ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಬಹುತೇಕರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವಂತಹ ಪೋನ್ ಗಳನ್ನೇ ಹೆಚ್ಚು ಬಳಸುತ್ತಾರೆ ಎನ್ನಬಹುದು. ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳು ಬಜೆಟ್ ಬೆಲೆಯಲ್ಲಿ ಸಿಗುವ ಕಾರಣ ಹೆಚ್ಚು ಬಳಕೆ ಮಾಡುತ್ತಾರೆ. ಈ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಗಳನ್ನು ಡೌನ್ ಲೋಡ್ ಮಾಡುತ್ತಾರೆ. ಇದೀಗ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಕೆಲವೊಂದು (Android Apps) ಅಪ್ಲಿಕೇಶನ್ ಗಳಲ್ಲಿ ನೆಕ್ರೋಟ್ರೋಜನ್ ವೈರಸ್ ಇರುವುದು ಪತ್ತೆಯಾಗಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಈ ವೈರಸ್ ತಮ್ಮ ಪೋನ್ ಹ್ಯಾಕ್ ಮಾಡುವ ಸಾಧ್ಯತೆಯಿದ್ದು, ಅಂತಹ್ ಆಪ್ ಗಳನ್ನು ಡಿಲೀಟ್ ಮಾಡಿ ಎಂದು ತಂತ್ರಜ್ಞರು ಹೇಳಿದ್ದಾರೆ ಎನ್ನಲಾಗಿದೆ.
ಸದ್ಯ ಕೇಳಿಬರುತ್ತಿರುವ ಸುದ್ದಿಯಂತೆ ನೆಕ್ರೋಟ್ರೋಜನ್ ವೈರಸ್ ಗಳು ಗೂಗಲ್ ಪ್ಲೇ ಸ್ಟೋರ್ ನ ಕೆಲವೊಂದು ಅಪ್ಲಿಕೇಷನ್ ಗಳಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈ ನೆಕ್ರೋಟ್ರೋಜನ್ ವೈರಸ್ ಗಳು ತಮ್ಮ ಸ್ಮಾರ್ಟ್ ಪೋನ್ ನಲ್ಲಿರುವ ಡೇಟಾ ಕದಿಯಲು ಹಾಗೂ ಅದನ್ನು ಹ್ಯಾಕರ್ ಗಳಿಗೆ ರವಾನಿಸುವ ಸಾಧ್ಯತೆಗಳಿವೆಯಂತೆ. ಜೊತೆಗೆ ಡೇಟಾ ಕಳ್ಳತನ ಹಾಗೂ ಮಾಲ್ ವೇರ್ ಗಳನ್ನು ರಹಸ್ಯವಾಗಿ ತಮ್ಮ ಮೊಬೈಲ್ ನಲ್ಲಿರುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ Spotify, Whatsapp , Minecraft, Stumble Guys, Car Parking Multiplayer, ಮತ್ತು Melon Sandbox ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳ ನೆಕ್ರೋ ಟ್ರೋಜನ್ ವೈರಸ್ ಅನ್ನು ಗುರುತಿಸಲಾಗಿದೆ. ಈ ಆಪ್ ಬಳಕೆದಾರರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಹೇಳಲಾಗಿದೆ.
ಇನ್ನೂ ಮೈನ್ ಕ್ರಾಫ್ಟ್ ಗೇಮಿಂಗ್ ಆಪ್ ಗಳಲ್ಲೂ ನೆಕ್ರೋಟ್ರೋಜನ್ ವೈರಸ್ ಇರಬಹುದು ಎನ್ನಲಾಗಿದೆ. ನೆಕ್ರೋಟ್ರೋಜನ್ ವೈರಸ್ ಕಳೆದ 2019ರಲ್ಲಿ ಕಾಣಿಸಿಕೊಂಡಿತ್ತು. ಕ್ಯಾಮ್ ಸ್ಕ್ಯಾನರ್ ಪಿಡಿಎಫ್ ಜನರೇಟರ್ ಆಪ್ ನಲ್ಲಿ ಈ ವೈರಸ್ ಪತ್ತೆಯಾಗಿತ್ತು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆಪ್ ನೂರು ಮಿಲಿಯನ್ ಗೂ ಅಧಿಕ ಡೌನ್ ಲೋಡ್ ಆಗಿತ್ತು. ಬಳಿಕ ಈ ಆಪ್ ನಲ್ಲಿನ ಭದ್ರತಾ ಸಮಸ್ಯೆಯನ್ನು ಸರಿಪಡಿಸಲಾಗಿತ್ತು. ಆದರೂ Wuta Camera ಹಾಗೂ Max browser ಆಪ್ ಗಳಲ್ಲಿ ಈ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಈ ಎರಡೂ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ಡಿಲೀಟ್ ಮಾಡಲಾಗಿತ್ತು. ಇದೀಗ ಮತ್ತೆ ಈ ವೈರಸ್ ಕೆಲವೊಂದು ಆಪ್ ಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿ ಕೇಳಿಬರುತ್ತಿದ್ದು, ಅಂತಹ ಆಪ್ ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಹೇಳಲಾಗಿದೆ.