Bajrang Dal – ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಕಾಂಗ್ರೇಸ್ ನೇತೃತ್ವದ ಸರ್ಕಾರ ಮಾತ್ರ ರಾಜ್ಯದಲ್ಲಿ ಗೋಹತ್ಯೆ, ಗೋ ಮಾಂಸ ಮಾರಾಟ ಮಾಡುವುದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್ ಗಂಭೀರ ಆರೋಪ ಮಾಡಿದರು.
Bajrang Dal – ಅಕ್ರಮ ಗೋ ಸಾಗಾಣೆ ತಡೆದ ಹಿಂದೂ ಕಾರ್ಯಕರ್ತರು
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮಿಟ್ಟೆಮರಿ ಹಾಗೂ ಚಿಂತಾಮಣಿ ಮಾರ್ಗದಲ್ಲಿ ನಾಲ್ಕು ಬುಲೆರೋ ವಾಹನಗಳಲ್ಲಿ ಅಕ್ರಮವಾಗಿ 38 ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಿಚಾರ ತಿಳಿದು ಗ್ರಾಮಸ್ಥರು ಹಾಗೂ ಭಜರಂಗದಳ ಕಾರ್ಯಕರ್ತರು ತಡೆದು ಪೊಲೀಸರಿಗೆ ದೂರು ನೀಡಿ ಬಳಿಕ ಗುಡಿಬಂಡೆ ಬಳಿಯಿರುವ ನಮ್ಮ ನಾಡು ಗೋಶಾಲೆಗೆ ದಿಬ್ಬೂರಹಳ್ಳಿ ಪೊಲೀಸರ ಸುರ್ಪದಿಯಲ್ಲಿ ಹಸುಗಳನ್ನು ಸುರಕ್ಷಿತವಾಗಿ ಬಿಡಲಾಗಿದೆ.

Bajrang Dal – ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವಲ್ಲಿ ಸರ್ಕಾರ ವಿಫಲ
ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಭಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್ ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೆ ಪೇರೆಸಂದ್ರ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಣೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಅಕ್ರಮವಾಗಿ ನಾಲ್ಕು ಬುಲೆರೋ ವಾಹನದಲ್ಲಿ 38 ಹಸುಗಳನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವಾಹನಗಳನ್ನು ತಡೆದ ಗೋವುಗಳನ್ನು ರಕ್ಷಣೆ ಮಾಡಿದೆ. ಈ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಇಂದಿನ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು ಆರೋಪಿಸಿದರು.
ಇದನ್ನೂ ಓದಿ: ಅಕ್ರಮ ಹಸು ಸಾಗಾಟ ತಡೆದ ಹಿಂದೂ ಕಾರ್ಯಕರ್ತರು: ಗೋ ಹತ್ಯೆಗೆ ಕಠಿಣ ಕ್ರಮಕ್ಕೆ ಆಗ್ರಹ
Bajrang Dal – ಗೋ ಕಳ್ಳರಿಗೆ ಭಯವೇ ಇಲ್ಲ?
ಇನ್ನೂ ಆಂಧ್ರದ ಗಡಿಭಾಗಗಳಲ್ಲಿ ಹಸುಗಳ ಸಂತೆ ನಡೆಯುತ್ತದೆ. ಅಲ್ಲಿ ಹಸುಗಳನ್ನು ಖರೀದಿ ಮಾಡಿ ನಮ್ಮ ರಾಜ್ಯಕ್ಕೆ ತಂದು ಅವುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುವಂತಹ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಗಡಿ ಭಾಗಗಳಲ್ಲಿ ಕೂಡಲೇ ತನಿಖಾ ಠಾಣೆಗಳನ್ನು ತೆರೆಯಬೇಕು. ಗೋ ಕಳ್ಳರಿಗೆ ಸರ್ಕಾರ ಅಥವಾ ಪೊಲೀಸರ ಭಯವೇ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಗೋ ಕಳ್ಳರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಭಜರಂಗದಳ ನೇರ ಕಾರ್ಯಚರಣೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.