Honey Trap : ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್ ಹನಿಟ್ರ್ಯಾಪ್ ಗ್ಯಾಂಗ್ ಬಂಧನ: ಒಂದು ಕಿಸ್ಗೆ 50 ಸಾವಿರ ರೂ. ಚಾರ್ಜ್, ಲಕ್ಷಾಂತರ ರೂ. ಸುಲಿಗೆ…!

Honey Trap – ಬೆಂಗಳೂರು ನಗರದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಪ್ರೀ-ಪ್ರೈಮರಿ ಶಾಲೆಯೊಂದನ್ನು ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ಎಂಬಾಕೆ ಒಂದೇ ಒಂದು ಮುತ್ತಿಗೆ (ಕಿಸ್) 50 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ದುಬಾರಿ ಮುತ್ತಿನ ಹಿಂದೆ ಒಂದು ದೊಡ್ಡ ಹನಿಟ್ರ್ಯಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಈ ಗ್ಯಾಂಗ್‌ನ ಮೂವರು ಆರೋಪಿಗಳಾದ ಶ್ರೀದೇವಿ, ಸಾಗರ್ ಮತ್ತು ಗಣೇಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ.

Honey Trap - ಬೆಂಗಳೂರು ಹನಿಟ್ರ್ಯಾಪ್ ಶಿಕ್ಷಕಿ ಮತ್ತು ಸುಲಿಗೆ ಗ್ಯಾಂಗ್ – ಸಿಸಿಬಿ ತನಿಖೆ

Honey Trap – ಶಿಕ್ಷಕಿಯ ದುಬಾರಿ ಕಿಸ್‌ ಕಹಾನಿ ಏನು?

ಶ್ರೀದೇವಿ ಬೆಂಗಳೂರಿನಲ್ಲಿ ಖಾಸಗಿ ಪ್ರೀ-ಪ್ರೈಮರಿ ಶಾಲೆಯೊಂದನ್ನು ನಡೆಸುತ್ತಿದ್ದಳು. ಈ ಶಾಲೆಗೆ ತನ್ನ ಮಕ್ಕಳನ್ನು ಕಳುಹಿಸುತ್ತಿದ್ದ ರಾಕೇಶ್ ವೈಷ್ಣವ್ ಎಂಬ ವ್ಯಕ್ತಿಯೊಂದಿಗೆ 2023ರಲ್ಲಿ ಶ್ರೀದೇವಿಗೆ ಪರಿಚಯವಾಗಿತ್ತು. ಶಾಲೆಯ ನಿರ್ವಹಣೆಗಾಗಿ ರಾಕೇಶ್‌ನಿಂದ ಶ್ರೀದೇವಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದಳು. 2024ರಲ್ಲಿ ಈ ಹಣವನ್ನು ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದಳು. ಆದರೆ, ರಾಕೇಶ್ ಹಣವನ್ನು ವಾಪಸ್ ಕೇಳಿದಾಗ, ಶ್ರೀದೇವಿ ತನ್ನ ಆರ್ಥಿಕ ಕಷ್ಟದ ಕಥೆ ಹೇಳಿ, ಶಾಲೆಗೆ ಪಾಲುದಾರನಾಗುವಂತೆ ಒತ್ತಾಯಿಸಿದ್ದಳು.

ಈ ಸಮಯದಲ್ಲಿ ರಾಕೇಶ್ ಮತ್ತು ಶ್ರೀದೇವಿ ನಡುವೆ ಸ್ನೇಹ ಬೆಳೆಯಿತು. ಇಬ್ಬರೂ ಜೊತೆಯಾಗಿ ಸುತ್ತಾಡಲು ಶುರು ಮಾಡಿದರು. ರಾಕೇಶ್ ತನ್ನ ಪತ್ನಿಗೆ ಗೊತ್ತಾಗದಂತೆ ಹೊಸ ಸಿಮ್ ಕಾರ್ಡ್ ಮತ್ತು ಫೋನ್ ಖರೀದಿಸಿ ಶ್ರೀದೇವಿಯ ಜೊತೆ ಸಂಪರ್ಕದಲ್ಲಿದ್ದನು. ಆದರೆ, 2025ರ ಜನವರಿಯಲ್ಲಿ ರಾಕೇಶ್ ಮತ್ತೆ ಹಣ ವಾಪಸ್ ಕೇಳಿದಾಗ, ಶ್ರೀದೇವಿ ಹೊಸ ತಂತ್ರವೊಂದನ್ನು ಹೂಡಿದಳು.

Honey Trap – 50 ಸಾವಿರಕ್ಕೊಂದು ಕಿಸ್: ಹನಿಟ್ರ್ಯಾಪ್ ಆರಂಭ

ಹಣ ಇಲ್ಲದೆ ಪರದಾಡುತ್ತಿದ್ದ ಶ್ರೀದೇವಿ, ರಾಕೇಶ್‌ಗೆ “ನಿನಗೆ ಏನು ಬೇಕು ಕೇಳು, ಕೊಡುತ್ತೇನೆ. ಹಣದ ವಿಚಾರವನ್ನು ಒಮ್ಮೆಗೆ ಮುಗಿಸೋಣ” ಎಂದು ಹೇಳಿದ್ದಳು. ಒಂದು ದಿನ ರಾಕೇಶ್‌ನ ಮನೆಗೆ ತೆರಳಿದ ಶ್ರೀದೇವಿ, ಒಂದು ಮುತ್ತು ಕೊಟ್ಟು 50 ಸಾವಿರ ರೂಪಾಯಿ ಪಡೆದುಕೊಂಡು ಹೊರಟುಬಿಟ್ಟಳು. ಇದಾದ ಬಳಿಕ, “ನನ್ನಂತಹ ಸುಂದರ ಹುಡುಗಿ ನಿನ್ನ ಜೊತೆ ಸಂಬಂಧದಲ್ಲಿರುತ್ತೇನೆ” ಎಂದು ಆಕರ್ಷಕ ಆಫರ್ ಕೊಟ್ಟು ಮತ್ತೆ 15 ಲಕ್ಷ ರೂಪಾಯಿ ಕೇಳಿದ್ದಳು.

ರಾಕೇಶ್ ಸ್ವಲ್ಪ ಶ್ರೀಮಂತನಾಗಿದ್ದರೂ, ಶ್ರೀದೇವಿಯ ಪದೇ ಪದೇ ಹಣದ ಡಿಮ್ಯಾಂಡ್‌ಗೆ ಬೇಸತ್ತು, ಆಕೆಯ ಸಂಪರ್ಕವನ್ನೇ ಮುರಿದುಬಿಟ್ಟನು. ಸಿಮ್ ಕಾರ್ಡ್ ಮುರಿದು ಎಸೆದು, ಆಕೆಯಿಂದ ದೂರವಾಗಲು ನಿರ್ಧರಿಸಿದನು. ಆದರೆ, ಮಾರ್ಚ್ 12ರಂದು ಶ್ರೀದೇವಿ ರಾಕೇಶ್‌ನ ಪತ್ನಿಗೆ ಕರೆ ಮಾಡಿ, “ನಿಮ್ಮ ಮಕ್ಕಳ ಸ್ಕೂಲ್ ಟಿಸಿ ಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ” ಎಂದು ಹೇಳಿದ್ದಾಳೆ.

Honey Trap - ಬೆಂಗಳೂರು ಹನಿಟ್ರ್ಯಾಪ್ ಶಿಕ್ಷಕಿ ಮತ್ತು ಸುಲಿಗೆ ಗ್ಯಾಂಗ್ – ಸಿಸಿಬಿ ತನಿಖೆ

Honey Trap – ಹನಿಟ್ರ್ಯಾಪ್ ಗ್ಯಾಂಗ್‌ನ ದೊಡ್ಡ ಆಟ

ರಾಕೇಶ್ ಶ್ರೀದೇವಿಯ ಶಾಲೆಗೆ ತೆರಳಿದಾಗ, ಅಲ್ಲಿ ಶ್ರೀದೇವಿಯ ಜೊತೆ ಸಾಗರ್ ಮತ್ತು ಗಣೇಶ್ ಎಂಬ ಇಬ್ಬರು ಇದ್ದರು. ಆಶ್ಚರ್ಯಕರ ಸಂಗತಿ ಏನೆಂದರೆ, ಶ್ರೀದೇವಿ ಸಾಗರ್ ಜೊತೆ ಎಂಗೇಜ್‌ಮೆಂಟ್ ಆಗಿದ್ದಳು. ಆದರೆ, ಗಣೇಶ್ ರಾಕೇಶ್‌ಗೆ ಬೆದರಿಕೆ ಹಾಕಿದನು: “ನೀನು ಶ್ರೀದೇವಿಯ ಜೊತೆ ಮಜಾ ಮಾಡ್ತಿದೀಯಾ? ಇದನ್ನು ಆಕೆಯ ತಂದೆ ಮತ್ತು ನಿನ್ನ ಹೆಂಡತಿಗೆ ತಿಳಿಸುತ್ತೇನೆ.” ರಾಕೇಶ್, “ನನಗೆ ಶ್ರೀದೇವಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ಗೊತ್ತಿರಲಿಲ್ಲ, ನಾನು ಆಕೆ ಜೊತೆ ಊಟ-ತಿಂಡಿ ಮಾಡಿದ್ದೇನಷ್ಟೇ” ಎಂದು ಸಮಜಾಯಿಷಿ ಕೊಟ್ಟನು.

Read this also : ಮದುವೆಯಾದ 2 ವಾರಕ್ಕೆ ಪತಿಯ ಕೊಲೆ: ಪ್ರಿಯಕರನ ಜೊತೆ ಸೇರಿ ಪತ್ನಿಯ ಪ್ಲಾನ್ – ಸಂಪೂರ್ಣ ವಿವರ…!

ಆದರೆ, ಸಾಗರ್ ಮತ್ತು ಗಣೇಶ್ ರಾಕೇಶ್‌ನನ್ನು ಕಾರಿನಲ್ಲಿ ಕರೆದೊಯ್ದು, ಮಹಾಲಕ್ಷ್ಮಿ ಲೇಔಟ್ ಬಳಿ 1 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದರು. “ಹಣ ಕೊಡದಿದ್ದರೆ ಶ್ರೀದೇವಿಯ ಜೊತೆ ಸಂಬಂಧದ ವಿಷಯವನ್ನು ನಿನ್ನ ಪತ್ನಿಗೆ ತಿಳಿಸಿ, ಅವಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಬೆದರಿಕೆ ಹಾಕಿದರು. ಗೊರಗುಂಟೆಪಾಳ್ಯದ ಬಳಿ ಕಾರು ನಿಲ್ಲಿಸಿ, ಕೊನೆಗೆ 20 ಲಕ್ಷ ರೂಪಾಯಿಗೆ ಒಪ್ಪಿಗೆಯಾಯಿತು. ಆದರೆ, ರಾಕೇಶ್ ಬಳಿ ಅಷ್ಟು ಹಣ ಇರಲಿಲ್ಲ. ಕೊನೆಗೆ 1.90 ಲಕ್ಷ ರೂಪಾಯಿ ಪಡೆದು ಆತನನ್ನು ಬಿಟ್ಟರು.

Honey Trap – ಬ್ಲ್ಯಾಕ್‌ಮೇಲ್ ಮಾಡಿದ ಖತರ್ನಾಕ್ ಟೀಚರಮ್ಮ

ಮಾರ್ಚ್ 17ರಂದು ಶ್ರೀದೇವಿ ಮತ್ತೆ ರಾಕೇಶ್‌ಗೆ ಕರೆ ಮಾಡಿ, 15 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದಳು. “ಹಣ ಕೊಟ್ಟರೆ ಅಶ್ಲೀಲ ವಿಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ, ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆ” ಎಂದು ಬ್ಲ್ಯಾಕ್‌ಮೇಲ್ ಮಾಡಿದಳು. ಇದರಿಂದ ಬೇಸತ್ತ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದನು. ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಶ್ರೀದೇವಿ, ಸಾಗರ್ ಮತ್ತು ಗಣೇಶ್ ಅವರನ್ನು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top