ಹೊಸ ವರ್ಷದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. 2026 ನೇ ಸಾಲಿನಲ್ಲಿ ನಿಮ್ಮ ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ ಬ್ಯಾಂಕ್ (RBI) 2026ರ ಜನವರಿ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Bank Holidays – ಜನವರಿಯಲ್ಲಿ ಎಷ್ಟು ದಿನ ಬ್ಯಾಂಕ್ ರಜೆ?
ಹೊಸ ವರ್ಷದ ಆರಂಭದ ತಿಂಗಳಲ್ಲೇ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳು ಬದಲಾಗುವುದರಿಂದ, ನಿಮ್ಮ ನಗರದ ರಜೆ ಪಟ್ಟಿಯನ್ನು ಒಮ್ಮೆ ಗಮನಿಸುವುದು ಉತ್ತಮ.
ಕರ್ನಾಟಕದಲ್ಲಿ ಪ್ರಮುಖ ರಜೆಗಳು ಯಾವಾಗ?
ಕರ್ನಾಟಕದ ಜನತೆಗೆ ಮುಖ್ಯವಾಗಿ ಮಕರ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದಂದು ಬ್ಯಾಂಕ್ ರಜೆ ಇರಲಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬ್ಯಾಂಕ್‌ಗಳು ಈ ದಿನಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. Read this also : ಪದವೀಧರರಿಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಉದ್ಯೋಗಾವಕಾಶ! 400 ಅಪ್ರೆಂಟಿಸ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
Bank Holidays – ಜನವರಿ 2026ರ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ:
- ಜನವರಿ 1: ಹೊಸ ವರ್ಷದ ಆರಂಭ (ದೇಶದ ಹಲವು ಭಾಗಗಳಲ್ಲಿ ರಜೆ).
- ಜನವರಿ 4: ಭಾನುವಾರ (ದೇಶಾದ್ಯಂತ ರಜೆ).
- ಜನವರಿ 10: ಎರಡನೇ ಶನಿವಾರ (ದೇಶಾದ್ಯಂತ ರಜೆ).
- ಜನವರಿ 11: ಭಾನುವಾರ (ದೇಶಾದ್ಯಂತ ರಜೆ).
- ಜನವರಿ 15 (ಗುರುವಾರ): ಮಕರ ಸಂಕ್ರಾಂತಿ / ಪೊಂಗಲ್ (ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವೆಡೆ ರಜೆ).
- ಜನವರಿ 18: ಭಾನುವಾರ (ದೇಶಾದ್ಯಂತ ರಜೆ).
- ಜನವರಿ 24: ನಾಲ್ಕನೇ ಶನಿವಾರ (ದೇಶಾದ್ಯಂತ ರಜೆ).
- ಜನವರಿ 25: ಭಾನುವಾರ (ದೇಶಾದ್ಯಂತ ರಜೆ).
- ಜನವರಿ 26 (ಸೋಮವಾರ): ಗಣರಾಜ್ಯೋತ್ಸವ (ದೇಶಾದ್ಯಂತ ಕಡ್ಡಾಯ ರಜೆ).
ಇತರ ರಾಜ್ಯಗಳ ಪ್ರಮುಖ ರಜೆಗಳು: (Bank Holidays)
- ಜನವರಿ 2: ಹೊಸ ವರ್ಷದ ಆಚರಣೆ (ಐಜ್ವಾಲ್, ಕೊಚ್ಚಿ).
- ಜನವರಿ 3: ಹಜರತ್ ಅಲಿ ಜನ್ಮದಿನ (ಲಕ್ನೋ).
- ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಕೋಲ್ಕತ್ತಾ).
- ಜನವರಿ 14: ಮಕರ ಸಂಕ್ರಾಂತಿ/ಬಿಹು (ಅಹಮದಾಬಾದ್, ಭುವನೇಶ್ವರ).
- ಜನವರಿ 16 & 17: ತಿರುವಳ್ಳುವರ್ ದಿನ ಮತ್ತು ಉಳವರ್ ತಿರುನಾಳ್ (ಚೆನ್ನೈ).
- ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ (ಕೋಲ್ಕತ್ತಾ, ಅಗರ್ತಲಾ).
ಗಮನಿಸಿ: ಬ್ಯಾಂಕ್ ಶಾಖೆಗಳು (Bank Holidays) ಮುಚ್ಚಿದ್ದರೂ ಸಹ, ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ (ATM) ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ತುರ್ತು ಹಣಕಾಸಿನ ವಹಿವಾಟುಗಳಿಗಾಗಿ ನೀವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದು.

