Ajjampir Khadri – ರಾಜಕಾರಣಿಗಳು ಆಗಾಗ ತಿಳಿದೋ ಅಥವಾ ತಿಳಿಯದೇನೋ ಕೆಲವೊಂದು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಅಚ್ಚರಿಯ ಹೇಳಿಕೆಯೊಂದನ್ನು ಕಾಂಗ್ರೇಸ್ ಮುಖಂಡ ಸಯ್ಯದ್ ಅಜ್ಜಂಪೀರ್ ಖಾದ್ರಿ (Ajjampir Khadri) ನೀಡಿದ್ದಾರೆ. ಶಿಗ್ಗಾವಿಯಲ್ಲಿ ನಿನ್ನೆ ನಡೆದ ಆದಿಜಾಂಬವ ಸಮಾಜದ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಂಬೇಡ್ಕರ್ ರವರು ಇಸ್ಮಾಂ ಧರ್ಮಕ್ಕೆ ಸೇರಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬೌಧ್ದ ಧರ್ಮ ಸ್ವೀಕರಿಸಿದರು ಎಂದು ನಾನು ಓದಿದ್ದೆ, ಒಂದು ವೇಳೆ (Ajjampir Khadri) ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದೇ ಇದ್ದರೇ ಮುಸ್ಲೀಂ ಆಗುತ್ತಿದ್ದರು ಎಂದು ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿದ್ದಾರೆ.
ಕಾಂಗ್ರೇಸ್ ಮುಖಂಡ ಸಯ್ಯದ್ ಅಜ್ಜಂಪೀರ್ ಖಾದ್ರಿ (Ajjampir Khadri) ಶಿಗ್ಗಾವಿಯಲ್ಲಿ ನಡೆದ ಆದಿಜಾಂಬವ ಸಮಾಜದ ಸಮಾವೇಶದಲ್ಲಿ ಮಾತನಾಡುತ್ತಾ, ಅಂಬೇಡ್ಕರ್ ರವರು ಮುಸ್ಲೀಂ ಧರ್ಮ ಸ್ವೀಕರಿಸಲು ಎಲ್ಲಾ ಸಿದ್ದತೆಗಳು ನಡೆದಿತ್ತು. ಕೊನೆಯ ಕ್ಷಣದಲ್ಲಿ ಅವರು ಬೌದ್ಧ ಧರ್ಮ ಸ್ವೀಕರಿಸಿದರು ಎಂದು ನಾನು ಓದಿದ್ದೇನೆ. ಆದರೆ ಕೊನೆಯ ಕ್ಷಣದಲ್ಲಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಒಂದು ವೇಳೆ ಅಂಬೇಡ್ಕರ್ (Ajjampir Khadri) ರವರು ಬೌದ್ಧ ಧರ್ಮ ಸ್ವೀಕರಿಸದೇ ಇದ್ದರೇ ದಲಿತರು ಮುಸ್ಲೀಂರಾಗುತ್ತಿದ್ದರು. ಆರ್.ಬಿ.ತಿಮ್ಮಾಪುರ ಹೋಗಿ ರಹೀಮ್ ಖಾನ್ ಆಗುತ್ತಿದ್ದರು, ಡಾ.ಜಿ.ಪರಮೇಶ್ವರ್ ಪೀರ್ ಸಾಹೇಬ್ ಆಗುತ್ತಿದ್ದರು, ಎಲ್.ಹನುಮಂತಪ್ಪ ಹಸನ್ ಸಾಬ್ ಆಗುತ್ತಿದ್ದರು ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಇನ್ನೂ (Ajjampir Khadri) ಈಗ ಎಲ್ಲಿಲ್ಲಿ ದಲಿತ ಕೇರಿ ಇದೆಯೋ ಅಲ್ಲಿ ಪಕ್ಕದಲ್ಲೇ ಮುಸ್ಲಿಂ ದರ್ಗಾ ಇದೆ. ದಲಿತರಿಗೂ ಮುಸ್ಲಿಂರಿಗೂ ಬಾಂಧವ್ಯ ಹಾಗೆಯೇ ಇದೆ ಎಂದು ಹೇಳಿದ್ದಾರೆ. ಸದ್ಯ ಕಾಂಗ್ರೇಸ್ ಮುಖಂಡ ಸಯ್ಯದ್ ಅಜ್ಜಂಪೀರ್ ಖಾದ್ರಿ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ ಎನ್ನಲಾಗುತ್ತಿದೆ. ಈ ಹೇಳಿಕೆ ಮುಂದಿನ ದಿನಗಳಲ್ಲಿ (Ajjampir Khadri) ಯಾವ ರೀತಿಯಾಗಿ ರಾಜಕೀಯ ಸ್ವರೂಪ ಪಡೆದುಕೊಂಡು ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರುಗಳು ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.