ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ತ್ಯ ಸಂಕಲ್ಪ (Awareness Event) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಕ್ಕಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಕಠಿಣ ಪರಿಶ್ರಮದಿಂದ ಓದಿ ಒಳ್ಳೆಯ ಹೆಸರು ಗಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು (Awareness Event) ಧನಂಜಯ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ ಇವರು ಉದ್ಘಾಟಿಸಿ. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಲವಾರು ಕಾರ್ಯಕ್ರಮಹಮ್ಮಿಕೊಂಡಿದ್ದು ಇದರಲ್ಲಿ ಮುಂದಿನ ಯುವಪೀಳಿಗೆಯು ದಾರಿ ತಪ್ಪದಂತೆ ಹದಿ ಹರೆಯದ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ (Awareness Event) ಸಂಪನ್ಮೂಲ ವ್ಯಕ್ತಿ ಗಳಾದ ಪರಿಮಳ ಶಿಕ್ಷಕರು ಹಾಗೂ ಜನಜಾಗೃತಿ ವೇದಿಕೆ ಸದಸ್ಯರು ಮಾತನಾಡಿ ಮಕ್ಕಳು ಅರೋಗ್ಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಓದಿನ ಕಡೆ ಗಮನ ಕೊಟ್ಟು ಜೀವನದಲ್ಲಿ ಒಳ್ಳೆಯ ಗುರಿಯನ್ನು ಇಟ್ಟುಕೊಂಡರೆ ಯಾವುದೇ ಮಗು ದುಶ್ಚಟಗಳಿಗೆ ಬಲಿ ಆಗುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ (Awareness Event) ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕರಾದ ಮುರುಳಿ ಕೃಷ್ಣ ರವರು ವಹಿಸಿದ್ದು ಹದಿ ಹರೆಯದ ಮಕ್ಕಳಲ್ಲಿ ಏಕಾಗ್ರತೆ ಬಹಳ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ (Awareness Event) ಶಾಲೆಯ ಶಿಕ್ಷಕರಾದ ರಾಕೇಶ್, ಭೀಮಣ್ಣ, ಮಹಾಲಕ್ಷ್ಮಿ, ಶ್ರೀಮತಿ ಲಕ್ಷ್ಮಿ ಹಾಗೂ ವಲಯದ ಮೇಲ್ವಿಚಾರಕಕಿ ಮಂಜುಳಾ, ನೇತ್ರಾವತಿ ಉಪಸ್ಥಿತರಿದ್ದರು.