ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೆ ಮಾಡಿದರೆ ಹೇಗೆ? ಹೌದು, ಇದು ಇನ್ಸ್‌ಸ್ಟಾಗ್ರಾಮ್ (Instagram) ರೀಲ್ಸ್ ಹುಚ್ಚಿಗೆ ಬಲಿಯಾದ ಮತ್ತೊಂದು ದಾಂಪತ್ಯದ ಕಥೆ. ರೀಲ್ಸ್ ರಾಣಿಯ ಮೋಹದ ಬಲೆಗೆ ಬಿದ್ದ ಪೊಲೀಸ್ ಪೇದೆಯೊಬ್ಬ, ತನ್ನಿಬ್ಬರು ಮಕ್ಕಳನ್ನೂ ಮರೆತು, 15 ವರ್ಷ ಸಂಸಾರ ನಡೆಸಿದ್ದ ಮತ್ತೊಬ್ಬರ ಹೆಂಡತಿಯನ್ನು ಕರೆದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ಕರ್ನಾಟಕ ಮೂಲದ, ಹೆಚ್.ಎಸ್.ಆರ್ ಲೇಔಟ್ (HSR Layout) ಠಾಣೆಯ ಹೊಯ್ಸಳ ಡ್ರೈವರ್ ಆಗಿದ್ದ ರಾಘವೇಂದ್ರ ಇದೀಗ ಖಾಕಿ ಕಳಚಿ, ಲವರ್ ಜೊತೆ ಎಸ್ಕೇಪ್ ಆಗಿ ಸುದ್ದಿಯಾಗಿದ್ದಾನೆ.

Bengaluru – ಇನ್‌ಸ್ಟಾಗ್ರಾಮ್ ಪರಿಚಯ, ಪ್ರೀತಿಯಾದ ಕಥೆ!
ಮೈಸೂರು ಮೂಲದ ರೀಲ್ಸ್ ರಾಣಿ ಮೋನಿಕಾ ಮತ್ತು ಕಾನ್ಸ್‌ಟೇಬಲ್ ರಾಘವೇಂದ್ರನಿಗೆ ಪರಿಚಯವಾಗಿದ್ದು ಕಳೆದ ಜೂನ್ ತಿಂಗಳಲ್ಲಿ. ಅದು ಇನ್ಸ್‌ಸ್ಟಾಗ್ರಾಮ್ ಮೂಲಕ. ರೀಲ್ಸ್ ನೋಡುತ್ತಾ ಶುರುವಾದ ಈ ಪರಿಚಯ, ಕೇವಲ ಎರಡೇ ತಿಂಗಳಲ್ಲಿ ಗಾಢವಾದ ಪ್ರೇಮಕ್ಕೆ ತಿರುಗಿದೆ. ನಂತರ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ಹಗಲು-ರಾತ್ರಿ ಎನ್ನದೆ ಗಂಟೆಗಟ್ಟಲೆ ಮಾತನಾಡಿ, ಊರು ಸುತ್ತಾಡಿದ್ದಾರೆ. ರಾಘವೇಂದ್ರನಿಗೂ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
Bengaluru – ಗಂಡನನ್ನೇ ಟ್ರ್ಯಾಪ್ ಮಾಡಿದ ಕಿಲಾಡಿ ಲೇಡಿ!
ಮೋನಿಕಾ ಈಗಾಗಲೇ ಮಂಜುನಾಥ್ ಎಂಬುವರ ಜೊತೆ ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ರಾಘವೇಂದ್ರನ ಮೇಲಿನ ಮೋಹಕ್ಕೆ ಬಿದ್ದ ಮೋನಿಕಾ, ಮೂರು ತಿಂಗಳ ಹಿಂದೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಹೋಗಿ, ಪತಿ ಮಂಜುನಾಥ್ ವಿರುದ್ಧವೇ ಸುಳ್ಳು ದೂರು ನೀಡಿದ್ದಾಳೆ. “ನನ್ನ ಗಂಡನಿಗೆ ಬುದ್ಧಿ ಹೇಳಿ” ಎಂದು ಪೊಲೀಸರ ಬಳಿ ನಾಟಕವಾಡಿದ್ದಾಳೆ. ಪೊಲೀಸರು ವಿಚಾರಣೆಗೆಂದು ಪತಿ ಮಂಜುನಾಥ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಇತ್ತ ಪತಿ ಪೊಲೀಸ್ ಠಾಣೆಯಲ್ಲಿದ್ದರೆ, ಅತ್ತ ಮೋನಿಕಾ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ ಹಾಗೂ 1.80 ಲಕ್ಷ ರೂಪಾಯಿ ಹಣದೊಂದಿಗೆ ರಾಘವೇಂದ್ರನ ಜೊತೆ ಎಸ್ಕೇಪ್ ಆಗಿದ್ದಾಳೆ.
Read this also : ನಡು ರಸ್ತೆಯಲ್ಲೇ ಬಾಲಕಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ; ಪ್ರಶ್ನಿಸಿದವನಿಗೆ ಕಾದಿತ್ತು ಬಿಗ್ ಶಾಕ್! ವೈರಲ್ ವಿಡಿಯೋ ಇಲ್ಲಿದೆ
Bengaluru – ಸಿಕ್ಕಿಬಿದ್ದಿದ್ದು ಹೇಗೆ?
ಪತಿ ಮಂಜುನಾಥ್ ಅವರು ಮೋನಿಕಾಗೆ ಫೋನ್ ಮಾಡಿದಾಗ ಆಕೆ ರಿಸೀವ್ ಮಾಡಿಲ್ಲ. ಅನುಮಾನ ಬಂದು ಪೊಲೀಸರು ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಕಾನ್ಸ್‌ಟೇಬಲ್ ರಾಘವೇಂದ್ರನ ಜೊತೆಗಿನ ಅಕ್ರಮ ಸಂಬಂಧದ ಗುಟ್ಟು ರಟ್ಟಾಗಿದೆ. ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ರಾಘವೇಂದ್ರನನ್ನು ಅಮಾನತು (Suspended) ಮಾಡಲಾಗಿದೆ.

ಮಗನ ಕೊಲೆ ಬೆದರಿಕೆ ಹಾಕಿದ ಪೊಲೀಸಪ್ಪ!
ಕೆಲಸದಿಂದ ಸಸ್ಪೆಂಡ್ ಆದರೂ ರಾಘವೇಂದ್ರನ ಸೊಕ್ಕು ಮಾತ್ರ ಮುರಿದಿಲ್ಲ. “ಎರಡ್ಮೂರು ತಿಂಗಳಲ್ಲಿ ಮತ್ತೆ ಡ್ಯೂಟಿಗೆ ಬರ್ತೀನಿ” ಎಂದು ಮಂಜುನಾಥ್ ಅವರಿಗೆ ಅವಾಜ್ ಹಾಕಿದ್ದಾನೆ. ಅಷ್ಟೇ ಅಲ್ಲದೆ, “ನಿನ್ನ 12 ವರ್ಷದ ಮಗನನ್ನ ಕೊಲೆ ಮಾಡುತ್ತೇನೆ, ಈ ವಿಷಯವನ್ನು ಯಾರಿಗೂ ಹೇಳಬಾರದು” ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. “ನನ್ನ ಸಂಸಾರ ಹಾಳು ಮಾಡಿದ ಇವನನ್ನು ಕೇವಲ ಅಮಾನತು ಮಾಡಿದರೆ ಸಾಲದು, ಇಲಾಖೆಯಿಂದಲೇ ವಜಾ (Dismiss) ಮಾಡಬೇಕು” ಎಂದು ನೊಂದ ಪತಿ ಮಂಜುನಾಥ್ ಕಣ್ಣೀರು ಹಾಕುತ್ತಾ ಆಗ್ರಹಿಸಿದ್ದಾರೆ.
