್ತುಶಿಲ್ಪ, ಅಧಿವೇಶನ ಸಭಾಂಗಣ ಮತ್ತು ಭವ್ಯ ಮೆಟ್ಟಿಲುಗಳ ಬಗ್ಗೆ ಸಮಗ್ರ ವಿವರಣೆ ನೀಡುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಾರ್ಗದರ್ಶನ ಲಭ್ಯವಿದೆ. ಇದು ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶ.
Vidhana Soudha – ಯಾವಾಗ ಮತ್ತು ಎಷ್ಟು ಜನರಿಗೆ ಪ್ರವೇಶ?
- ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ವಿಧಾನಸೌಧ ವೀಕ್ಷಣೆಗೆ ಅವಕಾಶವಿದೆ.
- ಪ್ರತಿ ದಿನ 30 ಸದಸ್ಯರ 10 ತಂಡಗಳಿಗೆ, ಅಂದರೆ ಒಟ್ಟು 300 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
- ಪ್ರತಿ ತಂಡಕ್ಕೆ 90 ನಿಮಿಷಗಳ ಕಾಲ ವೀಕ್ಷಣೆಗೆ ಅವಕಾಶ ಸಿಗುತ್ತದೆ.
- ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವೀಕ್ಷಣೆಗೆ ಅವಕಾಶವಿದೆ.
Vidhana Soudha – ವಿಧಾನಸೌಧ ಪ್ರವಾಸಕ್ಕೆ ಟಿಕೆಟ್ ಬುಕ್ಕಿಂಗ್ ಎಲ್ಲಿ? ದರ ಎಷ್ಟು?
ವಿಧಾನಸೌಧ ಪ್ರವಾಸಕ್ಕೆ ಟಿಕೆಟ್ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಕಾಯ್ದಿರಿಸಬೇಕು.
- ಟಿಕೆಟ್ ಬುಕ್ಕಿಂಗ್ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
- ಟಿಕೆಟ್ ದರ:
- 15 ವರ್ಷದೊಳಗಿನ ಮಕ್ಕಳು ಮತ್ತು SSLC ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.
- 16 ವರ್ಷ ಮೇಲ್ಪಟ್ಟ ಪ್ರವಾಸಿಗರಿಗೆ ತಲಾ 50 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
Read this also : ನಿಮ್ಮ ಮೊಬೈಲ್ ಸುರಕ್ಷತೆಗೆ ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ಅಥವಾ ಪಿನ್ – ಯಾವುದು ಬೆಸ್ಟ್?
ಪ್ರಮುಖ ಸೂಚನೆಗಳು:
- ಪ್ರವಾಸ ಆರಂಭಕ್ಕೆ 20 ನಿಮಿಷ ಮೊದಲು ಹಾಜರಿರಬೇಕು.
- ಟಿಕೆಟ್ ಬುಕ್ ಮಾಡಿದವರು ಕಡ್ಡಾಯವಾಗಿ ಗುರುತಿನ ಚೀಟಿ (ID proof) ತರಬೇಕು.
- ವಿಧಾನಸೌಧದ ಮೂರನೇ ಪ್ರವೇಶ ದ್ವಾರದ ಮೂಲಕ ಪ್ರವಾಸ ಆರಂಭವಾಗುತ್ತದೆ.
- ಕೆಲವು ನಿಗದಿತ ಸ್ಥಳಗಳಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶವಿರುತ್ತದೆ.