ತಮಿಳುನಾಡು ಮುಖ್ಯಮಂತ್ರಿ ವಿಜಯ್ ದಳಪತಿ ಹಾಗೂ ನಟಿ ತ್ರಿಶಾ (Actress Trisha) ನಡುವಿನ ಆಪ್ತತೆ ಬಗ್ಗೆ ಕಾಲಿವುಡ್‌ನಿಂದ ಹಿಡಿದು ರಾಜಕೀಯ ವಲಯದವರೆಗೂ ಬಿಸಿಬಿಸಿ ಚರ್ಚೆ ನಡೆಯುತ್ತಲೇ ಇದೆ. ಪದೇ ಪದೇ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇವರ ನಡುವಿನ ಪ್ರೇಮದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಇದೀಗ ಸಿಎಂ ವಿಜಯ್ ಅವರ ಪೋಸ್ಟರ್ ಮುಂದೆ ತ್ರಿಶಾ ಮಾಡಿರುವ ಕ್ಯೂಟ್ ತುಂಟಾಟದ ವಿಡಿಯೋವೊಂದು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.

Actress Trisha – ಪೋಸ್ಟರ್ ನೋಡಿ ತ್ರಿಶಾ ಮಾಡಿದ್ದೇನು?
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟಿ ತ್ರಿಶಾ, ಸಿಎಂ ವಿಜಯ್ ದಳಪತಿ ಅವರ ದೊಡ್ಡ ಕಟೌಟ್ ಅಥವಾ ಪೋಸ್ಟರ್ ಅನ್ನು ನೋಡಿದ್ದಾರೆ. ತಕ್ಷಣವೇ ಪೋಸ್ಟರ್‌ನಲ್ಲಿದ್ದ ವಿಜಯ್ ಅವರ ಕೆನ್ನೆಯನ್ನು ಮುದ್ದಾಗಿ ನೇವರಿಸಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಸಲ್ಯೂಟ್ ಮಾಡಿ, ವಿಜಯ್ ಅವರ ಟ್ರೇಡ್‌ಮಾರ್ಕ್ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ. ಈ ತಮಾಷೆಯ ಕ್ಷಣವನ್ನು ಅಲ್ಲಿದ್ದವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ (Viral Video Here) ನೋಡಿದ ನೆಟ್ಟಿಗರು, “ಅರೆರೆ.. ಪೋಸ್ಟರ್ ಅನ್ನು ಕೂಡ ಬಿಡಲ್ವಾ ನೀವು?” ಎಂದು ಕಾಲೆಳೆಯುತ್ತಾ ಫನ್ನಿಯಾಗಿ ಟ್ರೋಲ್ ಮಾಡುತ್ತಿದ್ದಾರೆ.
ಚುನಾವಣೆಗೂ ಮುನ್ನ, ಆಮೇಲೂ ಒಟ್ಟೊಟ್ಟಿಗೆ!
ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಇವರಿಬ್ಬರ ಡೇಟಿಂಗ್ ಬಗ್ಗೆ ಗುಸುಗುಸು ಇತ್ತು. ತಮಿಳಗ ವೆಟ್ರಿ ಕಳಗಂ (TVK) ಪಕ್ಷದಿಂದ ಭರ್ಜರಿ ಜಯಭೇರಿ ಬಾರಿಸಿ ವಿಜಯ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗಲೂ ತ್ರಿಶಾ ವಿಶೇಷ ಅತಿಥಿಯಾಗಿ ಮಿಂಚಿದ್ದರು. ಇನ್ನು ವಿಜಯ್ ಮುಖ್ಯಮಂತ್ರಿ ಆದ (Actress Trisha) ಬಳಿಕ ತ್ರಿಶಾ ಹಾಕಿದ ಕೆಲವು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಕೂಡ ವೈರಲ್ ಆಗಿದ್ದವು. ಇತ್ತೀಚೆಗೆ ನಟ ಅಜಿತ್ ಅವರ ತಾಯಿ ನಿಧನರಾದಾಗಲೂ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. Read this also : ನನ್ನವರನ್ನು ಬಿಡಿ, ಬೇಕಿದ್ದರೆ ನನ್ನನ್ನು ಬಂಧಿಸಿ’ ದುರಂತದ ಕುರಿತು ದಳಪತಿ ವಿಜಯ್ ಮೊದಲ ಪ್ರತಿಕ್ರಿಯೆ

ಗಾಸಿಪ್ ಹಬ್ಬಿಸುವವರಿಗೆ ತ್ರಿಶಾ ಖಡಕ್ ವಾರ್ನಿಂಗ್!
ತಮ್ಮ ಹಾಗೂ ವಿಜಯ್ ಬಗ್ಗೆ ಬರುತ್ತಿರುವ ಸತತ ಟ್ರೋಲ್‌ಗಳು ಹಾಗೂ ಅಂತೆ-ಕಂತೆಗಳಿಂದ ಬೇಸತ್ತ ತ್ರಿಶಾ, ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ (Actress Trisha) ತಿರುಗೇಟು ನೀಡಿದ್ದಾರೆ. “ನನ್ನ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಲು ಕೇವಲ ಶ್ವಾನಗಳಿಗೆ (ನಾಯಿಗಳಿಗೆ) ಮಾತ್ರ ಹಕ್ಕಿದೆ” ಎಂದು ಮಾರ್ಮಿಕವಾದ ಕ್ಯಾಪ್ಷನ್ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವವರಿಗೆ ಹಾಗೂ ಟ್ರೋಲ್ ಮಾಡುವವರಿಗೆ ತ್ರಿಶಾ ತಮ್ಮದೇ ಶೈಲಿಯಲ್ಲಿ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಸದ್ಯ ತ್ರಿಶಾ ಅವರ ಈ ಬೋಲ್ಡ್ ರಿಪ್ಲೈ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
