ಭಾರತದ ರಸ್ತೆಗಳಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಇದೇ ಬೆಂಗಳೂರಿನ ರಸ್ತೆಯಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಕಂಡ ದೃಶ್ಯವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ (Viral Video) ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ನೋಡಿದ್ದೇನು ಗೊತ್ತಾ? ಆಟೋದಲ್ಲಿ ಮನುಷ್ಯರಂತೆ ಬಿಂದಾಸ್ ಆಗಿ ಪ್ರಯಾಣಿಸುತ್ತಿದ್ದ ಮುದ್ದಾದ ‘ಕರು’!

Viral Video – ವಿದೇಶಿಗನ ಕಣ್ಣಿಗೆ ಬಿದ್ದ ಅಪರೂಪದ ದೃಶ್ಯ
ಪ್ಯಾಬ್ಲೋ ಗಾರ್ಸಿಯಾ (Pablo Garcia) ಎಂಬ ವಿದೇಶಿ ಪ್ರವಾಸಿಗ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದಾರೆ. ಅವರು ಇತ್ತೀಚೆಗೆ ನಮ್ಮ ಬೆಂಗಳೂರಿಗೆ ಭೇಟಿ ನೀಡಿದಾಗ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ಮತ್ತೊಂದು ಆಟೋವನ್ನು ನೋಡಿದ ಪ್ಯಾಬ್ಲೋಗೆ ಒಂದು ಕ್ಷಣ ಕಣ್ಣು ನಂಬಲಾಗಲಿಲ್ಲ. ಯಾಕೆಂದರೆ, ಆ ಆಟೋದಲ್ಲಿ ಪ್ರಯಾಣಿಕರ ಸೀಟಿನಲ್ಲಿ ಮನುಷ್ಯರ ಬದಲು ಒಂದು ಪುಟ್ಟ ಕರು (Calf) ರಾಜಾರೋಷವಾಗಿ ಕುಳಿತು ಪ್ರಯಾಣಿಸುತ್ತಿತ್ತು. Read this also : ಲೇಡಿ ಸ್ನೇಕ್ ಕ್ಯಾಚರ್ ಧೈರ್ಯಕ್ಕೆ ಫಿದಾ ಆಯ್ತಾ ಹಾವು? ಬುಸುಗುಡುತ್ತಾ ಕೆನ್ನೆಗೆ ಕಚ್ಚಿದ ಭಯಾನಕ ವಿಡಿಯೋ ವೈರಲ್..!
Viral Video – ವೈರಲ್ ಆಯ್ತು ವಿಡಿಯೋ
ಆ ಕರು ಆಟೋದಲ್ಲಿ ಕುಳಿತಿದ್ದ ರೀತಿಯನ್ನು ನೋಡಿದರೆ, ಅದೇನೋ ದಿನಾ ಆಟೋ ಬುಕ್ ಮಾಡಿಕೊಂಡು ಆಫೀಸ್ ಗೆ ಹೋಗುವವನಂತೆ ಕಾಣುತ್ತಿತ್ತು! ಈ ಕ್ಯೂಟ್ ದೃಶ್ಯವನ್ನು ನೋಡಿದ ತಕ್ಷಣ ಪ್ಯಾಬ್ಲೋ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. “ಭಾರತದಲ್ಲಿ ಎಷ್ಟೊಂದು ಅದ್ಭುತಗಳು, ಇಲ್ಲಿನ ಅಚ್ಚರಿಗಳಿಗೆ ಕೊನೆಯೇ ಇಲ್ಲ” ಎಂದು ಕ್ಯಾಪ್ಷನ್ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Viral Video – ನೆಟ್ಟಿಗರ ಪ್ರತಿಕ್ರಿಯೆ ಏನು?
ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಮೆಂಟ್ ಸೆಕ್ಷನ್ ರಂಗೇರಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ಒಬ್ಬರು “ಇದು ಕ್ಲಾಸಿಕ್ ಬೆಂಗಳೂರು ಬ್ರೋ!” ಎಂದಿದ್ದರೆ,
- ಮತ್ತೊಬ್ಬರು “ಭಾರತಕ್ಕೆ ಸ್ವಾಗತ ಗೆಳೆಯಾ, ಇಲ್ಲಿ ಎಲ್ಲವೂ ಸಾಧ್ಯ” ಎಂದು ಬರೆದಿದ್ದಾರೆ.
- ಇನ್ನೊಬ್ಬರು ಕೇರಳದಲ್ಲಿ ಆಟೋದಲ್ಲಿ ಮೇಕೆ ಹೋಗುವುದನ್ನು ನೋಡಿದ್ದೆ ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ನಮ್ಮ ಬೆಂಗಳೂರಿನ ಆಟೋಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ‘ನಮ್ಮ ಯಾತ್ರಿ’ ಆಗಿವೆ ಎಂದರೆ ತಪ್ಪಾಗಲ್ಲ!
