Bank Holidays October 2025 – ಮುಂಬರುವ ಅಕ್ಟೋಬರ್ ತಿಂಗಳು ಹಬ್ಬಗಳ ಕಣಜ. ಈ ತಿಂಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಒಂದು ಕಡೆಯಿಂದ ಖುಷಿ ಮತ್ತು ಇನ್ನೊಂದು ಕಡೆಯಿಂದ ಚಿಂತೆ ಕಾಡಲಿದೆ. ಏಕೆಂದರೆ, ಈ ತಿಂಗಳಲ್ಲಿ ಸರ್ಕಾರಿ ರಜೆಗಳು, ಹಬ್ಬದ ರಜೆಗಳು ಹಾಗೂ ವಾರದ ರಜೆಗಳು ಸೇರಿದಂತೆ ಒಟ್ಟು 21 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದು ವಿವಿಧ ರಾಜ್ಯಗಳಿಗೆ ಅನ್ವಯಿಸುತ್ತದೆ ಮತ್ತು ಕೆಲವು ರಜೆಗಳು ಸ್ಥಳೀಯ ಹಬ್ಬಗಳಿಗೆ ಸೀಮಿತವಾಗಿರುತ್ತವೆ. ಈ ಮಾಹಿತಿ ನಿಮ್ಮ ಹಣಕಾಸು ವ್ಯವಹಾರಗಳನ್ನು ಮೊದಲೇ ಯೋಜಿಸಲು ಸಹಾಯ ಮಾಡುತ್ತದೆ.

Bank Holidays October 2025 – ರಜಾ ದಿನಗಳ ಪಟ್ಟಿ
ಈ ತಿಂಗಳಲ್ಲಿ ರಾಷ್ಟ್ರೀಯ ಹಬ್ಬಗಳು ಮತ್ತು ಪ್ರಾದೇಶಿಕ ಹಬ್ಬಗಳಿಗೆ ಅನುಗುಣವಾಗಿ ಬ್ಯಾಂಕುಗಳು ಮುಚ್ಚಿರುತ್ತವೆ. ಕೆಲವು ರಜೆಗಳು ದೇಶದಾದ್ಯಂತ ಅನ್ವಯವಾದರೆ, ಇನ್ನು ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಈ ತಿಂಗಳು ನೀವು ದಸರಾ, ದೀಪಾವಳಿ, ವಾಲ್ಮೀಕಿ ಜಯಂತಿ, ದುರ್ಗಾ ಪೂಜೆ, ಕರ್ವಾ ಚೌತ್, ಗಾಂಧಿ ಜಯಂತಿ, ಇತ್ಯಾದಿ ಹಬ್ಬಗಳನ್ನು ಆಚರಿಸಬಹುದು.
Bank Holidays October 2025 : ರಜಾದಿನಗಳ ಪಟ್ಟಿ
- ಅಕ್ಟೋಬರ್ 1, ಬುಧವಾರ: ಮಹಾನವಮಿ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ (ಸಾರ್ವತ್ರಿಕ ರಜೆ)
- ಅಕ್ಟೋಬರ್ 3, ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
- ಅಕ್ಟೋಬರ್ 4, ಶನಿವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
- ಅಕ್ಟೋಬರ್ 5: ಭಾನುವಾರದ ರಜೆ
- ಅಕ್ಟೋಬರ್ 6, ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಬಂಗಾಳದಲ್ಲಿ ರಜೆ)
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ (ಕೆಲ ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 10, ಶುಕ್ರವಾರ: ಕರ್ವಾ ಚೌತ್ (ಹಿಮಾಚಲ ಪ್ರದೇಶದಲ್ಲಿ ರಜೆ)
- ಅಕ್ಟೋಬರ್ 11: ಎರಡನೇ ಶನಿವಾರದ ರಜೆ
- ಅಕ್ಟೋಬರ್ 12: ಭಾನುವಾರದ ರಜೆ
- ಅಕ್ಟೋಬರ್ 18, ಶನಿವಾರ: ಕಟಿ ಬಿಹು (ಅಸ್ಸಾಮ್ನಲ್ಲಿ ರಜೆ)
- ಅಕ್ಟೋಬರ್ 19: ಭಾನುವಾರದ ರಜೆ
- ಅಕ್ಟೋಬರ್ 20, ಸೋಮವಾರ: ದೀಪಾವಳಿ, ಕಾಳಿ ಪೂಜೆ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಅಮಾವಾಸ್ಯ, ಗೋವರ್ಧನ ಪೂಜೆ (ಮಹಾರಾಷ್ಟ್ರ, ಒಡಿಶಾ, ಇತ್ಯಾದಿಗಳಲ್ಲಿ ರಜೆ)
- ಅಕ್ಟೋಬರ್ 22, ಬುಧವಾರ: ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ (ಹಲವು ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 23, ಗುರುವಾರ: ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ (ಕೆಲವು ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
- ಅಕ್ಟೋಬರ್ 26: ಭಾನುವಾರದ ರಜೆ
- ಅಕ್ಟೋಬರ್ 27, ಸೋಮವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ನಲ್ಲಿ ರಜೆ)
- ಅಕ್ಟೋಬರ್ 28, ಮಂಗಳವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ನಲ್ಲಿ ರಜೆ)
- ಅಕ್ಟೋಬರ್ 31, ಶುಕ್ರವಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್ನಲ್ಲಿ ರಜೆ)
ಕರ್ನಾಟಕದ ಬ್ಯಾಂಕ್ ರಜಾ ದಿನಗಳು
ಕರ್ನಾಟಕದಲ್ಲಿ ಈ ಅಕ್ಟೋಬರ್ ತಿಂಗಳಲ್ಲಿ ಒಟ್ಟು 11 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. Read this also : ಕಡಿಮೆ ಕ್ರೆಡಿಟ್ ಸ್ಕೋರ್ ಸಮಸ್ಯೆಯೇ? ಅದನ್ನು ಹೆಚ್ಚಿಸಲು ಸುಲಭ ಟಿಪ್ಸ್..!
- ಅಕ್ಟೋಬರ್ 1, ಬುಧವಾರ: ಮಹಾನವಮಿ
- ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ
- ಅಕ್ಟೋಬರ್ 5: ಭಾನುವಾರ
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ
- ಅಕ್ಟೋಬರ್ 11: ಎರಡನೇ ಶನಿವಾರ
- ಅಕ್ಟೋಬರ್ 12: ಭಾನುವಾರ
- ಅಕ್ಟೋಬರ್ 19: ಭಾನುವಾರ
- ಅಕ್ಟೋಬರ್ 20, ಸೋಮವಾರ: ದೀಪಾವಳಿ
- ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
- ಅಕ್ಟೋಬರ್ 25: ನಾಲ್ಕನೇ ಶನಿವಾರ
- ಅಕ್ಟೋಬರ್ 26: ಭಾನುವಾರ
Bank Holidays October 2025 – ರಜೆ ಇದ್ದರೂ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಲಭ್ಯ
ಬ್ಯಾಂಕ್‌ಗಳು ಮುಚ್ಚಿದ್ದರೂ, ನಿಮ್ಮ ಬ್ಯಾಂಕಿಂಗ್ ಕೆಲಸಗಳು ನಿಲ್ಲುವುದಿಲ್ಲ. ಏಕೆಂದರೆ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಯಾವಾಗಲೂ ಲಭ್ಯವಿರುತ್ತವೆ. ನೀವು ಹಣದ ಅವಶ್ಯಕತೆ ಇದ್ದರೆ ಎಟಿಎಂಗಳನ್ನು ಬಳಸಬಹುದು. ಅಲ್ಲದೆ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಹಣದ ವಹಿವಾಟು ನಡೆಸಬಹುದು. ಆದರೆ, ಚೆಕ್ ಸಲ್ಲಿಕೆ, ಆರ್‌ಟಿಜಿಎಸ್ ಇತ್ಯಾದಿ ಕೆಲಸಗಳಿಗೆ ಬ್ಯಾಂಕ್ ಶಾಖೆಗೆ ಹೋಗಬೇಕಾಗಿರುವುದರಿಂದ, ನಿಮ್ಮ ಯೋಜನೆಗಳನ್ನು ರಜಾ ದಿನಗಳಿಗನುಗುಣವಾಗಿ ರೂಪಿಸಿಕೊಳ್ಳಿ.

