Bengaluru – ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮತ್ತು ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ನಡೆದಿದೆ. ನಾಗೊಂಡನಹಳ್ಳಿ ನಿವಾಸಿಗಳಾದ 46 ವರ್ಷದ ರಚಿತಾ ರೆಡ್ಡಿ ಮತ್ತು ಅವರ 24 ವರ್ಷದ ಪುತ್ರಿ ಶ್ರೀಜಾ ರೆಡ್ಡಿ ಒಂದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ಆಘಾತವನ್ನುಂಟುಮಾಡಿದೆ.

Bengaluru – ಘಟನೆಯ ವಿವರ
ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಮೊದಲು ಮಗಳು ಶ್ರೀಜಾ ರೆಡ್ಡಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವನ್ನು ಕಂಡ ತಾಯಿ ರಚಿತಾ ರೆಡ್ಡಿ ತೀವ್ರ ಆಘಾತಕ್ಕೊಳಗಾಗಿ, ಇದೇ ದುಡುಕಿನ ನಿರ್ಧಾರ ಕೈಗೊಂಡು ಮಗಳ ಹಾದಿ ತುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಆಂಧ್ರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯೊಂದರಲ್ಲಿ ಡೇಟಾ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Bengaluru – ಮಾನಸಿಕ ಖಿನ್ನತೆ ಶಂಕೆ: ಡೆತ್ ನೋಟ್ ಪತ್ತೆ
ಶ್ರೀಜಾ ರೆಡ್ಡಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. “ನನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟು, ತಮ್ಮ ಕೋಣೆಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Read this also : ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಇನ್ನಿಲ್ಲ: ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟ
Bengaluru – ತಾಯಿ ರಚಿತಾ ರೆಡ್ಡಿ ಅವರ ಕೊನೆಯ ಕ್ಷಣಗಳು
ಮಗಳ ಆತ್ಮಹತ್ಯೆಯನ್ನು ಕಂಡ ತಾಯಿ ರಚಿತಾ ರೆಡ್ಡಿ ತೀವ್ರವಾಗಿ ನೊಂದಿದ್ದಾರೆ. ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಮಗಳು ಆತ್ಮಹತ್ಯೆ ಮಾಡಿಕೊಂಡ ನಂತರ, ರಚಿತಾ ರೆಡ್ಡಿ ತಮ್ಮ ಪತಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ. “ನನಗೂ ಬದುಕಲು ಇಷ್ಟವಿಲ್ಲ” ಎಂದು ಪತಿಯೊಂದಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ನಂತರ, ಮಗಳ ದೇಹವನ್ನು ಕೆಳಗೆ ಇಳಿಸಿ, ಅದೇ ಫ್ಯಾನ್‌ಗೆ ತಾವೂ ನೇಣು ಬಿಗಿದುಕೊಂಡು ಪ್ರಾಣತ್ಯಾಗ ಮಾಡಿದ್ದಾರೆ.

Bengaluru – ಪತಿ ಮನೆಗೆ ಬರುವಷ್ಟರಲ್ಲಿ ಅವರಿಬ್ಬರೂ ಇರಲಿಲ್ಲ
ಶ್ರೀಜಾ ರೆಡ್ಡಿ ಅವಿವಾಹಿತರಾಗಿದ್ದರು. ತಂದೆ ಮನೆಗೆ ಬರುವಷ್ಟರಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ಕುಟುಂಬಕ್ಕೆ ಅಘಾತವನ್ನುಂಟುಮಾಡಿದೆ. ಸದ್ಯ, ವೈಟ್‌ಫೀಲ್ಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
