Bangalore News – ಸಿಲಿಕಾನ್ ಸಿಟಿ ಬೆಂಗಳೂರು ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್ ಪಾಸ್ ನಲ್ಲಿ ಮುಷ್ಟಿಯಷ್ಟು ಕಬ್ಬಿಣದ ಮೊಳೆಗಳು ಪತ್ತೆಯಾಗಿದ್ದು, ವಾಹನಗಳು ಪಂಕ್ಚರ್ ಆಗಲಿ ಎಂಬ ಉದ್ದೇಶದಿಂದ ರಸ್ತೆಯಲ್ಲಿ ಮೊಳೆಗಳನ್ನು (Bangalore News) ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಹಣ ಮಾಡುವ ದಂದೆಗೆ ಕೆಲ ಕಿಡಿಗೇಡಿಗಳು ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸುತ್ತಮುತ್ತಲಿನ ಪಂಕ್ಚರ್ ಶಾಪ್ ಗಳ ಕೈವಾಡ ಇರಬಹುದೇ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ (Bangalore News) ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜಧಾನಿ (Bangalore News) ಬೆಂಗಳೂರಿನ ಹೆಬ್ಬಾಳ-ಗೊರಗುಂಟೆ ಪಾಳ್ಯ ಹೊರ ವರ್ತುಲ ರಸ್ತೆಯ ಕುವೆಂಪು ವೃತ್ತದ ಕೆಳಸೇತುವೆಯಲ್ಲಿ ರಸ್ತೆಯ ಮೇಲೆ ಕಬ್ಬಿಣದ ಮೊಳೆಗಳು ಬಿಸಾಡಿದ್ದಾರೆ. ಸುಮಾರು 500 ಗ್ರಾಂಗೂ ಅಧಿಕ ಮೊಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನು ಜಾಲಹಳ್ಳಿ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಶುರು ಮಾಡಿದ್ದಾರೆ. ಹೊಸದಾಗಿ ಕಾಣುವಂತಹ ಈ ಮೊಳೆಗಳನ್ನು ಉದ್ದೇಶಪೂರ್ವಕವಾಗಿಯೇ ಎಸೆಯಲಾಗಿದೆ (Bangalore News) ಎಂಬ ಅನುಮಾನ ಮೂಡಿದ್ದು, ಈ ಸಂಬಂಧ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದ ಮೊಳೆಗಳನ್ನು ಮಹಿಳಾ ಪೊಲೀಸ್ ಪೇದೆ ಹಾಗೂ ಇಬ್ಬರು ಸಿಬ್ಬಂದಿಗಳು ತೆಗೆಯುತ್ತಿರುವ ವಿಡಿಯೋ ಹಾಗೂ ಪೊಟೋಗಳನ್ನು ಜಾಲಹಳ್ಳಿ ಸಂಚಾರಿ ಪೊಲೀಸರು (Bangalore News) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವಾಹನ ಸವಾರರಿಗೆ ಎಚ್ಚರಿಕೆ ಸಹ ನೀಡಿದ್ದಾರೆ.
https://x.com/jalahallitrfps/status/1817153253794001222
(Bangalore News) ಬೆಂಗಳೂರಿನ ಹಲವು ಕಡೆ ಮೊಳೆಗಳನ್ನು ಎಸೆದು ಪಂಕ್ಷರ್ ಆಗುವಂತೆ ಮಾಡಲಾಗುತ್ತಿದೆ ಎಂಬ ಗುಮಾನಿ ಮೊದಲಿನಿಂದಲೂ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ವರ್ತ ಟ್ರಾಫಿಕ್ ಪೊಲಿಸರೇ (Bangalore News) ರಸ್ತೆಯ ಮೇಲೆ ಬಿದ್ದಿದ್ದ ರಾಶಿಗಟ್ಟಲೆ ಮೊಳೆಗಳನ್ನು ಗಮನಿಸಿ ಅವುಗಳನ್ನು ಸ್ವಚ್ಚಗೊಳಿಸಿದ್ದಾರೆ. ಈ ಮೂಲಕ ಅಂತಹುದೊಂದು ದಂದೆ ನಡೆಯುತ್ತಿದೆಯೇ ಎಂಬ ಅನುಮಾನ ಮತಷ್ಟು ಗಟ್ಟಿಯಾಗುವಂತೆ ಮಾಡಿದೆ. ಮೊಳೆಗಳು ರಸ್ತೆಯ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಇದು ಸುತ್ತಮುತ್ತಲಿರುವಂತಹ ಪಂಕ್ಚರ್ ಶಾಪ್ ಗಳ ಕೈವಾಡ ಇರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದೀಗ (Bangalore News) ಜಾಲಹಳ್ಳಿ ಸಂಚಾರಿ ಪೊಲೀಸರು ರಸ್ತೆಯ ಮೇಲೆ ಬಿದ್ದ ಮೊಳೆಗಳನ್ನು ಆಯ್ದು ತೆಗೆದಿದ್ದು, ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.