ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾನೆ ಆಸಕ್ತಿಯಿರುತ್ತದೆ. ಅಂತಹವರಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶುಭಸುದ್ದಿಯನ್ನು ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದಾದ್ಯಂತ 8500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಈ ಬ್ಯಾಂಕ್ ನಲ್ಲಿ ಬರೊಬ್ಬರಿ 75 ಸಾವಿರ ಉದ್ಯೋಗಿಗಳಿದ್ದಾರೆ. ಸದ್ಯ ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿಯಿರುವ 1500 ಹುದ್ದೆಗಳ ಭರ್ತಿಗೆ ಅಧಿಸೂಚನೆ (Bank Jobs) ಹೊರಡಿಸಿದ್ದು, ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ನ.13 ಕೊನೆಯ ದಿನಾಂಕವಾಗಿದೆ.
ಯೂನಿಯನ್ ಬ್ಯಾಂಕ್ ನಲ್ಲಿರುವ 1500 ಹುದ್ದೆಗಳ ಪ್ರಮುಖವಾದ ಮಾಹಿತಿಗಳು:
- ಒಟ್ಟು ಹುದ್ದೆಗಳು : 1500
- ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ವಯೋಮಿತಿ: 20-30 ವರ್ಷಗಳು. ಎಸ್‌ಸಿ/ಎಸ್‌ಟಿ (5 ವರ್ಷಗಳು), ಒಬಿಸಿ (3 ವರ್ಷಗಳು) ಮತ್ತು ಜನರಲ್ ಪಿಡಬ್ಲ್ಯೂಡಿ (10 ವರ್ಷಗಳು) ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನೀಡಲಾಗಿದೆ..
- ಅರ್ಜಿ ಶುಲ್ಕ: ₹850 (ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹175), ಆನ್‌ಲೈನ್ ಮೂಲಕ ಪಾವತಿಸಬೇಕು..
- ವೇತನ: ಮಾಹೇಯಾನ ₹48,480 ರಿಂದ ₹85,920 ರೂಪಾಯಿಗಳು
- ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ. ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಸಂದರ್ಶನವನ್ನು ನಡೆಸಲಾಗುತ್ತದೆ.
- ಪರೀಕ್ಷಾ ಕೇಂದ್ರಗಳು: ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ.
- ಅರ್ಜಿ ಸಲ್ಲಿಸುವುದು ವಿಧಾನ: https://www.unionbankofindia.co.in/english/recruitment.aspx ನಲ್ಲಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. ಅರ್ಜಿ ಸಲ್ಲಿಕೆ, ಅರ್ಹತೆ, ಸಲ್ಲಿಸಬೇಕಾದ ದಾಖಲೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಒಮ್ಮೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಎಲ್ಲಾ ವಿವರಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದವರೆಗೂ ಕಾಯದೇ ಕೂಡಲೇ ಅರ್ಜಿ ಸಲ್ಲಿಸಿ.