Robbery – ಕಂಟೇನರ್ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್ ಗಳ ದರೋಡೆ ನಡೆದಿದೆ. 4.80 ಲಕ್ಷ ಮೌಲ್ಯದ ಅಮೆಜಾನ್ ಕಂಪೆನಿಯ ಪಾರ್ಸಲ್ ಗಳನ್ನ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಯಾಣ ರಾಜ್ಯದ ಗುರುಗಾವ್ ನಿಂದ ತಮಿಳುನಾಡಿನ ಹೊಸೂರಿಗೆ ತೆರಳುವ ಮಾರ್ಗ ಮಧ್ಯೆ 4.80ಲಕ್ಷ ಮೌಲ್ಯದ ಅಮೇಜಾನ್ ಕಂಪನಿಗೆ ಸೇರಿದ ಸಾಮಗ್ರಿಗಳ ಕಳವು ಮಾಡಲಾಗಿದೆ. ಸಂದೀಪ್ ಹೆಸರಿನ ಕಂಟೇನರ್ ಪತ್ತೆಯಾಗಿದ್ದು, ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ಕದ್ದು ಇಬ್ಬರು ಚಾಲಕರು ಪರಾರಿಯಾಗಿದ್ದಾನೆ. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Robbery – ಕಳ್ಳತನ ಹೇಗಾಯ್ತು? ಏನಿದು ಪ್ರಕರಣ?
ಜೂನ್ 26 ರ ಬೆಳಿಗ್ಗೆ 10:16 ಗಂಟೆಗೆ ಹರಿಯಾಣ ರಾಜ್ಯದ ಗುರುಗಾವ್ ನಿಂದ ತಮಿಳುನಾಡಿನ ಹೊಸೂರಿಗೆ ತೆರಳಲು ರಾಜಸ್ಥಾನದ ಅಕಟ ಭಾರತ್ ಪುರ್ ನ ನಜೀರ್ ಹುಸೇನ್(28) ಮತ್ತು ಹಬೀದ್(28) ಇಬ್ಬರನ್ನ ಕಂಟೈನರ್ ಚಾಲಕರನ್ನಾಗಿ ನೇಮಿಸಿ ತಮಿಳುನಾಡಿನ ಹೊಸೂರಿಗೆ ಅಮೇಜಾನ್ ಕಂಪನಿಯ ಸಾಮಗ್ರಿಗಳನ್ನು ಹೊತ್ತು ಹೊರಟಿತ್ತು, ಆದರೆ ಅದು ಡೆಲಿವರಿ ವಿಳಾಸವನ್ನು ತಲುಪಿಲ್ಲ. ವಿತರಣೆಯು ಸಂದೀಪ್ ಲೋಜಿಸ್ಟಿಕ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಅಮೆಜಾನ್ ಕಂಪನಿಯವರು ಕೂಡಲೇ ಕಂಟೈನರ್ ಜಿಪಿಎಸ್ ಪರಿಶೀಲಿಸಿದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಜಯಂತಿ ಗ್ರಾಮದ ಬಳಿ ಹೆದ್ದಾರಿ 44ರ ರಾಜಸ್ಥಾನ ಹರಿಯಾಣ ಮಹದೇವ್ ರೈಕಾ ಹೋಟೆಲ್ ಬಳಿ ಕಂಟೈನರ್ ನಿಂತಿರುವುದು ಪತ್ತೆಯಾಗಿದೆ.
Read this also : ನಾಳೆ ಭಾರತ್ ಬಂದ್: ಏನುಂಟು, ಏನಿಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ….!
Robbery – ಕಳ್ಳತನದ ಸುಳಿವು ಸಿಕ್ಕಿದ್ದು ಹೇಗೆ?
ಸಂದೀಪ್ ಲೋಜಿಸ್ಟಿಕ್ ಟ್ರಾನ್ಸ್ ಪೋರ್ಟ್ ಕಂಪನಿಯ ಅಂಕಿತ್ ಕುಮಾರ್ ಜೂನ್ 30ರಂದು ರಾತ್ರಿ9 ಗಂಟೆಗೆ ಕಂಟೈನರ್ ಬಳಿ ತಲುಪಿದರು. ಕಂಟೈನರ್ ಗೆ ಹಾಕಿದ್ದ ಬೀಗ ಹೊಡೆದು ಬಾಗಿಲು ತೆರೆದಿರುತ್ತದೆ. ಕಂಟೈನರ್ ನಲ್ಲಿ ಕಳವು ಆಗಿರಬಹುದು ಎಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜುಲೈ 6 ರಂದು ಕಂಟೈನರ್ ನಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 4.80 ಲಕ್ಷ ಮೌಲ್ಯದ ಅಮೇಜಾನ್ ಕಂಪನಿಯ ವಸ್ತುಗಳು ಕಳವಾಗಿರುತ್ತವೆ. ಸಂದೀಪ್ ಲೋಜಿಸ್ಟಿಕ್ ಟ್ರಾನ್ಸ್ ಪೋರ್ಟ್ ಕಂಪನಿಯವರು ಕಳ್ಳತನದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Robbery – ಆರೋಪಿ ಚಾಲಕರಿಗಾಗಿ ಬಲೆ ಬೀಸಿದ ಪೊಲೀಸರು
ಕಳ್ಳತನದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ಮಾಡಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಕಂಟೈನರ್ ಜಪ್ತಿ ಮಾಡಿ ಗುಡಿಬಂಡೆ ಠಾಣೆಗೆ ತರಲಾಗಿದೆ. ಈ ಸಂಪೂರ್ಣ ಕಳ್ಳತನದಲ್ಲಿ ಅಮೆಜಾನ್ ಕಂಪನಿಯ ವಸ್ತುಗಳ ನಾಪತ್ತೆ ಜತೆಗೆ ಕಂಟೈನರ್ ನ ಇಬ್ಬರು ಚಾಲಕರು ನಾಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.