Dowry Case – ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಅತ್ತೆ ಮತ್ತು ಮಾವ ಆಸಿಡ್ ಕುಡಿಸಿದ ಪರಿಣಾಮ 17 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಕೃತ್ಯಕ್ಕೆ ಬಲಿಯಾದ ಯುವತಿಯನ್ನು ಮೊರಾದಾಬಾದ್ ಮೂಲದ ಗುಲ್ ಫಿಜಾ ಎಂದು ಗುರುತಿಸಲಾಗಿದೆ. ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Dowry Case – ವರದಕ್ಷಿಣೆ ಕಿರುಕುಳ: ಹೆಚ್ಚುತ್ತಿರುವ ದೂರುಗಳು
ಗುಲ್ ಫಿಜಾಳ ತಂದೆ ಫುರ್ಖಾನ್ ನೀಡಿದ ಮಾಹಿತಿ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಅವರ ಮಗಳನ್ನು ಅಮ್ರೋಹಾದ ಕಲಾ ಖೇಡಾ ಗ್ರಾಮದ ಪರ್ವೇಜ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದಾಗಿನಿಂದಲೂ ಪರ್ವೇಜ್ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಗುಲ್ ಫಿಜಾಗೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. Read this also : ವರದಕ್ಷಿಣೆಯ ವಿಷಕ್ಕೆ ತಾಯಿ – ಮಗಳ ಬಲಿ: ಜೋಧ್‌ಪುರದಲ್ಲಿ ದುರಂತ ಘಟನೆ….!
ಮಗಳಿಗೆ ಸಾಕಷ್ಟು ಆಭರಣಗಳನ್ನು ಕೊಟ್ಟು ಮತ್ತು ಅಳಿಯನಿಗೆ ಕಾರು, ಬೈಕು, ನಗದು ಕೊಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ, ವರದಕ್ಷಿಣೆಗಾಗಿ ಹಿಂಸೆ ಕೊಡುವುದು ನಿಲ್ಲಲಿಲ್ಲ. (Dowry Case) ಕಿರುಕುಳ ಅತಿಯಾದಾಗ, ಅದು ದೈಹಿಕ ದೌರ್ಜನ್ಯಕ್ಕೆ ತಿರುಗಿತು. ಆಗಸ್ಟ್ 11 ರಂದು, ಗುಲ್ ಫಿಜಾಳಿಗೆ ಆಕೆಯ ಅತ್ತೆ, ಮಾವ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ.
Dowry Case – ಆಸ್ಪತ್ರೆಯಲ್ಲಿ 17 ದಿನಗಳ ಹೋರಾಟ
ಆಸಿಡ್ ಕುಡಿದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಗುಲ್ ಫಿಜಾಳನ್ನು ತಕ್ಷಣ ಮೊರಾದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರ ನಿರಂತರ ಪ್ರಯತ್ನದ ನಡುವೆಯೂ, 17 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಆಕೆಯ ಮರಣೋತ್ತರ ಪರೀಕ್ಷೆ ವರದಿಯೂ ಬಂದಿದ್ದು, ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಾದ ಪತಿ ಪರ್ವೇಜ್ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಇನ್ನಿತರ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದೀಗ ಗುಲ್ ಫಿಜಾ ಸಾವನ್ನಪ್ಪಿದ ಕಾರಣ, ಆರೋಪಿಗಳ ವಿರುದ್ಧ ಕೊಲೆ ಆರೋಪಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.