Nursing student – ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಳಗಾವಿಯ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕಿಡ್ನಾಪ್ ಆಗಿದ್ದಳು. ಆದರೆ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದದು, ನಾನು ಸ್ವ ಇಚ್ಚೆಯಿಂದ ಸದ್ರುದ್ದೀನ್ ಬೇಪಾರಿ ಎಂಬ ಯುವಕನ ಜೊತೆಗೆ ಹೋಗಿದ್ದೇನೆ. ನಾವಿಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದೆವು. ಆದರೆ ನನ್ನ ತಾಯಿ ವಿರೋಧ ಮಾಡಿದ್ದಳು. ಆದ್ದರಿಂದ ನಾನು ಆತನೊಂದಿಗೆ ಹೋಗಿದ್ದೇನೆ ಎಂದು ರಾಧಿಕಾ ಮುಚ್ಚಂಡಿ ಎಂಬ ಯುವತಿ ಬೆಳಗಾವಿ ಗ್ರಾಮಾಂತರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Nursing student -ಪ್ರಕರಣದ ಹಿನ್ನೆಲೆ ಏನು?
ಬೆಳಗಾವಿಯಲ್ಲೊಂದು ಲವ್-ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿತ್ತು. ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ನಿವಾಸಿಯಾಗಿರುವ 19 ವರ್ಷದ ರಾಧಿಕಾ ಮುಚ್ಚಂಡಿ ನರ್ಸಿಂಗ್ ಕೋರ್ಸ್ ಓದುತ್ತಿದ್ದಳು. ಸದ್ರುದ್ದೀನ್ ಭೇಪಾರಿ ಮತ್ತು ನರ್ಸಿಂಗ್ ಓದುತ್ತಿದ್ದ ರಾಧಿಕಾ ಮುಚ್ಚಂಡಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಎರಡರಿಂದ ಮೂರು ವರ್ಷಗಳೇ ಕಳೆದಿತ್ತು. ಆದರೆ ಮನೆಯಲ್ಲಿ ಮದುವೆ ಸುದ್ದಿ ಹೇಳಿದ್ದೇ ತಡ ಹುಡುಗಿ ತಾಯಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಆದರೆ ಕಳೆದ ಫೆಬ್ರವರಿ 19 ರಂದು ಮನೆಯಿಂದ ಹೋದ ರಾಧಿಕಾ ವಾಪಸ್ ಬಂದಿದ್ದಳು. ಮಗಳಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ರಾಧಿಕಾ ಪತ್ತೆಯಾಗಿರಲಿಲ್ಲ. ಕೊನೆಗೆ ರಾಧಿಕಾ ತಾಯಿ ಸದ್ರುದ್ದೀನ್ ಬೇಪಾರಿ ಎಂಬ ಯುವಕ ನನ್ನ ಮಗಳನ್ನು ಅಪಹರಣ ಮಾಡಿದ್ದಾನೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Nursing student -ಮುಂಬೈನಲ್ಲಿದ್ದ ಜೋಡಿ
ಈ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಧಿಕಾಗಾಗಿ ಹುಡುಕಾಟ ಶುರು ಮಾಡಿದ್ದರು. ಈ ವೇಳೆ ರಾಧಿಕಾ ಹಾಗೂ ಸದ್ರುದ್ದೀನ್ ಓಡಿ ಹೋಗಿ ಮುಂಬೈನಲ್ಲಿ ವಾಸವಾಗಿದ್ದ ಸುದ್ದಿ ಪೊಲೀಸರಿಗೆ ತಿಳಿದಿದೆ. ಕೂಡಲೇ ಬೆಳಗಾವಿ ಪೊಲೀಸರು ಮುಂಬೈಗೆ ತೆರಳಿ ಇಬ್ಬರನ್ನೂ ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ ಇಬ್ಬರ ಹೇಳಿಕೆ ದಾಖಲಿಸಿಕೊಂಡು ಇಬ್ಬರನ್ನೂ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ರಾಧಿಕಾ ನಾಪತ್ತೆಯಾಗಿ 15 ದಿನ ಕಳೆದ ಬಳಿಕ, ರಾಧಿಕಾ ಸಂಬಂಧಿಕರು ಕಳೆದ ಮಾರ್ಚ್ -8 ರಂದು ಸದ್ರುದ್ದೀನ್ ಮನೆಯ ಮೇಲೆ ದಾಳಿ ಮಾಡಿದ್ದರು ಎನ್ನಲಾಗಿದೆ. ಇತ್ತ ಯುವತಿ ನಾಪತ್ತೆಯಾಗುತ್ತದಿದಂತೆ ಸದ್ರುದ್ದೀನ್ ಪೋಷಕರೂ ಸಹ ಮನೆಯನ್ನು ಬಿಟ್ಟಿದ್ದರು. ದಾಳಿಯಾದ ದಿನದಂದು ಸಹ ಸದ್ರುದ್ದೀನ್ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಸದ್ಯ ನಾಪತ್ತೆಯಾಗಿದ್ದ ಯುವತಿ ಸ್ವತಃ ತಾನು ಸ್ವ-ಇಚ್ಚೆಯಿಂದಲೇ ಸದ್ರುದ್ದೀನ್ ಜೊತೆಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ.