ಬಾಗೇಪಲ್ಲಿ (Bagepalli News) ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ ಒದಗಿಸಿರುವ ತಾಲೂಕಿನ ಪಾತಪಾಳ್ಯ ಮತ್ತು ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನವದೆಹಲಿಯ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಿಂದ 2024ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಉತ್ತಮ ಗುಣಮಟ್ಟದ ಮೌಲ್ಯಮಾಪನ ಪುರಸ್ಕಾರ ಲಭಿಸಿದೆ.
ಚಿಕ್ಕಬಳ್ಳಾಪುರ ಬಾಗೇಪಲ್ಲಿ ತಾಲೂಕಿನ (Bagepalli News) ಮಿಟ್ಟೇಮರಿ ಮತ್ತು ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜುಲೈ ತಿಂಗಳಲ್ಲಿ ದೆಹಲಿಯ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿನ ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ, ಪ್ರಯೋಗಾಲಯ, ಔಷಧಿ, ಔಷಧೀಯ ಉಪಚಾರ ಕೊಠಡಿ, ಔಷಧಿ ಉಗ್ರಾಣ ಮತ್ತು ಆಡಳಿತದ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಇವುಗಳ ಮೌಲ್ಯಮಾಪನ ನಡೆಸಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿಗಳ ತಂಡ ತಾಲೂಕಿನ ಪಾತಪಾಳ್ಯ ಮತ್ತು ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಆರೋಗ್ಯ ಉತ್ತಮ ಗುಣಮಟ್ಟದ ಮೌಲ್ಯಮಾಪನ ಪುರಸ್ಕಾರವನ್ನು ಘೋಷಣೆ ಮಾಡಿದೆ.
ನವದೆಹಲಿಯ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಿಂದ (Bagepalli News) ತಾಲೂಕಿನ ಪಾತಪಾಳ್ಯ ಮತ್ತು ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವುದನ್ನು ಗುರ್ತಿಸಿ 2024ನೇ ಸಾಲಿನ ರಾಷ್ಟಿçÃಯ ಆರೋಗ್ಯ ಉತ್ತಮ ಗುಣಮಟ್ಟದ ಮೌಲ್ಯಮಾಪನ ಪುರಸ್ಕಾರ ಲಭಿಸಿರುವುದಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಮಹೇಶ್ ಅಭಿನಂಧಿಸಿದ್ದಾರೆ.
ಈ ಭಾಗದ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. 2024ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಉತ್ತಮ ಗುಣಮಟ್ಟದ ಮೌಲ್ಯಮಾಪನ ಪುರಸ್ಕಾರ ಲಭಿಸಿರುವುದು ಮತ್ತಷ್ಟು ಸೇವೆ ಸಲ್ಲಿಸಲು ಸ್ಫೂರ್ತಿ ತಂದಿದೆ – ಡಾ.ನಿತಿನ್, ವೈದ್ಯಾಧಿಕಾರಿ, ಮಿಟ್ಟೇಮರಿ.
ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ. ದೆಹಲಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೇವೆಯನ್ನು ಗುರ್ತಿಸಿ ಈ ಪುರಸ್ಕಾರ ನೀಡಿದ್ದಾರೆ. – ಡಾ. ವಿನೋಧ್ ವೈದ್ಯಾಧಿಕಾರಿ ಪಾತಪಾಳ್ಯ.
ವೈದ್ಯರು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ಪರಿಶ್ರಮದಿಂದ ತಾಲೂಕಿನ ಪಾತಪಾಳ್ಯ ಮತ್ತು ಮಿಟ್ಟೇಮರಿ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕಾರ ಸಿಕ್ಕಿದೆ. ಇದೇ ರೀತಿಯಲ್ಲಿ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಉತ್ತಮ ಆರೋಗ್ಯ ಸೇವೆ ಸಲ್ಲಿಸುವಂತಹ ಪ್ರಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕಾಗಿದೆ- ಡಾ. ಸತ್ಯನಾರಾಯಣರೆಡ್ಡಿ ಟಿ.ಹೆಚ್.ಓ ಬಾಗೇಪಲ್ಲಿ.