ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿವೆ. ಕಳೆದ ಮೂರೇ ವಾರಗಳಲ್ಲಿ ಐವರು ಹಿಂದೂಗಳು ಬಲಿಯಾಗಿದ್ದು, ಇದೀಗ ಮತ್ತೊಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಯುವಕನ ಸಾರ್ವಜನಿಕ ಹತ್ಯೆ ಮತ್ತು ವಿಧವೆಯ ಮೇಲೆ ನಡೆದ ಅಮಾನುಷ ಅತ್ಯಾಚಾರದ ಈ ವರದಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Bangladesh – ಸಾರ್ವಜನಿಕವಾಗಿಯೇ ಯುವಕನ ಹತ್ಯೆ
ಬಾಂಗ್ಲಾದೇಶದ ಜೆಸೋರ್ ಜಿಲ್ಲೆಯ ಮೊನಿರಾಮ್‌ಪುರದಲ್ಲಿ ಸೋಮವಾರ ಸಂಜೆ ನಡೆದ ಘಟನೆ ಅಕ್ಷರಶಃ ರಕ್ತಸಿಕ್ತವಾಗಿತ್ತು. ಸುಮಾರು 5:45ರ ಸಮಯದಲ್ಲಿ, ಜನಜಂಗುಳಿ ಇದ್ದ ಕೊಪಲಿಯಾ ಬಜಾರ್‌ನಲ್ಲಿ ರಾಣಾ ಪ್ರತಾಪ್ ಬೈರಾಗಿ ಎಂಬ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಹಿರಿಯ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಈ ಸುದ್ದಿಯನ್ನು ದೃಢಪಡಿಸಿದ್ದು, ಹಂತಕರು ಕೃತ್ಯ ಎಸಗಿದ ಕೂಡಲೇ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ರಾಜಿವುಲ್ಲಾ ಖಾನ್ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ. ಆದರೆ, ಸಾರ್ವಜನಿಕ ಸ್ಥಳದಲ್ಲೇ ಇಂತಹ ಘಟನೆ (Bangladesh) ನಡೆದಿರುವುದು ಅಲ್ಲಿನ ಹಿಂದೂಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿಧವೆಯ ಮೇಲೆ ಅತ್ಯಾ**ರ, ಮರಕ್ಕೆ ಕಟ್ಟಿ ಕೂದಲು ಕತ್ತರಿಸಿದ ಕ್ರೂರಿಗಳು!
ಇನ್ನೊಂದು ಅತ್ಯಂತ ಘೋರ ಘಟನೆ ಬಾಂಗ್ಲಾದೇಶದ (Bangladesh) ಕಲಗಂಜ್‌ನಲ್ಲಿ ನಡೆದಿದೆ. 40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ಇಬ್ಬರು ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ನರಾಧಮರು, ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ, ಕೂದಲು ಕತ್ತರಿಸಿ, ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. Read this also : ಬಾಂಗ್ಲಾದೇಶದಲ್ಲಿ (Bangladesh) ಕ್ರೌರ್ಯದ ಪರಮಾವಧಿ: ಧರ್ಮನಿಂದನೆ ಆರೋಪ ಹೊರಿಸಿ ಹಿಂದೂ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ!
ಘಟನೆಯ ಹಿನ್ನೆಲೆ:
- ಸಂತ್ರಸ್ತ ಮಹಿಳೆ ಸುಮಾರು ಎರಡು ವರ್ಷಗಳ ಹಿಂದೆ ಶಾಹಿನ್ ಎಂಬಾತನಿಂದ ಮನೆ ಮತ್ತು ಜಾಗ ಖರೀದಿಸಿದ್ದರು.
- ಅಂದಿನಿಂದ ಶಾಹಿನ್ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದ.
- ಶನಿವಾರ ಸಂಜೆ ಶಾಹಿನ್ ಮತ್ತು ಆತನ ಗೆಳೆಯ ಹಸನ್ ಸೇರಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ.
- ನಂತರ 50,000 ಟಾಕಾ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಹಿಳೆ ನಿರಾಕರಿಸಿದಾಗ, ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ವಿಕೃತಿ ಮೆರೆದಿದ್ದಾರೆ. ಪ್ರಸ್ತುತ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮೂರೇ ವಾರದಲ್ಲಿ ಐವರ ಬಲಿ: ಮುಗಿಯದ ಹಿಂಸಾಚಾರ
ಬಾಂಗ್ಲಾದೇಶದಲ್ಲಿ (Bangladesh) ಡಿಸೆಂಬರ್‌ನಿಂದ ಈಚೆಗೆ ಹಿಂಸಾಚಾರದ ಕಿಚ್ಚು ಹತ್ತಿಕೊಂಡಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಪಟ್ಟಿ ಇಲ್ಲಿದೆ:
- ಖೋಕನ್ ಚಂದ್ರ ದಾಸ್: ಗುಂಪು ದಾಳಿ ನಡೆಸಿ ಬೆಂಕಿ ಹಚ್ಚಿದ್ದರಿಂದ ಸಾವನ್ನಪ್ಪಿದರು.
- ಅಮೃತ್ ಮೊಂಡಲ್: ಡಿಸೆಂಬರ್ 24ರಂದು ಗುಂಪು ಹಲ್ಲೆಯಲ್ಲಿ ಮೃತಪಟ್ಟರು.
- ದೀಪು ಚಂದ್ರ ದಾಸ್: ಧರ್ಮನಿಂದನೆಯ ಸುಳ್ಳು ಆರೋಪ ಹೊರಿಸಿ ಇವರನ್ನು ಕೊಂದು, ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿತ್ತು.
- ರಾಣಾ ಪ್ರತಾಪ್ ಬೈರಾಗಿ: ಈಗ ಗುಂಡೇಟಿಗೆ ಬಲಿಯಾದ ಐದನೇ ವ್ಯಕ್ತಿ.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
ಭಾರತದ ಕಳವಳ ಮತ್ತು ಅಂತರಾಷ್ಟ್ರೀಯ ಪ್ರತಿಕ್ರಿಯೆ
ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಈ ಸರಣಿ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರಧಾನಿ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ರಕ್ಷಣೆ ಮಾಡುವುದಾಗಿ ಹೇಳುತ್ತಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂಬುದು ಸ್ಪಷ್ಟವಾಗಿದೆ.

