ಮಹತ್ವಾಕಾಂಕ್ಷೆ ಮತ್ತು ಹಣದ ಹಪಾಹಪಿ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ (Bengaluru Crime) ಎಂಬುದಕ್ಕೆ ಸಿಲಿಕಾನ್ ಸಿಟಿಯಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣವೇ ಸಾಕ್ಷಿ. ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವ ಹಠಕ್ಕೆ ಬಿದ್ದ ವ್ಯಕ್ತಿಯೊಬ್ಬ, ಅದಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಗೂ ಮುನ್ನ ಈತ ತನ್ನ ಊರಿನಲ್ಲಿ ಅದ್ದೂರಿಯಾಗಿ ‘ಬಾಡೂಟ’ ಹಾಕಿಸಿದ್ದ ಎಂಬ ವಿಷಯ ಈಗ ಬಯಲಾಗಿದ್ದು, ಜನರ ನಡುಕ ಹುಟ್ಟಿಸುವಂತಿದೆ.

Bengaluru Crime – ಘಟನೆಯ ಹಿನ್ನೆಲೆ
ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ದನಿಯಪ್ಪ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದನು. ಕಾಂಟ್ರಾಕ್ಟ್ ಮತ್ತು ಕನ್ಸ್ಟ್ರಕ್ಷನ್ ವ್ಯವಹಾರದ ಮೂಲಕ ಒಂದಿಷ್ಟು ಹಣವನ್ನೂ ಗಳಿಸಿದ್ದನು. ಪೀಣ್ಯಾದಲ್ಲಿ ಸುಮಾರು 3 ಕೋಟಿ ರೂಪಾಯಿ ಬೆಲೆಬಾಳುವ ಮನೆಯನ್ನು ಕಟ್ಟಿಸಿದ್ದನು. ವಿಶೇಷವೆಂದರೆ, ಈ ಮನೆಯು ಆತನ ಪತ್ನಿ ಕಾವ್ಯಾ ಹೆಸರಿನಲ್ಲಿತ್ತು. ದನಿಯಪ್ಪನಿಗೆ ತನ್ನ ಹುಟ್ಟೂರಿನಲ್ಲಿ ರಾಜಕೀಯವಾಗಿ ಬೆಳೆಯಬೇಕು, ದೊಡ್ಡ ನಾಯಕನಾಗಬೇಕು ಎಂಬ ಹಂಬಲವಿತ್ತು. ಇದಕ್ಕಾಗಿ ಬೆಂಗಳೂರಿನ ಆಸ್ತಿ ಮಾರಿ ಊರಿಗೆ ಹಣದೊಂದಿಗೆ ಹೋಗಲು ಪ್ಲಾನ್ ಮಾಡಿದ್ದನು.
ಪತ್ನಿಯ ಆಸೆ ಮಕ್ಕಳ ಭವಿಷ್ಯ; ಪತಿಯ ಆಸೆ ಅಧಿಕಾರ!
ಆದರೆ, ಪತ್ನಿ ಕಾವ್ಯಾ ಇದಕ್ಕೆ ಸಾರಾಸಗಟಾಗಿ ವಿರೋಧ ವ್ಯಕ್ತಪಡಿಸಿದ್ದರು. “ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಬೆಂಗಳೂರಿನ ಆಸ್ತಿ ಮಾರಾಟ ಮಾಡುವುದು ಬೇಡ, ನಾವು ಇಲ್ಲೇ ಇರೋಣ” ಎಂಬುದು ಕಾವ್ಯಾ ಅವರ ವಾದವಾಗಿತ್ತು. (Bengaluru Crime) ಇದೇ ವಿಷಯಕ್ಕೆ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಊರಿನಲ್ಲಿ ಬಾಡೂಟ, ಮನೆಯಲ್ಲಿ ರಕ್ತಪಾತ!
ರಾಜಕೀಯ ಪ್ರವೇಶದ ಮೊದಲ ಹೆಜ್ಜೆಯಾಗಿ ದನಿಯಪ್ಪ ಕಳೆದ ವಾರ ಅಥಣಿಯಲ್ಲಿ ತನ್ನ ಬೆಂಬಲಿಗರಿಗೆ ಮತ್ತು ಗ್ರಾಮಸ್ಥರಿಗೆ ಭರ್ಜರಿ ಬಾಡೂಟ ಏರ್ಪಡಿಸಿದ್ದನು. ಅಲ್ಲಿ ಸಂಭ್ರಮ ಮುಗಿಸಿ ಸೋಮವಾರ ಬೆಂಗಳೂರಿಗೆ ಮರಳಿದ್ದನು. ಬೆಂಗಳೂರಿಗೆ (Bengaluru Crime) ಬಂದವನೇ ಮತ್ತೆ ಆಸ್ತಿ ಮಾರಾಟದ ವಿಷಯ ಎತ್ತಿದ್ದಾನೆ. ಎಂದಿನಂತೆ ಕಾವ್ಯಾ ವಿರೋಧಿಸಿದಾಗ ಗಲಾಟೆ ವಿಕೋಪಕ್ಕೆ ಹೋಗಿದೆ. ಮಕ್ಕಳು ಶಾಲೆಗೆ ಹೋದ ಸಮಯವನ್ನೇ ಕಾದು ಕುಳಿತಿದ್ದ ದನಿಯಪ್ಪ, ಜಗಳದ ನಡುವೆ ಕಾವ್ಯಾ ಅವರನ್ನು ಕೆಳಕ್ಕೆ ತಳ್ಳಿ, ಅವರ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. Read this also : ಪ್ರೀತಿ ನಿರಾಕರಿಸಿದ್ದಕ್ಕೆ ಬ್ಯೂಟಿಷಿಯನ್ ಕೆಲಸದಿಂದ ವಜಾ? ಸಲೂನ್ ಮಾಲೀಕನ ಮೇಲೆ ಪತಿಯಿಂದ ‘ಗ್ಯಾಂಗ್’ ಅಟ್ಯಾಕ್!

ಪೊಲೀಸ್ ಕಾರ್ಯಾಚರಣೆ
ಘಟನೆಯ ನಂತರ ಸ್ಥಳಕ್ಕೆ (Bengaluru Crime) ಧಾವಿಸಿದ ಪೀಣ್ಯಾ ಪೊಲೀಸರು ಆರೋಪಿ ದನಿಯಪ್ಪನನ್ನು ಬಂಧಿಸಿದ್ದಾರೆ. “ರಾಜಕೀಯದ ಹುಚ್ಚು ಮತ್ತು ಆಸ್ತಿಯ ಮೇಲಿನ ವ್ಯಾಮೋಹವೇ ಈ ಕೊಲೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
