ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು (world yoga day) ಇಡೀ ವಿಶ್ವದಾದ್ಯಂತ ಅನೇಕ ಕಡೆ ಅದ್ದೂರಿಯಾಗಿಯೇ ಆಚರಣೆ ಮಾಡಲಾಗಿದೆ. ಅದೇ ರೀತಿ ಭದ್ರತಾ ಪಡೆಗಳು ಜಮ್ಮುವಿನ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಸೈನಿಕರು ಯೋಗಾಸನಗಳನ್ನು ಮಾಡಿದ್ದರು. ಈ ವೇಳೆ ಸೈನಿಕರೊಂದಿಗೆ ಎರಡು ಸೇನೆಯ ಶ್ವಾನಗಳು ಯೋಗಾಸನದಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭದ್ರತಾ ಪಡೆ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಭದ್ರತಾ ಪಡೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು, ಸೈನಿಕರು ಯೋಗಾ ಮಾಡುವುದನ್ನು ಕಾಣಬಹುದು. ಶ್ವಾನಗಳು ಸಹ ಯೋಗಾ ಮ್ಯಾಟ್ ಮೇಲೆ ಯೋಗಾ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಈ ನಾಯಿಗಳು ಗಸ್ತು, ಟ್ಯ್ರಾಕಿಂಗ್, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಪೋಟಕಗಳನ್ನು ಮಾಡುವಂತಹ ಕಾರ್ಯಗಳನ್ನು ನಿರ್ವಹಿಸುವ ಶ್ವಾನಗಳು ಯೋಗಾ ಮ್ಯಾಟ್ ನಲ್ಲಿ ಯೋಗಾಸನ ಮಾಡಿ ಅಚ್ಚರಿ ಮೂಡಿಸಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ಇನ್ನೂ ವೀಡಿಯೋದಲ್ಲಿ ಎರಡು ಲ್ಯಾಬ್ರಡಾರ್ ಶ್ವಾನಗಳು ಮುಂಭಾಗದ ಸೈನಿಕರ ಸಾಲಿನಲ್ಲಿ ತರಬೇತುದಾರರ ಸೂಚನೆಗಳನ್ನು ಅನುಸರಿಸಿದೆ. ಜೊತೆಗೆ ಸೈನಿಕರು ಯೋಗ ಭಂಗಿಗಳನ್ನು ಬದಲಿಸಿದಂತೆ ಅವುಗಳು ಸಹ ಅನುಕರಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತೊಂದು ವಿಡಿಯೋ ಸಹ ಬಿಡುಗಡೆ ಮಾಡಿದ್ದು, ಅದರಲ್ಲಿ ಶ್ವಾನ ಜಿಮ್ಮಿ ಪಡೆಯ 13ನೇ ಬೆಟಾಲಿಯನ್ ನೊಂದಿಗೆ ಯೋಗ ಪ್ರದರ್ಶನ ಮಾಡಿದೆ. ಜಿಮ್ಮಿ ತನ್ನ ಯೋಗದ ಮ್ಯಾಟ್ ಮೇಲೆ ಕುಳಿತು ಯೋಗ ತರಬೇತುದಾರರ ನೀಡುತ್ತಿರುವ ಸೂಚನೆಯಂತೆ ಯೋಗ ಪ್ರದರ್ಶನ ಮಾಡಿದೆ. ಈ ವಿಡಿಯೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾಮೆಂಟ್ ಗಳು ಹಾಗೂ ಲೈಕ್ ಗಳು ಹರಿದುಬರುತ್ತಿವೆ.