Tuesday, December 3, 2024

Baba Vanga Prediction: ಕಾಲಜ್ಞಾನಿ ಬಾಬಾ ವಂಗಾ ಭವಿಷ್ಯ, ಮುಂದಿನ ವರ್ಷ ಏನಾಗುತ್ತೆ ಗೊತ್ತಾ?

Baba Vanga Prediction – ಬಾಬಾ ವಂಗಾ ರವರ ಭವಿಷ್ಯವಾಣಿಯಲ್ಲಿ ತಿಳಿಸಿದಂತಹ ಅನೇಕ ಘಟನೆಗಳ ಬಗ್ಗೆ ಮೊದಲೇ ನುಡಿದಿದ್ದು, ಅವರ ಭವಿಷ್ಯವಾಣಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಅವರು ಮೃತಪಟ್ಟು ಮೂರು ದಶಕಗಳೇ ಕಳೆದಿದೆ. ಆದರೂ ಸಹ ಅವರ ಭವಿಷ್ಯವಾಣಿ ಅಂದ್ರೇ ಸಾಕು ಅನೇಕರು ಭಯಪಡು‌ತ್ತಾರೆ. ಬಲ್ಗೇರಿಯಾ ಮೂಲದ ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿಯಂತೆ ಮುಂದಿನ ವರ್ಷ ಏನಾಗುತ್ತೆ ಎಂಬುದನ್ನು ಈ ಮುಂದೆ ತಿಳಿಸಲಾಗಿದೆ.

Baba Vanga prediction 2025 1

ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರು ಕೋವಿಡ್ ಸಾಂಗ್ರಾಮಿಕ ರೋಗ, ಅಮೇರಿಕಾ ಮೇಲೆ ಉಗ್ರ ದಾಳಿ, ಜಪಾನ್ ನ ಪ್ರವಾಹ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಅನೇಕ ಘಟನೆಗಳ ಬಗ್ಗೆ ಮೊದಲೇ ಊಹಿಸಿ ಹೇಳಿದ್ದರು. ಈ ಹಾದಿಯಲ್ಲೇ 2025 ರಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಬಗ್ಗೆ ಸಹ ಹೇಳಿದ್ದಾರೆ. ಇನ್ನೂ ಇದೇ ಕಾಲಜ್ಞಾನಿ ಬಾಬಾ ವಂಗಾರವರು ನುಡಿದ ಎರಡನೆಯ ಮಹಾಯುದ್ಧದ ಕುರಿತು ಅವರು ನುಡಿದ ಭವಿಷ್ಯವಾಣಿಗಳು ನಿಜವಾದ ಬಳಿಕ ಅವರ ಭವಿಷ್ಯವಾಣಿ ತುಂಬಾನೆ ಚರ್ಚೆಗೆ ಬಂತು. ಇದೀಗ ಬಾಬಾ ವಂಗಾ (Baba Vanga)  ರವರ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಕಾಲಜ್ಞಾನಿ ಬಾಬಾ ವಂಗಾ ನುಡಿದಿದ್ದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗುತ್ತಿದೆ. ವೈರಸ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ ಇದೀಗ 2025ರ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.  ಇನ್ನೇನು 2025 ವರ್ಷ ಆರಂಭವಾಗಲು ಎರಡು ತಿಂಗಳು ಮಾತ್ರ ಉಳಿದಿದೆ. ಇದೀಗ ಬಾಬಾ ವಂಗಾ ರವರು 2025ನೇ ವರ್ಷದ ಭವಿಷ್ಯದ ಬಗ್ಗೆ ಹೇಳಿರುವುದು ಚರ್ಚೆಗೆ ಬಂದಿದೆ. 2025ರಲ್ಲಿ ಜಗತ್ತು ನಾಶವಾಗಲಿದೆ ಎಂದು ಹೇಳಿದ್ದಾರೆ. 2012ರಲ್ಲೂ ಬಾಬಾ ವಂಗಾ ರವರು ವಿಶ್ವದ ನಾಶದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು. ಆದರೆ ಅದು ಸಂಭವಿಸಿಲ್ಲ. ಆದರೆ ಬಾಬಾ ವಂಗಾ ರವರ ಪ್ರಕಾರ 5079ರಲ್ಲಿ ಮನುಕುಲವು ಭೂಮಿಯಿಂದ ಕಣ್ಮರೆಯಾಗಲಿದೆ ಎಂದು ಹೇಳಿದ್ದಾರೆ.

ಆದರೆ 2025ರಲ್ಲಿ ಜಗತ್ತು ಬೃಹತ್ ಯುದ್ದಗಳು, ಗಲಬೆಗಳು, ಸಂಘರ್ಷಗಳು ನಡೆಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಯುರೋಪಿನಲ್ಲಿ ಯುದ್ದ ನಡೆಯುವ ಸಂಭವಿದೆ ಎಂದಿದ್ದಾರೆ. ಈ ಯುದ್ದದ ಕಾರಣದಿಂದ ಯುರೋಪ್ ನ ಹಲವು ದೇಶಗಳಲ್ಲಿ ಭಾರಿ ನಷ್ಟ ಸಂಭವಿಸಬಹುದು ಎಂದೂ ಹೇಳಿದ್ದಾರೆ. ಇನ್ನೂ ಈ ಸಂಘರ್ಷದಿಂದಾಗಿ 2025ರ ವೇಳೆ ವಿಶ್ವದ ಜನಸಂಖ್ಯೆ ಸಹ ಗಣನೀಯವಾಗಿ ಕಡಿಮೆಯಾಗುತ್ತದೆಯಂತೆ.  2025 ರ ನಂತರದ ಭವಿಷ್ಯವು ತುಂಬಾ ಭಯಾನಕವಾಗಿದೆ ಮತ್ತು ಮಾನವರು 2028 ರಲ್ಲಿ ಶುಕ್ರವನ್ನು ತಲುಪಬಹುದು. ಇದಲ್ಲದೇ 2033ರಲ್ಲಿ ಬೃಹತ್ ಮಂಜುಗಡ್ಡೆ ಕರಗಿ ಸಮುದ್ರ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಸುನಾಮಿ ಸೃಷ್ಟಿಯಾಗಲಿದೆ, ಇಡೀ ಜಗತ್ತೇ ಮುಳುಗಬಹುದು ಎಂಬ ಸ್ಪೋಟಕ ಭವಿಷ್ಯ ತಿಳಿಸಿದ್ದಾರೆ ಎನ್ನಲಾಗಿದೆ.

Baba Vanga prediction 2025 0

ಕಾಲಜ್ಞಾನಿ ಎಂದೇ ಕರೆಯಲಾಗುವ ಬಾಬಾ ವಂಗಾ (Baba Vanga) ರವರು 1911 ರಲ್ಲಿ ಜನಿಸಿ, 1996ರಲ್ಲಿ ನಿಧನರಾದರು. ತಮ್ಮ 12ನೇ ವಯಸ್ಸಿನಲ್ಲಿ ಧೂಳಿನ ಬಿರುಗಾಳಿಯಿಂದ ತಮ್ಮ ದೃಷ್ಟಿ ಕಳೆದುಕೊಂಡರು. ಆದರೂ ಬಾಬಾ ವಂಗಾ ರವರು 51ನೇ ಶತಮಾನದ ವರೆಗೆ ಭೂಮಿಯ ಮೇಲೆ ನಡೆಯಬಹುದಾಂತಹ ಅನೇಕ ಘಟನೆಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅವರ (Baba Vanga) ಭವಿಷ್ಯವಾಣಿ ಅನೇಕವು ನಿಜವಾಗಿದೆ ಎಂದು ಸಹ ಹೇಳಲಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!