Aligarh Love Story – ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅತ್ತೆ ಮತ್ತು ಅಳಿಯ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಉತ್ತರ ಪ್ರದೇಶದ ಅಲಿಗಢದಿಂದ (Uttar Pradesh) ಓಡಿಹೋಗಿದ್ದ ಅತ್ತೆ ಅನಿತಾ ಅಲಿಯಾಸ್ ಸಪ್ನಾ (Sapna) ಮತ್ತು ಆಕೆಯ ಅಳಿಯ ರಾಹುಲ್‌ನನ್ನು (Rahul) ಬಿಹಾರದ (Bihar) ನೇಪಾಳ ಗಡಿಯಲ್ಲಿ (Nepal Border) ಪೊಲೀಸರು ಪತ್ತೆಹಚ್ಚಿದ್ದಾರೆ. ಈ ವೇಳೆ ಅತ್ತೆ ನೀಡಿದ ಹೇಳಿಕೆ ಅಚ್ಚರಿ ಮೂಡಿಸುವಂತಿದೆ.
Aligarh Love Story – ಮದುವೆಯಾಗಿಲ್ಲ ಎಂದ ಅತ್ತೆ:
ಪೊಲೀಸರ ವಿಚಾರಣೆ ವೇಳೆ ಮಾತನಾಡಿದ ಅನಿತಾ, “ನಾನು ರಾಹುಲ್‌ನನ್ನು ಮದುವೆಯಾಗಿಲ್ಲ. ನಾವು ಒಟ್ಟಾಗಿ ಮನೆಯಿಂದ ಹೊರಬಂದಿದ್ದು ನಿಜ. ಬಿಹಾರದ ನೇಪಾಳ ಗಡಿಗೆ ಹೋಗಿದ್ದೆವು. ಆದರೆ ನನ್ನ ಪತಿ ಮತ್ತು ಕುಟುಂಬದವರು 3.5 ಲಕ್ಷ ರೂಪಾಯಿ ನಗದು ಹಾಗೂ ಆಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

Aligarh Love Story – ಗಂಡನ ವಿರುದ್ಧ ಗಂಭೀರ ಆರೋಪ:
ಅಲ್ಲದೆ, ತನ್ನ ಗಂಡ ಜೀತೇಂದ್ರ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನನ್ನ ಗಂಡ 1500 ರೂಪಾಯಿಗಾಗಿ ನನ್ನನ್ನು ಕ್ರೂರವಾಗಿ ಹೊಡೆದಿದ್ದ. ಬೆಳಿಗ್ಗೆಯಿಂದ ಸಂಜೆಯವರೆಗೆ ಕುಡಿದು ಮನೆಯಲ್ಲಿಯೇ ಇರುತ್ತಾನೆ. ದುಡಿದರೂ ಮನೆಗೆ ಏನನ್ನೂ ಕೊಡುತ್ತಿರಲಿಲ್ಲ. ನನ್ನ ಗಂಡನಿಗೆ ಇಷ್ಟು ವರ್ಷವಾದರೂ ಒಂದು ಸಣ್ಣ ಮನೆ ಕಟ್ಟಲು ಸಾಧ್ಯವಾಗಿಲ್ಲ. ಆತನು ಜೀವನದಲ್ಲಿ ಏನು ಮಾಡಲು ಸಾಧ್ಯ? ಒಂದು ವೇಳೆ 1500 ರೂಪಾಯಿ ಕೊಟ್ಟರೂ, ಆ ಹಣ ಎಲ್ಲಿ ಹೋಯಿತು, ಏನು ಮಾಡಿದೆ ಎಂದು ಲೆಕ್ಕ ಕೇಳುತ್ತಾನೆ” ಎಂದು ಕಣ್ಣೀರಿಡುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
Aligarh Love Story – ಅಳಿಯನೊಂದಿಗೆ ಓಡಿಹೋಗಲು ಗಂಡನೇ ಕಾರಣ?
“ನನ್ನ ಗಂಡ ಯಾವಾಗಲೂ ನನ್ನನ್ನು ಅನುಮಾನಿಸುತ್ತಿದ್ದ. ‘ಅವಳು ನನ್ನೊಂದಿಗೆ ಮಾತನಾಡುವುದಿಲ್ಲ, ಆದರೆ ಅಳಿಯನೊಂದಿಗೆ ಮಾತನಾಡುತ್ತಾಳೆ’ ಎಂದು ಆರೋಪಿಸುತ್ತಿದ್ದ. ನೀನು ನಿನ್ನ ಅಳಿಯನ ಜೊತೆ ಓಡಿಹೋಗು ಎಂದು ಪದೇ ಪದೇ ಹೇಳುತ್ತಿದ್ದ. ನಾನು ಅಳಿಯನೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿದರೂ, ಪ್ರತಿದಿನ ಇದೇ ವಿಷಯ ಹೇಳಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಹತಾಶೆಯಿಂದ ಈ ನಿರ್ಧಾರ ತೆಗೆದುಕೊಂಡೆ. ಈಗ ನನ್ನ ಜೀವನದಲ್ಲಿ ಯಾರೇ ಬರಲಿ, ನಾನು ಅವರೊಂದಿಗೆ ಇರುತ್ತೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಸಪ್ನಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.
Aligarh Love Story – ರಾಹುಲ್ ಜೊತೆಗೇ ಜೀವನ ಎಂದ ಅನಿತಾ:
“ನಾನು ರಾಹುಲ್ ಜೊತೆಗೇ ಬದುಕುತ್ತೇನೆ. ಅಲಿಗಢ ಪೊಲೀಸರು ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದಾಗ ನಾವು ಹಿಂತಿರುಗಿದೆವು. ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನು ಎಲ್ಲಿಗೆ ಹೋಗಲಿ? ಹಾಗಾಗಿ ಹಿಂತಿರುಗಿದೆ. ವಿಚ್ಛೇದನ ಇರಲಿ ಅಥವಾ ಇಲ್ಲದಿರಲಿ, ನಾನು ಈಗ ರಾಹುಲ್ ಜೊತೆ ಮಾತ್ರ ಇರುತ್ತೇನೆ” ಎಂದು ಅನಿತಾ ಸ್ಪಷ್ಟಪಡಿಸಿದ್ದಾರೆ.

Aligarh Love Story – ಅತ್ತೆಯೊಂದಿಗೆ ಇರುವುದಾಗಿ ಅಳಿಯನ ಹೇಳಿಕೆ:
ಇನ್ನು ರಾಹುಲ್ ಸಹ ಅನಿತಾಳ ಹೇಳಿಕೆಗೆ ದನಿಗೂಡಿಸಿದ್ದಾರೆ. “ಅತ್ತೆ ಮನೆಯಿಂದ ಕೇವಲ ಮೊಬೈಲ್ ಮತ್ತು 200 ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಬಂದಿದ್ದಾರೆ. ಬೇರೇನನ್ನೂ ತಂದಿಲ್ಲ. ನಾನು ಆಕೆಯೊಂದಿಗೇ ಇರುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಪತಿ: ಪಶ್ಚಾತಾಪದಿಂದ ಮತ್ತೆ ಮನೆಗೆ ಕರೆತಂದ…!
ಈ ಅತ್ತೆ-ಅಳಿಯನ ಪ್ರೇಮ ಪ್ರಕರಣವು ಅಲಿಗಢದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಈ ಕುರಿತು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಅತ್ತೆಯ ಗಂಭೀರ ಆರೋಪಗಳು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.