Alien Temple – ಅನಾದಿ ಕಾಲದಿಂದಲೂ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತನೆ ಮಾಡಿ, ದೇವಾಲಯಗಳನ್ನು ನಿರ್ಮಾಣ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಕೆಲವರು ಮನುಷ್ಯರಿಗಾಗಿ ಅವರ ಭಾವ-ಭಕ್ತಿಗೆ ಅನುಗುಣವಾಗಿ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡುತ್ತಿರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಅನ್ಯಲೋಕದಲ್ಲಿವೆ ಎಂದು ಹೇಳಲಾಗುವ ಏಲಿಯನ್ ಗಾಗಿ (Alien Temple) ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ. ತಮಿಳುನಾಡಿನ ಸೇಲಂ ನಲ್ಲಿ ವ್ಯಕ್ತಿಯೊಬ್ಬ ಏಲಿಯನ್ ದೇವಾಲಯವನ್ನು (Alien Temple) ನಿರ್ಮಾಣ ಮಾಡಿದ್ದಾನೆ. ಅಷ್ಟಕ್ಕೂ ಆತ ಈ ದೇವಾಲಯ ನಿರ್ಮಾಣ ಮಾಡಲು ಕಾರಣ ಏನು ಎಂಬುದನ್ನು ತಿಳಿಯಲು ಮುಂದೆ ಓದಿ.
ತಮಿಳುನಾಡಿನ ಸೇಲಂ ವ್ಯಾಪ್ತಿಯ ಮಲ್ಲಮೂಪಂಬಟ್ಟಿಯ ಲೋಗನಾಥನ್ ಎಂಬುವವರು ಅವರ ಜಮೀನಿನಲ್ಲಿ (Alien Temple) ಅನ್ಯಗ್ರಹ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಏಲಿಯನ್ ವಿಗ್ರಹವನ್ನು (Alien Temple) ಪ್ರತಿಷ್ಟಾಪನೆ ಮಾಡಿದ್ದಾರೆ. ಈ ದೇವರು ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ (Alien Temple) ಹೊಂದಿದ್ದಾರೆ ಎಂದು ಲೋಗನಾಥನ್ ತಿಳಿಸಿದ್ದಾರೆ. ಲೋಗನಾಥನ್ ತಮ್ಮ ಮುಕ್ಕಾಲು ಎಕರೆಯ ಭೂಮಿಯಲ್ಲಿ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಜೊತೆಗೆ ತಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಈ ದೇವಾಲಯ ನಿರ್ಮಾಣ ಮಾಡಲು ಅವರಿಂದ (Alien Temple) ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಅನ್ಯಗ್ರಹ ದೇವರು ಅಲ್ಲದೇ ಶಿವ, ಪಾರ್ವತಿ, ಮುರುಗನ್, ಕಾಳಿ ಸೇರಿದಂತೆ ಹಲವು ದೇವ-ದೇವತೆಗಳ ವಿಗ್ರಹಳನ್ನು ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ (Alien Temple) ಸ್ಥಾಪಿಸಲಾಗಿದೆಯಂತೆ. ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂದು ದೇಗುಲದ (Alien Temple) ನಿರ್ಮಾಣ ಮಾಡಿದ ಲೋಗನಾಥನ್ ರವರ ಬಲವಾದ ನಂಬಿಕೆಯಂತೆ. ಬಾಳೆಯ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೇ ಅನ್ಯಗ್ರಹ ಜೀವಿಗಳ ವಿಕರಣದಿಂದ ಪಾರಾಗಬಹುದು ಎಂದೂ ಸಹ ಲೋಗನಾಥನ್ ಹೇಳಿದ್ದಾರೆ. ಇನ್ನೂ ಈ ದೇಗುಲದ (Alien Temple) ನಿರ್ಮಾಣದ ಕಾರ್ಯ ನಡೆಯುತ್ತಿದೆ, ಆದರೂ ದಿನನಿತ್ಯ ಈ ದೇವಾಲಯಕ್ಕೆ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ಈ ದೇವಾಲಯದ ಕುರಿತು ದೊಡ್ಡ ಚರ್ಚೆ ಸಹ ಶುರುವಾಗಿದೆ.