ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದೀಗ ಹೊಸದಾಗಿ ಅಧಿಸೂಚನೆ (Bank Jobs) ಹೊರಡಿಸಿದ್ದು, ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು, ಕಿರಿಯ ಸಹಾಯಕರು, ಸಹಾಯಕರು/ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳ ಸಂಖ್ಯೆ, ವೇತನ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಈ ಮುಂದೆ ತಿಳಿಸಲಾಗಿದೆ.
ಹುದ್ದೆಗಳು ಹಾಗೂ ವೇತನದ ವಿವರ:
- ಸಹಾಯಕ ವ್ಯವಸ್ಥಾಪಕರು – 4 ಹುದ್ದೆ, ವೇತನ – Rs.36000-67550
- ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು – 18 ಹುದ್ದೆ, ವೇತನ27650-52650
- ಕಿರಿಯ ಸಹಾಯಕರು – 53 ಹುದ್ದೆ, ವೇತನ21400-42000
- ಸಹಾಯಕರು/ಅಟೆಂಡರ್ 10 ಹುದ್ದೆ, ವೇತನ18600-32600
ಹುದ್ದೆವಾರು ವಿದ್ಯಾರ್ಹತೆ ವಿವರ:
- ಸಹಾಯಕ ವ್ಯವಸ್ಥಾಪಕರು: ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ಇಂಗ್ಲಿಷ್, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
- ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು : ಪದವಿ ಪಾಸಾಗಿರಬೇಕು. ಇಂಗ್ಲಿಷ್, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
- ಕಿರಿಯ ಸಹಾಯಕರು : ಪದವಿ ಪಾಸಾಗಿರಬೇಕು. ಇಂಗ್ಲಿಷ್, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
- ಸಹಾಯಕರು/ಅಟೆಂಡರ್ / ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
ವಯೋಮಿತಿ: ಅಭ್ಯರ್ಥಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಿರಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಪ.ಜಾ, ಪ.ಪಂ, ಪ್ರವರ್ಗ 1, ವಿಕಲಚೇತನ ಮತ್ತು ನಿವೃತ್ತ ಸೇವಾ ಅಭ್ಯರ್ಥಿಗೆ 750 ರೂ. ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 1500 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ. ಈ ಹುದ್ದೆಗಳ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ chikkamagalurudccbank.com ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಪ್ರಮುಖ ಲಿಂಕ್ ಗಳು:
ನೋಟಿಫಿಕೇಶನ್ – Click Here
ಅರ್ಜಿ ಲಿಂಕ್ / ವೆಬ್ಸೈಟ್ – Click Here