Arvind Kejriwal – ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ (Harshita Kejriwal) ಅವರ ಮದುವೆ ಸಮಾರಂಭ ಇತ್ತೀಚೆಗೆ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಂತಸದ ಸಮಯದಲ್ಲಿ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಜೊತೆಗೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರದ ಪ್ರಸಿದ್ಧ ಹಾಡು ‘ಅಂಗಾರೋ ಕಾ ಅಂಬರ್ ಸಾ’ಗೆ (ತೆಲುಗಿನಲ್ಲಿ ‘ಪೀಲಿಂಗ್ಸ್’) ಇಬ್ಬರೂ ಸಖತ್ ಡ್ಯಾನ್ಸ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

Arvind Kejriwal – ಮಗಳ ಮದುವೆಯಲ್ಲಿ ಕೇಜ್ರಿವಾಲ್‌ರ ಸಂಭ್ರಮ ಡ್ಯಾನ್ಸ್
ಹರ್ಷಿತಾ ಕೇಜ್ರಿವಾಲ್ ತಮ್ಮ ಐಐಟಿ ದೆಹಲಿ ಸಹಪಾಠಿ ಸಂಭವ್ ಜೈನ್ ಅವರೊಂದಿಗೆ ಏಪ್ರಿಲ್ 18, 2025 ರಂದು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ವಿವಾಹವಾದರು. ಈ ಸುಂದರವಾದ ಸಮಾರಂಭದಲ್ಲಿ ಕೇಜ್ರಿವಾಲ್ ಮತ್ತು ಸುನೀತಾ ಜೋಡಿ ತಮ್ಮ ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರು. ಮದುವೆಗೂ ಮುನ್ನ ಏಪ್ರಿಲ್ 17 ರಂದು ಶಾಂಗ್ರಿ-ಲಾ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮತ್ತು ಮೆಹೆಂದಿ ಕಾರ್ಯಕ್ರಮಗಳು ನಡೆದವು. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಗಣ್ಯರ ಸಾಮೆತಿನಲ್ಲಿ ಈ ಎಲ್ಲಾ ಘಟನೆಗಳು ಚುನಾವಣೆಯ ಒತ್ತಡದಿಂದ ದೂರವಾಗಿ ಸಂತೋಷದ ಕ್ಷಣಗಳನ್ನು ತಂದಿತು.
Arvind Kejriwal – ಮದುವೆಯಲ್ಲಿ ಗಣ್ಯರ ಸಂಭ್ರಮ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಾಲಿವುಡ್ ಗಾಯಕ ಮಿಕಾ ಸಿಂಗ್ ಮತ್ತು ಎಎಪಿ ನಾಯಕ ಗೋಪಾಲ್ ರೈ ಇತ್ಯಾದಿ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಭಗವಂತ್ ಮಾನ್ ತಮ್ಮ ಭಾಂಗ್ರಾ ಡ್ಯಾನ್ಸ್‌ನಿಂದ ಎಲ್ಲರ ಮನ ಗೆದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Viral Video) ವೇಗವಾಗಿ ಹರಡುತ್ತಿದ್ದು, ನೆಟಿಜನ್ಗಳಿಂದ ಭಾರಿ ಶ್ಲಾಘನೆ ಪಡೆಯುತ್ತಿವೆ.
Read this also : Akshaya Tritiya 2025: ಅಕ್ಷಯ ತೃತೀಯದ ದಿನದಂದು ಲಕ್ಷ್ಮಿಯ ಕೃಪೆಗೆ ಮನೆಯಲ್ಲಿ ಈ ಶುಭ ಕಾರ್ಯಗಳನ್ನು ಮಾಡಿ….!
Arvind Kejriwal – ಹರ್ಷಿತಾ ಮತ್ತು ಸಂಭವ್‌ರ ಪ್ರೀತಿ ಕಥೆ
ಐಐಟಿ ದೆಹಲಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರೆಯಾದ ಹರ್ಷಿತಾ, ಗುರುಗ್ರಾಮ್‌ನ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG)ನಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಇನ್ನು ಸಂಭವ್ ಜೈನ್ ಜೊತೆ ಸೇರಿ ಹೆಲ್ತ್ ಕೇರ್ ಸ್ಟಾರ್ಟ್‌ಅಪ್‌ನ್ನು ಪ್ರಾರಂಭಿಸಿದ್ದಾರೆ. ಐಐಟಿ ದಿನಗಳಿಂದ ಇಬ್ಬರ ನಡುವೆ ಬೆಳೆದ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಯಿಸಿ, ಈಗ ಮದುವೆಯಲ್ಲಿ ಒಂದಾಗಿದೆ. ಏಪ್ರಿಲ್ 20 ರಂದು ಆರತಕ್ಷತೆಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
Arvind Kejriwal – ನೆಟ್ಟಿಗರ ಪ್ರತಿಕ್ರಿಯೆ
ಕೇಜ್ರಿವಾಲ್ ಜೋಡಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಎಕ್ಸ್ಪ್ರೆಷನ್ ಮತ್ತು ಶೈಲಿಗೆ ನೆಟಿಜನ್ಗಳು ಕಮೆಂಟ್ ಮಾಡುತ್ತಿದ್ದು, ಶ್ಲಾಘನೆಯ ಮಹಾಪೂರವೇ ಹರಿದಿದೆ. ಇತ್ತೀಚಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಎದುರಿಸಿದ ಸೋಲಿನ ನಂತರ ರಾಜಕೀಯ ಒತ್ತಡದಿಂದ ದೂರವಾಗಿ ಈ ಮದುವೆ ಸಮಾರಂಭ ಕೇಜ್ರಿವಾಲ್ ಅವರಿಗೆ ಸ್ವಲ್ಪ ಆರಾಮದ ಸಮಯ ನೀಡಿದೆ. ರಾಜಕೀಯ ಬದಿಗಿಟ್ಟು ಕುಟುಂಬದ ಸಂತೋಷವನ್ನು ಆಚರಿಸುತ್ತಿರುವ ಈ ಕ್ಷಣಗಳು ಅವರ ಫ್ಯಾನ್‌ಗಳಿಗೆ ಸಹ ಸಂತಸ ತಂದಿವೆ.