Author: by Admin
Local – ಗುಡಿಬಂಡೆ: ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುವ ಕಾರಣದಿಂದ ಅಂಗಡಿ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನೇತೃತ್ವದಲ್ಲಿ ಧಾಳಿ ನಡೆಸಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿವೆ. ಜೊತೆಗೆ ಮನುಷ್ಯರ ಆರೋಗ್ಯ ಸಹ ಕ್ಷೀಣಿಸುತ್ತಿದೆ. ಇದನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಪ್ರತಿನಿತ್ಯ ಅರಿವು ಮೂಡಿಸುವ ಕೆಲಸ ಸಹ ಮಾಡಲಾಗುತ್ತಿದೆ. ಆದರೂ ಸಹ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಕಾರಣ ಧಾಳಿ ನಡೆಸಲಾಗಿದೆ. ಪರಿಸರ ಮಾಲೀನ್ಯ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಾರ್ವಜನಿಕರೂ ಸಹ ಸಹಕರಿಸಬೇಕೆಂದರು. ಬಳಿಕ ಮಾತನಾಡಿದ ಪ.ಪಂ. ಆರೋಗ್ಯ ನಿರೀಕ್ಷಕ ಶಿವಣ್ಣ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ. ಈ ಪ್ಲಾಸ್ಟಿಕ್ ಕೊಳಯದೇ ಇದ್ದು,…
ಕೆಲವು ದಿನಗಳ ಹಿಂದೆಯಷ್ಟೆ ನಂದಿನ ಹಾಲಿನ ದರ 2 ರೂಪಾಯಿ ಏರಿಕೆ ಮಾಡಿ ಆದೇಶ ಮಾಡಿತ್ತು. 50 ಎಂ.ಎಲ್. ಹಾಲು ಹೆಚ್ಚಿಗೆ ಮಾಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್ ಶಾಕ್ ಕೊಟ್ಟಿದೆ. ಹಾಲು ಉತ್ಪಾದಕರಿಂದ ಖರೀದಿ ಮಾಡುವ ಹಾಲಿಗೆ ಅಂದರೇ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಕಡಿತ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಕೋಚಿಮುಲ್ ಆಡಳಿತ ಮಂಡಳಿ ಜು.5 ರಿಂದ ಜಾರಿಗೆ ಬರುವಂತೆ ಸೂಚನೆ ನೀಡಿದೆ. ಸಾಮಾನ್ಯವಾಗಿ ಬೆಲೆ ಏರಿಕೆಯಾದಾಗಲೆಲ್ಲಾ ರೈತರಿಗೆ ಒಂದಲ್ಲ ಒಂದು ರೀತಿಯ ತೊಂದರೆಯಾಗುತ್ತದೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ರೈತನಿಗೆ ಸಮಸ್ಯೆಯಾಗುತ್ತದೆ. ಇದರ ಜೊತೆಗೆ ಆಗಾಗ ಬೆಲೆ ಸಹ ರೈತನಿಗೆ ಕೈ ಕೊಡುತ್ತಿರುತ್ತದೆ. ಇದೀಗ ಕೋಚಿಮುಲ್ (Kochimul) ರೈತರಿಗೆ ಶಾಕ್ ನೀಡಿದೆ. ದಿಢೀರನೇ ಪ್ರತಿ ಲೀಟರ್ ಗೆ 2 ರೂಪಾಯಿಯಂತೆ ಹಾಲು ಕಡಿತ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 33.40 ರೂಪಾಯಿಯನ್ನು ಉತ್ಪಾದಕರಿಗೆ ನೀಡಲಾಗುತ್ತಿತ್ತು.…
Local – ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾದದ್ದು ಜೊತೆಗೆ ಡಿಜಿಟಿಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ವೇಗವಾಗಿ ತಲುಪಿಸುವಂತಹ ಕೆಲಸಕ್ಕೆ ಮುಂದಗಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ದೇವರಾಜ್ ಅರಸು ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಪೋಷಣ್ ಅಭಿಯಾನದ (Poshan Abhiyana) ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಹ್ಯಾಂಡ್‍ಸೆಟ್, ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಆರೋಗ್ಯ ಕಿಟ್‍ಗಳನ್ನು ವಿತರಿಸಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರವಾದ ಸಮೀಕ್ಷೆ ಸೇರಿದಂತೆ ವಿವಿಧ ಕಾರ್ಯಗಳನ್ನ ಸಕಾಲಕ್ಕೆ ನಿಖರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಸರ್ಕಾರದ ಅನೇಕ ಯೋಜನೆಗಳ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದ ಅವರು ಡಿಜಿಟಿಲ್ ತಂತ್ರಜ್ಞಾನ ಬಳಸಿಕೊಂಡು ನಾಡಿನ ಅಭಿವೃದ್ದಿಗೆ ಕೈಜೋಡಿಸಬೇಕೆಂದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ವಿ.ರಾಮಚಂದ್ರ ಮಾತನಾಡಿ, ಪೋಷಣ್ ಅಭಿಯಾನದಡಿಯಲ್ಲಿ ತಾಲೂಕಿನ 384 ಅಂಗನವಾಡಿ ಕಾರ್ಯಕರ್ತೆಯರಿಗೆ, ಮೇಲ್ವಿಚಾರಕಿಯರಿಗೆ ಮೊಬೈಲ್ ಹ್ಯಾಂಡ್ ಸೆಟ್‍ಗಳು, 570 ಭಾಗ್ಯಲಕ್ಷ್ಮೀ…
Wife – ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಘಟ್ಟ ಎಂದೇ ಹೇಳಬಹುದು. ಒಮ್ಮೆ ಮದುವೆಯಾದರೇ ಸಾಮಾನ್ಯವಾಗಿ ತನ್ನ ಗಂಡನ ಜೊತೆ ಬೇರೆ ಮಹಿಳೆ ಇರೋದು ಊಹಿಸಿಕೊಳ್ಳಲು ಸಹ ಪತ್ನಿ ಇಷ್ಟಪಡೊಲ್ಲ ಎನ್ನಬಹುದು. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಓರ್ವ ವ್ಯಕ್ತಿಗೆ ಈಗಾಗಲೇ 2 ಮದುವೆಯಾಗಿದ್ದು, ಇದೀಗ ತನ್ನ ಇಬ್ಬರೂ ಹೆಂಡತಿಯರೂ ಸೇರಿ ಮತ್ತೋಂದು ಮದುವೆ ಮಾಡಿಸಿದ ಆಶ್ಚರ್ಯಕರವಾದ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದಲ್ಲಿ. ಈಗಾಗಲೇ ಇಬ್ಬರು ಹೆಂಡತಿಯರ ಮುದ್ದಿನ ಗಂಡನಿಗೆ ಮತ್ತೊಂದು ಮದುವೆ ಮಾಡಿದ್ದಾರೆ. ಆಂಧ್ರಪ್ರದೇಶದ ಮೂಲದ ಸಗೇಣಿ ಪಾಂಡಣ್ಣ ಎಂಬ ವ್ಯಕ್ತಿಗೆ ಎರಡು ಮದುವೆಯಾಗಿದ್ದು, ತನ್ನ ಇಬ್ಬರು ಹೆಂಡತಿಯರು ಸೇರಿ ಮೂರನೇ ಮದುವೆ ಮಾಡಿಸಿದ್ದಾರೆ. ಜೊತೆಗೆ ಈ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗುಲ್ಲೇಲು ಗ್ರಾಮದ ಸಗೇಣಿ ಪಾಂಡಣ್ಣ ರವರು ಕಳೆದ 2000 ರಲ್ಲಿ ಪಾವರ್ತಮ್ಮ ಎಂಬುವವರು ಮೊದಲ…
ಬಹುತೇಕ ಮೊಬೈಲ್ ಬಳಕೆದಾರರಿಗೆ ಆಪಲ್ ಐಪೋನ್ ಎಂದರೇ ತುಂಬಾನೆ ಇಷ್ಟ. ಸದ್ಯ ಪ್ರಪಂಚದಲ್ಲಿ ಆಪಲ್ ಐಪೋನ್ 14 ಹೆಚ್ಚು ಮಾರಾಟವಾಗುತ್ತಿರುವ ಐಪೋನ್ ಮಾದರಿಗಳಲ್ಲಿ ಒಂದಾಗಿದೆ. ಅದರಲ್ಲೂ ಫ್ಲಿಪ್ ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ಸ್ 2023 ರಲ್ಲಿ ಈ ಪೋನ್ ಮತ್ತಷ್ಟು ಹೈಪ್ ಪಡೆದುಕೊಂಡಿತ್ತು. ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚು ಮಾರಾಟವಾದ ಮೊಬೈಲ್ ಪೋನ್ ಗಳಲ್ಲಿ Apple iPhone 14 ಒಂದಾಗಿದೆ. ಇದೀಗ ಈ ಪೋನ್ ಖರೀದಿಸಲು ಬಯಸುವವರಿಗೆ ಫ್ಲಿಪ್ ಕಾರ್ಡ್ ಗುಡ್ ನ್ಯೂಸ್ ಕೊಟ್ಟಿದೆ. ಆಪಲ್ ಐಪೋನ್ 15 ಬಿಡುಗಡೆಯಾದ ಬಳಿಕ ಆಪಲ್ ಐಪೋನ್ 14 ರ ಬೆಲೆಯಲ್ಲಿ 10 ಸಾವಿರ ಕಡಿತಗೊಳಿಸಲಾಯಿತು. ಸದ್ಯ ಫ್ಲಿಪ್ ಕಾರ್ಟ್ ನಲ್ಲಿ Apple iPhone 14 ಬೆಲೆ 58,999 ರೂಪಾಯಿಯಿದೆ. ಈ ಪೋನ್ ಅನ್ನು ಇದೀಗ 6050 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಹೇಗೆ ಎಂಬುದನ್ನು ಮುಂದೆ ತಿಳಿಯಿರಿ. ಸದ್ಯ Apple iPhone 14 ಬೆಲೆ 58,999 ರೂಪಾಯಿಯಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್…
Aadhar – ದೇಶದಲ್ಲಿ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಎಂಬುದು ಬೇಕಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಪೊಟೋ ತೆಗೆದ ಬಳಿಕ ಆ ಪೊಟೋ ಮತ್ತೆ ನೋಡಲು ಬಯಸೋದು ತುಂಬಾನೆ ಕಡಿಮೆ. ಇದೀಗ ಪುಟಾಣಿ ಮಗುವೊಂದು ಯಾವುದೇ ಅರಿವಿಲ್ಲದೇ ಆಧಾರ್ ಕಾರ್ಡ್ ಪೊಟೋ ತೆಗೆಸೋಕೆ ಹೋಗಿ ವಿವಿಧ ರೀತಿಯ ಪೋಸ್ ಕೊಟ್ಟಿದ್ದಾಳೆ. ಇದೀಗ ಪುಟಾಣಿ ಮಗುವಿನ ಕ್ಯೂಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟಾಣಿ ಮಗು 20 ಕ್ಕೂ ಹೆಚ್ಚು ರೀತಿಯ ಪೋಸ್ ಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದ್ದು, ಆಧಾರ್ ತೆಗೆಯುವ ಸಿಬ್ಬಂದಿ ಮಾತ್ರ ಆಧಾರ್ ಕಾರ್ಡ್‌ನಲ್ಲಿ ಯಾವ ಪೊಟೋ ಹಾಕಬೇಕೆಂದು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಅಧಿಕೃತ ದಾಖಲೆಗಳು, ವೋಟರ್ ಐಡಿ, ಆಧಾರ್ ಕಾರ್ಡ್ ಗಳಿಗೆ ಪೊಟೋ ತೆಗೆಯವುದು ಕಡ್ಡಾಯವಾಗಿರುತ್ತದೆ. ಆದರೆ ಪುಟಾಣಿ ಮಕ್ಕಳ ಪೊಟೋ ತೆಗೆಯುವುದು ತುಂಬಾನೆ ಕಷ್ಟ ಎಂದೇ ಹೇಳಬಹುದು. ಅದರಲ್ಲೂ ಆಧಾರ್ ಕಾರ್ಡ್ ತೆಗೆಯುವಾಗ ಮಕ್ಕಳು ಅಳುವುದು, ಬೇರೆ ಕಡೆ ನೋಡುವುದು…
Sad – ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದು ಗೊತ್ತಾಗೋಲ್ಲ. ಕೆಲವೊಮ್ಮೆ ಯಾರಿಗೂ ತಿಳಿಯದೇ ಸಾವು ಸಂಭವಿಸುತ್ತಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. 5 ವರ್ಷ ಪುಟ್ಟ ಮಗುವೊಂದು ಹೋಮ್ ವರ್ಕ್ ಮಾಡುತ್ತಿದ್ದಾಗ ಪೆನ್ ತಲೆಗೆ ಚುಚ್ಚಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಈ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮೃತ ಬಾಲಕಿಯನ್ನು ರಿಯಂಶಿಕಾ (5) ಎಂದು ಗುರ್ತಿಸಲಾಗಿದೆ. ಮೃತ ಬಾಲಕಿ ಯುಕೆಜಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಶಾಲೆಯಿಂದ ಮನೆಗೆ ವಾಪಸ್ಸು ಬಂದ ಬಾಲಕಿ ಮನೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಹೋಮ್ ವರ್ಕ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆದ ಸೋಮವಾರ ಸಂಜೆ ಶಾಲೆಯಿಂದ ಬಂದ ಬಾಲಕಿ ಮಂಚದ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತಿರುತ್ತಾಳೆ. ಈ ಸಮಯದಲ್ಲಿ ದುರದೃಷ್ಟಾವಶಾತ್ ಮಗು ಸಾವನ್ನಪ್ಪುತ್ತದೆ. ಮೃತ ರಿಯಂಶಿಕಾ ಶಾಲೆಯಿಂದ ಮನೆಗೆ ಬಂದು ಮಂಚದ ಮೇಲೆ ಕುಳಿತು ಹೋಮ್ ವರ್ಕ್…
Bharat Rice – ಇತ್ತೀಚಿಗಷ್ಟೆ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ಭಾರತ್ ರೈಸ್ ಮಾರಾಟವನ್ನು ಆರಂಭಿಸಿತ್ತು. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಈ ಭಾರತ್ ರೈಸ್ ಮಾರಾಟವನ್ನು ಸದ್ಯ ಅಂದರೇ ಜುಲೈ ತಿಂಗಳಿನಿಂದ ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ದೇಶವಾಸಿಗಳಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಕಳೆದ ಫೆಬ್ರವರಿ ಮಾಹೆಯಿಂದ ಭಾರತ್ ರೈಸ್ ಬಿಡುಗಡೆ ಮಾಡಲಾಘಿತ್ತು. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಈ ಭಾರತ್ ರೈಸ್ ಮತದಾರರನ್ನು ಸೆಳೆದಿತ್ತು ಎನ್ನಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಭಾರತ್ ರೈಸ್ ಯೋಜನೆಯ ಅಡಿ 29 ರೂಪಾಯಿಗೆ ಅಕ್ಕಿ, 27.50 ರೂಪಾಯಿಗೆ 1 ಕೆ.ಜಿ ಗೋಧಿ ಹಿಟ್ಟು, 60 ರೂಪಾಯಿಗೆ 1 ಕೆಜಿ ಕಡಲೆಬೇಳೆ ಮಾರಾಟ ಮಾಡಲಾಗುತ್ತಿತ್ತು. ಹೆಚ್ಚು ಜನರು ಸೇರುವ ಜಾಗಗಳಲ್ಲಿ ಮೊಬೈಲ್ ವ್ಯಾನ್ ಮೂಲಕ ಈ ಆಹಾರ ಧಾನ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಂದ್ರ ಸರ್ಕಾರದ ಆದೇಶದಂತೆ ದಾಸ್ತಾನುಗಳು ಮಾರಾಟವಾದ ಬಳಿಕ ಅಂದರೇ ಸದ್ಯ ಭಾರತ್ ರೈಸ್ ಪೂರೈಕೆಯನ್ನು…
Nivedita Gowda – ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರವರನ್ನು ಸೋಷಿಯಲ್ ಮಿಡಿಯಾ ಸ್ಟಾರ್ ಎಂತಲೇ ಕರೆಯಬಹುದು. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಸಾಲು ಸಾಲು ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾ ಫೇಂ ಪಡೆದುಕೊಂಡಿದ್ದಾರೆ. BIG Boss, ಗಿಚ್ಚ ಗಿಲಿ ಗಿಲಿ ಕನ್ನಡದ ಶೋ ಗಳ ಮೂಲಕ ಹೆಚ್ಚು ಫೇಮಸ್ ಆದರು ಎಂದೇ ಹೇಳಬಹುದು. ಕೆಲವು ದಿನಗಳ ಹಿಂದೆಯಷ್ಟೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನು ಬದ್ದವಾಗಿ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನದ ಬಳಿಕ ನಿವೇದಿತಾ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅವತಾರ ತಾಳಿದ್ದಾರೆ. ಕಿರುತೆರೆ ನಟಿ ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದ ಮೂಲಕವೇ ಹೆಚ್ಚು ಫೇಮಸ್ ಆದರು ಎಂದು ಹೇಳಬಹುದು. ತಮ್ಮ ಇನ್ಸ್ಟಾ ಖಾತೆಯಲ್ಲಿ ಹಸಿಬಿಸಿ ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಕಡಿಮೆ ಸಮಯದಲ್ಲೆ ಭಾರಿ ಫಾಲೋಯಿಂಗ್ ಸಹ ಪಡೆದುಕೊಂಡರು. ಕೆಲವು ದಿನಗಳ ಹಿಂದೆಯಷ್ಟೆ ಸ್ಯಾಂಡಲ್ ವುಡ್ ಗಾಯಕ ಚಂದನ್ ಶೆಟ್ಟಿ ಹಾಗೂ…
Health Tips – ನಮ್ಮ ಸುತ್ತಮುತ್ತಲು ಸಿಗುವಂತಹ ಹಣ್ಣುಗಳು, ಸಸಿಗಳಲ್ಲಿ ಅನೇಕ ಔಷಧ ಗುಣಗಳಿರುತ್ತವೆ. ಅದರಂತೆ ಎಲ್ಲರಿಗೂ ಸಿಗುವಂತಹ ದಾಳಿಂಬೆ ಹಣ್ಣಿನಲ್ಲಿ ಸಹ ಅಪಾರವಾದ ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ಕ್ಯಾಲರಿ, ಫೈಬರ್, ವಿಟಮಿನ್, ಖನಿಜಗಳು, ಆಂಟಿ ಆಕ್ಸಿಡೆಂಟ್ ಗಳು ಅತ್ಯಧಿಕವಾಗಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ ಸಿ, ಕೆ, ಫೋಲೆಟ್, ಪೊಟಾಷಿಯಂ, ಫ್ಲೆವನಾಯ್ಡ್ಸ್ ಸಹ ಹೇರಳವಾಗಿರುತ್ತದೆ. ಈ ಹಣ್ಣಿನಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ. ದಾಳಿಂಬೆ ಹಣ್ಣಿನ ಜ್ಯೂಸ್ ಕ್ರಮ ತಪ್ಪದೇ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ದಾಳಿಂಬೆ ಸಂಧಿವಾತ ಮತ್ತು ಕೆಲವು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇರಾನಿನ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗ,…