BEML Recruitment 2025 – ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ದೇಶಾದ್ಯಂತ ಒಟ್ಟು 682 ನಾನ್ ಎಕ್ಸಿಕ್ಯುಟಿವ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳು ಲಭ್ಯವಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಐಟಿಐ, ಡಿಪ್ಲೊಮಾ, 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
BEML Recruitment 2025 – ಪ್ರಮುಖ ದಿನಾಂಕಗಳು:
- ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 5, 2025
- ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 12, 2025
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
- ಚೀಫ್ ಜನರಲ್ ಮ್ಯಾನೇಜರ್ (3 ಹುದ್ದೆಗಳು): ಎಲ್‌ಎಲ್‌ಬಿ, ಬಿಇ ಅಥವಾ ಬಿ.ಟೆಕ್, ಎಂಎ, ಎಂಬಿಎ, ಸ್ನಾತಕೋತ್ತರ ಪದವಿ
- ಜನರಲ್ ಮ್ಯಾನೇಜರ್ (2 ಹುದ್ದೆಗಳು): ಸಿಎ, ಸಿಎಂಎ, ಎಂಬಿಎ
- ಡೆಪ್ಯುಟಿ ಜನರಲ್ ಮ್ಯಾನೇಜರ್ (9 ಹುದ್ದೆಗಳು): ಬಿಇ ಅಥವಾ ಬಿಟೆಕ್
- ಮ್ಯಾನೇಜರ್ (1 ಹುದ್ದೆ): ಬಿಇ ಅಥವಾ ಬಿಟೆಕ್
- ಅಸಿಸ್ಟಂಟ್ ಮ್ಯಾನೇಜರ್ (10 ಹುದ್ದೆಗಳು): ಬಿಇ ಅಥವಾ ಬಿಟೆಕ್, ಸ್ನಾತಕೋತ್ತರ ಪದವಿ
- ಮ್ಯಾನೇಜರ್ / ಅಸಿಸ್ಟಂಟ್ ಮ್ಯಾನೇಜರ್ (ರಾಜ್ ಭಾಷಾ) (1 ಹುದ್ದೆ): ಸ್ನಾತಕೋತ್ತರ ಪದವಿ, ಪಿಎಚ್‌ಡಿ
- ಮ್ಯಾನೇಜ್‌ಮೆಂಟ್ ಟ್ರೈನಿ (100 ಹುದ್ದೆಗಳು): ಬಿಇ ಅಥವಾ ಬಿಟೆಕ್
- ಸೆಕ್ಯುರಿಟಿ ಗಾರ್ಡ್ (44 ಹುದ್ದೆಗಳು): 10ನೇ ತರಗತಿ
- ಫೈರ್ ಸರ್ವಿಸ್ ಪರ್ಸನಲ್ (12 ಹುದ್ದೆಗಳು): 10ನೇ ತರಗತಿ
- ಸ್ಟಾಫ್ ನರ್ಸ್ (10 ಹುದ್ದೆಗಳು): 10ನೇ ತರಗತಿ, ಡಿಪ್ಲೊಮಾ, ಬಿಎಸ್‌ಸಿ
- ಫಾರ್ಮಸಿಸ್ಟ್ (4 ಹುದ್ದೆಗಳು): 12ನೇ ತರಗತಿ, ಡಿಪ್ಲೊಮಾ
- ನಾನ್ ಎಕ್ಸಿಕ್ಯುಟಿವ್ (ಡಿಪ್ಲೊಮಾ & ಐಟಿ) (46 ಹುದ್ದೆಗಳು): ಐಟಿಐ, ಡಿಪ್ಲೊಮಾ
- ನಾನ್ ಎಕ್ಸಿಕ್ಯುಟಿವ್ (ಐಟಿಐ) (440 ಹುದ್ದೆಗಳು): ಐಟಿಐ
BEML Recruitment 2025 – ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
- ಅರ್ಜಿ ಶುಲ್ಕ:
- ಚೀಫ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಸಾಮಾನ್ಯ / ಇಡಬ್ಲ್ಯುಎಸ್ / ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಶುಲ್ಕವಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
- ಸ್ಟಾಫ್ ನರ್ಸ್, ನಾನ್ ಎಕ್ಸಿಕ್ಯುಟಿವ್ ಮತ್ತು ಇತರ ಹುದ್ದೆಗಳಿಗೆ ಸಾಮಾನ್ಯ / ಇಡಬ್ಲ್ಯುಎಸ್ / ಒಬಿಸಿ ಅಭ್ಯರ್ಥಿಗಳಿಗೆ 200 ರೂ. ಶುಲ್ಕವಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
- ಪಾವತಿ ವಿಧಾನ: ಆನ್‌ಲೈನ್ ಮೂಲಕ.
- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. Read this also : Personal Loan : ಕಡಿಮೆ ಬಡ್ಡಿ ದರಕ್ಕೆ ವೈಯಕ್ತಿಕ ಸಾಲ ಬೇಕೇ? ಸರಿಯಾದ ಆಯ್ಕೆ ಹೇಗೆ? ಇಲ್ಲಿದೆ ಸುಲಭ ಮಾರ್ಗದರ್ಶಿ..!
BEML Recruitment 2025 – ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. https://cbtexam.bemlindia.in/
- ಅಗತ್ಯವಿರುವ ಹುದ್ದೆಗೆ ಸಂಬಂಧಿಸಿದಂತೆ ನೋಂದಣಿ ಮಾಡಿ.
- ಅಪ್ಲಿಕೇಷನ್ ಫಾರಂ ಅನ್ನು ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
- ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
- ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸಲು, BEML ಅಧಿಕೃತ ವೆಬ್‌ಸೈಟ್ bemlindia.in ಗೆ ಭೇಟಿ ನೀಡಿ.