Bengaluru : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿ ದೇಹ ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಪಾಪಿ ಪತಿ

ಸಿಲಿಕಾನ್ ಸಿಟಿ ಬೆಂಗಳೂರು (Bengaluru) ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ, ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಹುಳಿಮಾವು (Hulimavu) ಸಮೀಪದ ದೊಡ್ಡ ಕನ್ನಹಳ್ಳಿ (Doddakannahalli) ಪ್ರದೇಶದ ಮನೆಯೊಂದರಲ್ಲಿ ಈ ಘೋರ ಕೃತ್ಯ ನಡೆದಿದ್ದು, ಆರೋಪಿ ಪತಿ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಅನಿಲ್ ಸಾಂಬೆಕರ್ (32) ಅವರನ್ನು ಕೊಂದು, ಆಕೆಯ ಮೃತದೇಹವನ್ನು ತುಂಡರಿಸಿ ಸೂಟ್‌ಕೇಸ್‌ ಗೆ ತುಂಬಿದ್ದಾನೆ. ಈ ಘಟನೆಯ ಸುದ್ದಿ ಕೇಳಿ ಸ್ಥಳೀಯರು ಮತ್ತು ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Bengaluru – ಘಟನೆಯ ವಿವರ

ರಾಕೇಶ್ ಮತ್ತು ಗೌರಿ ದಂಪತಿ ಮಹಾರಾಷ್ಟ್ರ ಮೂಲದವರಾಗಿದ್ದು, ಕಳೆದ ಒಂದು ವರ್ಷದಿಂದ ಬೆಂಗಳೂರಿನ ದೊಡ್ಡಕಮ್ಮನಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದರು. ಇವರಿಬ್ಬರೂ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದು, ಕೊರೊನಾ ಸಾಂಕ್ರಾಮಿಕದ ನಂತರ ವರ್ಕ್ ಫ್ರಂ ಹೋಮ್ (Work From Home) ಮಾದರಿಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ, ಈ ದಂಪತಿಯ ಜೀವನದಲ್ಲಿ ಏನಾಯಿತು ಎಂಬುದು ತಿಳಿದುಬಂದಿಲ್ಲ. ಈ ಕೊಲೆಗೆ (Murder in Bengaluru) ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Bengaluru - Shocking crime in Bengaluru – Husband dismembers wife and packs body in a suitcase

Bengaluru – ಸೂಟ್‌ಕೇಸ್‌ನಲ್ಲಿ ಮೃತದೇಹ

ಇನ್ನೂ ಆರೋಪಿ ರಾಕೇಶ್ ತನ್ನ ಪತ್ನಿ ಗೌರಿಯನ್ನು ಕೊಂದ ನಂತರ ಆಕೆಯ ದೇಹವನ್ನು ತುಂಡರಿಸಿ (Body Dismembered) ಸೂಟ್‌ಕೇಸ್‌ಗೆ ತುಂಬಿದ್ದಾನೆ. ಈ ಭಯಾನಕ ಕೃತ್ಯವನ್ನು ಮುಗಿಸಿದ ಬಳಿಕ, ಆರೋಪಿ ಮೃತಳ ಪೋಷಕರಿಗೆ ಫೋನ್ ಕರೆ ಮಾಡಿ ಈ ಘಟನೆಯ ಬಗ್ಗೆ ತಿಳಿಸಿದ್ದಾನೆ. ಈ ಸುದ್ದಿ ಕೇಳಿ ಆಕೆಯ ಪೋಷಕರು ಆಘಾತಕ್ಕೊಳಗಾಗಿ, ಕೂಡಲೇ ಮಹಾರಾಷ್ಟ್ರದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರಂತೆ. ಮಹಾರಾಷ್ಟ್ರ ಪೊಲೀಸರು ತಕ್ಷಣವೇ ಬೆಂಗಳೂರಿನ ಹುಳಿಮಾವು ಪೊಲೀಸರಿಗೆ (Hulimavu Police) ಮಾಹಿತಿ ರವಾನಿಸಿದರು.

Bengaluru – ಹುಳಿಮಾವು ಪೊಲೀಸರ ಭೇಟಿ, ಪರಿಶೀಲನೆ

ಮಾಹಿತಿ ಪಡೆದ ಹುಳಿಮಾವು ಪೊಲೀಸರು ತಕ್ಷಣ ದೊಡ್ಡಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ತೀವ್ರತೆಯನ್ನು ಅರಿತು ಡಿಸಿಪಿ ಸಾರಾ ಫಾತಿಮಾ ಅವರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪತಿ ರಾಕೇಶ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಹುಳಿಮಾವು ಪೊಲೀಸರಿಂದ ರಾಕೇಶ್‌ಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದ್ದು. ಆರೋಪಿಯ ಬಂಧನ ಹಾಗೂ ವಿಚಾರಣೆಯ ಬಳಿಕವೇ ಕೊಲೆಗೆ ಕಾರಣ ಏನೆಂಬುದು ತಿಳಿದುಬರಲಿದೆ.

Leave a Comment

Your email address will not be published. Required fields are marked *

Scroll to Top