Vinesh Phogat- ಒಲಂಪಿಕ್ಸ್ – 2024 ರಲ್ಲಿ ಚಿನ್ನದ ಕನಸು ಕಂಡಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕೇವಲ 100 ಗ್ರಾಮ ತೂಕ ಹೆಚ್ಚಾಗಿರುವ ಕಾರಣ ಅನರ್ಹಗೊಂಡಿದ್ದರು. ಈ ವಿಚಾರ ಅವರಿಗೆ ಭಾರಿ ನಿರಾಸೆ ತಂದುಕೊಟ್ಟಿದ್ದರೇ ಅನೇಕರು ಈ ಕುರಿತು ಆಕ್ರೋಷ ಹೊರಹಾಕುತ್ತಿದ್ದಾರೆ. ಈ ಕುರಿತು ಭಾರತದ ಮನವಿ, ಪ್ರತಿಭಟನೆಗಳಿಗೂ ಒಲಂಪಿಕ್ಸ್ ಸಮಿತಿ ತಮ್ಮ ನಿರ್ಧಾರ ಬದಲಿಸಿಲ್ಲ. ಇದೀಗ ವಿನೇಶ್ (Vinesh Phogat) ಪೋಗಟ್ ಅನರ್ಹರಾದ ಬೆನ್ನಲ್ಲೆ ವಿದಾಯ ಘೋಷಣೆ ಮಾಡಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿದಾಯದ ಪೋಸ್ಟ್ ಹಾಕಿದ್ದಾರೆ.
ಒಲಿಂಪಿಕ್ಸ್‌ನಲ್ಲಿ (Paris Olympics) ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ. ನನ್ನ ವಿರುದ್ಧದ ಕುಸ್ತಿಯಲ್ಲಿ ಅಮ್ಮ ಗೆದ್ದಿದ್ದಾಳೆ. ಕ್ಷಮಿಸಿ ಅಮ್ಮಾ ನಾನು ಸೋತೆ. ನಿನ್ನ ಕನಸು, ನನ್ನ ಧೈರ್ಯ ಎಲ್ಲವೂ ನುಚ್ಚು ನೂರಾಗಿದೆ. ನನ್ನಲ್ಲಿನ್ನು ಹೋರಾಡುವ ಶಕ್ತಿ ಉಳಿದಿಲ್ಲ. 2001-2024 ಕುಸ್ತಿಗೆ ವಿದಾಯ. ಎಲ್ಲರಲ್ಲೂ ಕ್ಷಮೇ ಕೇಳುತ್ತಾ, ನಿಮ್ಮೆಲ್ಲರಿಗೆಗೂ ಸದಾ ನಾನು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
https://x.com/Phogat_Vinesh/status/1821332432701779982
ಇನ್ನೂ ವಿನೇಶ್ ಪೋಗಟ್ 50 ಕೆಜಿ ಫ್ರಿಸ್ಟೈಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಈ ಬಾರಿ ಬಂಗಾರ ಗೆಲ್ಲಬಹುದು ಎಂದು ನಿರೀಕ್ಷೆ ಭಾರತೀಯರಿಗಿತ್ತು. 50 ಕೆಜಿಯ ಪ್ರಾಥಮಿಕ ಸುತ್ತಿನ ಪಂದ್ಯಗಳು ಆರಂಭಕ್ಕೂ ಮುನ್ನ ವಿನೇಶ್ ಫೋಗಟ್ 49.9 ಕೆಜಿ ತೂಕ ಹೊಂದಿದ್ದರು. ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ ತೂಕದಲ್ಲಿ ಕೇವಲ 100 ಗ್ರಾಂ ಅಧಿಕವಿದ್ದ ಕಾರಣದಿಂದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಇನ್ನೂ ವಿನೇಶ್ ರವರಿಗೆ ಪೋಸ್ಟ್ ಗಳ ಮೂಲಕ ಬೆಂಬಲ ಸೂಚಿಸಲಾಗುತ್ತಿದೆ. ಅನೇಕರು ನಿಮ್ಮ ಸಾಧನೆಗೆ ಸೆಲ್ಯೂಟ್ ಎಂದು ಕಾಮೆಂಟ್ ಹಾಗೂ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.