Kannada : ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಶೋಣ: ಅನುರಾಧ ಆನಂದ್….!

Kannada : ಗಡಿಭಾಗವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣ, ಕನ್ನಡ ಭಾಷೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯೋಣ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ನೂತನ ತಾಲೂಕು ಅಧ್ಯಕ್ಷೆ ಅನುರಾಧ ಆನಂದ್ ಮನವಿ ಮಾಡಿದರು.

Kannada – ಕನ್ನಡ ಕಾರ್ಯಕ್ರಮಗಳು ನಿರಂತರವಾಗಿರಬೇಕು

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ಗುಡಿಬಂಡೆ ತಾಲೂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾಧ ಆನಂದ್ ರವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾ ತನಾಡಿದ ಅವರು, ಗಡಿಭಾಗವಾದ ಗುಡಿಬಂಡೆಯಲ್ಲಿ ಈಗಾಗಲೇ ಕನ್ನಡ ಉನ್ನತ ಸ್ಥಾನದಲ್ಲಿದೆ. ಈ ಭಾಗದಲ್ಲಿ ಆಡು ಭಾಷೆ, ವ್ಯವಹಾರಿಕ ಭಾಷೆ ತೆಲುಗು ಆದರೂ ಸಹ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಿಲ್ಲ. ಕನ್ನಡಪರ ಸಂಘಟನೆಗಳು ಈ ಭಾಗದಲ್ಲಿ ಕನ್ನಡ ಭಾಷೆಯ ಹಿರಿಮೆ ಸಾರುವಂತಹ ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಳ್ಳುತ್ತಿರುತ್ತಾರೆ. ಈ ಕೆಲಸ ತಾತ್ಕಲಿಕವಾಗಿ ಅಥವಾ ಸಂದರ್ಭಗಳಿಗೆ ಮಾತ್ರ ಸೀಮಿತವಾಗಬಾರದು, ಬದಲಿಗೆ ಇದು ನಿರಂತರವಾಗಿ ನಡೆಯುತ್ತಿರಬೇಕು. ನನ್ನ ಮೇಲಿನ ನಂಬಿಕೆಯಿಂದ ಇದೀಗ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷೆಯಾಗಿ ಹೊಸ ಜವಾಬ್ದಾರಿಯನ್ನು ನೀಡಿದ್ದು, ಈ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Kannada - Anuradha Anand, President of Akhila Bharata Kannada Sahitya Parishat, addressing the audience at the Gudibande literary meet

Kannada – ಅನುರಾಧ ಆನಂದ್ ರವರ ಆಯ್ಕೆಗೆ ಸಂತಸ

ಬಳಿಕ 11ನೇ ವಾರ್ಡಿನ ಮುಖಂಡ ಹಾಗೂ ಯೂತ್ ಕಾಂಗ್ರೇಸ್ ಅಧ್ಯಕ್ಷ ಅಂಬರೀಶ್ ಮಾತನಾಡಿ, ಅನುರಾಧ ಆನಂದ್ ರವರು ಸುಮಾರು 6 ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ತಾಲೂಕು ಸಮ್ಮೇಳನಗಳ ಜೊತೆಗೆ ಅದ್ದೂರಿಯಾಗಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಾಹಿತ್ಯ ಪರಿಷತ್ ಅನ್ನು ಉತ್ತಮವಾಗಿ ಮುನ್ನೆಡೆಸಿದ್ದಾರೆ. ಇದೀಗ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮೆಲ್ಲರಿಗೂ ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕನ್ನಡ ಕಾರ್ಯಕ್ರಮಗಳು ನಡೆಯಲಿದೆ ಎಂದರು.

Read this also : ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ….!

Kannada – ಕಾರ್ಯಕ್ರಮದಲ್ಲಿ ಹಾಜರಿದ್ದವರು

ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ.ಮಂಜುನಾಥ್, ಪಪಂ ಅಧ್ಯಕ್ಷ ವಿಕಾಸ್, ಸದಸ್ಯೆ ಮಂಜುಳಾ, ಬಿ.ಆರ್‍.ಸಿ ಸಂಯೋಜಕಿ ಗಂಗರತ್ನಮ್ಮ, ಕರ್ನಾಟಕ ರಕ್ಷಣಾ ವೇದಿಕೆಯ ಆನಂದ್, ಶ್ರೀನಿವಾಸ್ ಯಾದವ್, ಜಯ ಕರ್ನಾಟಕ ಸಂಘಟನೆಯ ಅಂಬಿಕಾ, ಕಸಾಪ ಸಂಘಟನೆಯ ವಾಹಿನಿ ಸುರೇಶ್, ವೀಣಾ, ಅನಿತಾ, ಭಾರತಿ, ಶ್ರೀನಿವಾಸ್ ಗಾಂಧಿ, ಶಿಕ್ಷಕರಾದ ಮಹಾಲಕ್ಷ್ಮೀ, ಅರುಣ, ಕನ್ನಡಾಭಿಮಾನಿ ಪುನೀತ್ ಕನ್ನಡಿಗ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top