ಕೆಲವು ದಿನಗಳ ಹಿಂದೆಯಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್ಸ್ ನಲ್ಲಿ ನಡೆದಂತಹ ರೇವ್ ಪಾರ್ಟಿ ಭಾರಿ ಸುದ್ದಿಯಾಗಿದೆ. ಈ ಪಾರ್ಟಿಯಲ್ಲಿ ಕೆಲ ನಟ-ನಟಿಯರು, ಮಾಡಲ್ ಗಳು, ರಾಜಕೀಯ ಮುಖಂಡರುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪ್ರಮುಖವಾಗಿ ತೆಲುಗು ನಟಿ ಹೇಮಾ ಹೆಸರು ಈ ಪ್ರಕರಣದಲ್ಲಿ ತುಂಬಾನೆ ಕೇಳಿಬರುತ್ತಿದೆ. ಅಲ್ಲದೆ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದಾಗ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆಕೆ ಮಾದಕ ವಸ್ತು ಸೇವಿಸಿದ್ದು ಖಾತ್ರಿಯಾಗಿತ್ತು. ಇದೀಗ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಹೇಮಾ ಬೆಂಬಲಕ್ಕೆ ನಿಂತಿದ್ದಾರೆ.
ತೆಲುಗು ಕಲಾವಿದರ ಸಂಘದ ಅಧ್ಯಕ್ಷರಾಗಿರುವ ನಟ ಮಂಚು ವಿಷ್ಣು ಟ್ವೀಟ್ ಮೂಲಕ ನಟಿ ಹೇಮಾ ಬೆಂಬಲಕ್ಕೆ ಬಂದಿದ್ದಾರೆ. ಅವರು ಮಾಡಿದ ಟ್ವೀಟ್ ನಲ್ಲಿ ಇತ್ತೀಚಿಗೆ ನಡೆದಿದೆ ಎನ್ನಲಾದ ರೇವ್ ಪಾರ್ಟಿಯಲ್ಲಿ ಮಾದಕ ವಸ್ತುಗಳು ಬಳಕೆಯಾಗಿದೆ ಎಂಬ ಪ್ರಕರಣದಲ್ಲಿ ಕೆಲ ಮಾದ್ಯಮಗಳು ಹಾಗೂ ಕೆಲವರು ನಟಿ ಹೇಮಾ ವಿರುದ್ದ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಈಗಲೇ ಯಾರೂ ಸಹ ನಿರ್ಧಾರಕ್ಕೆ ಬಂದು ಸುಳ್ಳು ವರದಿಗಳನ್ನು ಹಂಚಿಕೊಳ್ಳುವುದು ಬೇಡ ಎಂದು ನಾನು ಮನವಿ ಮಾಡುತ್ತೇನೆ. ಹೇಮಾ ಮೇಲೆ ಬರುತ್ತಿರುವ ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆಕೆ ಒಬ್ಬ ತಾಯಿ, ಹೆಂಡತಿ ಹಾಗೂ ಮಹಿಳೆ ಅದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಆಕೆಯ ಬಗ್ಗೆ ಲಘುವಾದ ಹೇಳಿಕೆಗಳನ್ನು ಹರಡುವುದು ಸೂಕ್ತವಲ್ಲ ಎಂದಿದ್ದಾರೆ.
ಇನ್ನೂ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಯಾವುದೇ ರೀತಿಯ ಕಾನೂನು ಬಾಹಿತಿ ಚಟುವಟಿಕೆಗಳನ್ನು ವಿರೋಧಿಸುತ್ತವೆ. ಹೇಮಾ ವಿರುದ್ದ ಆರೋಪ ಸಾಬೀತಾದರೇ ಕಲಾವಿದರ ಸಂಘವು ಹೇಮಾ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸಲಿದೆ. ಆದರೆ ಅಲ್ಲಿಯವರೆಗೂ ದಯವಿಟ್ಟು ಅನಗತ್ಯ, ಅಪಪ್ರಚಾರ, ಚರ್ಚೆ ಬೇಡ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ನಟಿ ಹೇಮಾ ಮಂಚು ವಿಷ್ಣು ರವರ ಸಿಂಡಿಕೇಟ್ ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದಿದ್ದಾರೆ. ಈ ಚುನಾವಣೆಯ ಸಮಯದಲ್ಲಿ ಗಲಾಟೆಯಾಗಿ ಎದುರಾಳಿ ತಂಡದಲ್ಲಿದ್ದ ಶಿವ ಬಾಲಾಜಯ ಕೈಯನ್ನು ಸಹ ಹೇಮಾ ಕಚ್ಚಿದ್ದು ಸುದ್ದಿಯಾಗಿದ್ದರು.
ಇನ್ನೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯ ಪ್ರಕರಣ ಹೊರಬರುತ್ತಿದ್ದಂತೆ, ಹೇಮಾ ಹೆಸರು ಕೇಳಿಬಂತು. ಬಳಿಕ ಹೇಮಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ತಾನು ರೇವ್ ಪಾರ್ಟಿಯಲ್ಲಿಲ್ಲ. ಹೈದರಾಬಾದ್ ನ ರೆಸಾರ್ಟ್ ಒಂದರಲ್ಲಿ ಇರುವುದಾಗಿ ಹೇಳಿಕೊಂಡಿದ್ದಳು. ಬಳಿಕ ನಟಿ ಹೇಮಾ ಪಾರ್ಟಿಯಲ್ಲಿ ಇದಿದ್ದದಾಗಿ ಪೊಲೀಸ್ ಆಯುಕ್ತರು ಹೇಳಿದ್ದರು. ಆಕೆಗೆ ನೊಟೀಸ್ ಸಹ ಕಳುಹಿಸಲಾಗಿದೆ ಎನ್ನಲಾಗಿದೆ. ವಿಚಾರಣೆಗೆ ಆಕೆಯನ್ನು ಬೆಂಗಳೂರು ಪೊಲೀಸರು ಕರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.