ಗಂಡ-ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂಬ ಮಾತಿದೆ. ಆದರೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹಮೀದ್‌ಪುರ ಗ್ರಾಮದಲ್ಲಿ ನಡೆದ ಈ ಘಟನೆ ಮಾತ್ರ ಇಡೀ ಸೋಶಿಯಲ್ ಮೀಡಿಯಾದಲ್ಲಿ (Viral Video) ಸಂಚಲನ ಮೂಡಿಸಿದೆ. ಕುಡಿತದ ವಿಚಾರವಾಗಿ ಶುರುವಾದ ಸಂಸಾರದ ಕಲಹ, ಪತಿಯನ್ನು ಮಂಚಕ್ಕೆ ಕಟ್ಟಿ ಹಾಕುವ ಹಂತಕ್ಕೆ ತಲುಪಿದೆ!

Viral Video – ಅಸಲಿಗೆ ನಡೆದಿದ್ದೇನು?
ಅಲಿಗಢದ ಹಮೀದ್‌ಪುರ ನಿವಾಸಿ ಪ್ರದೀಪ್ ಮತ್ತು ಸೋನಿ ದಂಪತಿಗಳ ನಡುವೆ ಕಳೆದ ನಾಲ್ಕು ವರ್ಷಗಳಿಂದ ಸಂಸಾರ ಸುಸೂತ್ರವಾಗಿಯೇ ಇತ್ತು. ಆದರೆ ಪ್ರದೀಪ್‌ಗೆ ಇದ್ದ ವಿಪರೀತ ಕುಡಿತದ ಚಟ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಿತ್ತು. ದಿನವೂ ಇದೇ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದ್ದು, ಪತ್ನಿ ಸೋನಿ ತನ್ನ ಪತಿಯನ್ನು ಮಂಚಕ್ಕೆ ಕಟ್ಟಿಹಾಕಿದ್ದಾರೆ. ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅತ್ತೆಯ ಗಂಭೀರ ಆರೋಪ: ಪತ್ನಿ ಕೈಯಲ್ಲಿ ಪಿಸ್ತೂಲು?
ವಿಷಯ ಇಷ್ಟಕ್ಕೇ ಮುಗಿಯಲಿಲ್ಲ. ಪ್ರದೀಪ್ ಅವರ ತಾಯಿ ಸುಮನ್ ಅವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. “ನನ್ನ ಸೊಸೆ ಮಗನನ್ನು ಕೇವಲ ಕಟ್ಟಿ ಹಾಕಿ ಹೊಡೆದಿದ್ದಷ್ಟೇ ಅಲ್ಲ, ಆತನಿಗೆ ನಾಡ ಪಿಸ್ತೂಲು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾಳೆ,” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. “ಸೊಸೆ ಸೋನಿ ನನ್ನ ಮಗನಿಗೆ ಕೆಟ್ಟ ಮಾತುಗಳಿಂದ ನಿಂದಿಸುತ್ತಾಳೆ, ಹಿಂಸೆ ನೀಡುತ್ತಾಳೆ. ಅವಳ ಬಳಿ ಅಕ್ರಮ ಶಸ್ತ್ರಾಸ್ತ್ರವಿದೆ ಎಂದು ತಿಳಿದು ನಾನು ಹುಡುಕಾಡಿದೆ, ಆದರೆ ಸಿಗಲಿಲ್ಲ,” ಎಂದು ತಾಯಿ ಸುಮನ್ ಅಳಲು (Viral Video) ತೋಡಿಕೊಂಡಿದ್ದಾರೆ. Read this also : ರೀಲ್ಸ್ ಹುಚ್ಚಿಗೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ! ಅಸಲಿ ಕಾರಣ ಕೇಳಿದ್ರೆ ದಂಗಾಗ್ತೀರಾ!
ವೈರಲ್ ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರದೀಪ್ ಮಂಚದ ಮೇಲೆ ಕೈಕಾಲು ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಮೌನವಾಗಿ ಮಲಗಿರುವುದನ್ನು ಕಾಣಬಹುದು. ಸುತ್ತಲೂ ಕುಟುಂಬದ ಸದಸ್ಯರು ಜೋರಾಗಿ ವಾದ ಮಾಡುತ್ತಿರುವುದು ಕೇಳಿಸುತ್ತದೆ. ಪ್ರದೀಪ್ ತಾಯಿ ತನ್ನ ಮಗನ ಕಟ್ಟುಗಳನ್ನು ಬಿಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಜಮಾಯಿಸಿ (Viral Video) ಪ್ರದೀಪ್‌ನನ್ನು ರಕ್ಷಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸ್ ತನಿಖೆ ಚುರುಕು
ಈ ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲಿಗಢ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಅತ್ತೆ ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ್ದಾರೆ. “ನಾವು ವೈರಲ್ ವಿಡಿಯೋವನ್ನು ಗಮನಿಸಿದ್ದೇವೆ. ಅಕ್ರಮ ಶಸ್ತ್ರಾಸ್ತ್ರ ಬಳಕೆಯ ಆರೋಪದ ಬಗ್ಗೆಯೂ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ. ಇಬ್ಬರ ಹೇಳಿಕೆಗಳನ್ನು ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
