Bank Jobs – ಪದವಿಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುತ್ತದೆ. ಅದಕ್ಕಾಗಿ ಕೆಲವೊಂದು ತರಬೇತಿಗಳನ್ನು ಸಹ ಪಡೆದಿರುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central bank of India) ಖಾಲಿಯಿರುವ 253 ಹುದ್ದೆಗಳ (Bank Jobs) ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಡಿ.3 ಕೊನೆಯ ದಿನಾಂಕವಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ 253 ಸ್ಪೇಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಡಿ.3 ರೊಳಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದಾದ್ಯಂತ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಸೇರಿದಂತೆ ಪ್ರಮುಖ ಮಾಹಿತಿ ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.
ಹುದ್ದೆಗಳ ವಿವರ: (ಒಟ್ಟು ಹುದ್ದೆಗಳು 253)
- ಚೀಫ್ ಮ್ಯಾನೇಜರ್ – 10
ಸೀನಿಯರ್ ಮ್ಯಾನೇಜರ್ – 56
- ಮ್ಯಾನೇಜರ್ – 162
- ಅಸಿಸ್ಟಂಟ್ ಮ್ಯಾನೇಜರ್ – 25
- ಶೈಕ್ಷಣಿಕ ಅರ್ಹತೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದಂತೆ, ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಬಿಇ/ ಬಿ.ಟೆಕ್/ ಎಂಸಿಎ/ ಪದವಿ / ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿಸಲಾಗಿದೆ.
- ವಯೋಮಿತಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದಂತೆ ಆಯಾ ಹುದ್ದೆಗಳಿಗೆ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ.
- ಚೀಫ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 34 ವರ್ಷ, ಗರಿಷ್ಠ 40 ವರ್ಷ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 30 ವರ್ಷ, ಗರಿಷ್ಠ 38 ವರ್ಷ ವಯಸ್ಸು ಮೀರಿರಬಾರದು.
- ಉಳಿದಂತೆ ಮ್ಯಾನೇಜರ್ ಹುದ್ದೆಗೆ ಕನಿಷ್ಠ 27 ವರ್ಷ, ಗರಿಷ್ಠ 33 ವರ್ಷ ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 23 ವರ್ಷ, ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ:
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳು – ರೂ. 175
- ಉಳಿದ ಅಭ್ಯರ್ಥಿಗಳು – ರೂ. 850
ವೇತನ ಶ್ರೇಣಿ:
- ಚೀಫ್ ಮ್ಯಾನೇಜರ್ – ರೂ 102300-120940
- ಸೀನಿಯರ್ ಮ್ಯಾನೇಜರ್- ರೂ 85920-105280
- ಮ್ಯಾನೇಜರ್ – ರೂ 64820-93960
- ಅಸಿಸ್ಟಂಟ್ ಮ್ಯಾನೇಜರ್- ರೂ 48480-85920
- ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪ್ಲಾಟ್ ಫಾರ್ಮ್ ಪರೀಕ್ಷೆ, ಸನ್ನಿವೇಶ ಆಧಾರಿತ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Important Links:
Notification PDF Download Link | Download Now |
Apply Online Link | Online Form |
Official Website | Central Bank |