Bangla News – ಸದ್ಯ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯನಿಲ್ಲುತ್ತಿಲ್ಲ. ಹಿಂದೂಗಳು, ಹಿಂದೂ ದೇವಾಲಯಗಳು, ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇತ್ತಿಚಿಗಷ್ಟೆ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧಿಸಲಾಗಿದೆ. ಈ ಕುರಿತು ಅನೇಕರು ಆಕ್ರೋಷ ಹೊರಹಾಕುತ್ತಾ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಆಕ್ರೋಷ ಹೊರಹಾಕಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆಸಲಾದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಾಂಗ್ಲಾದ (Bangla News) ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಘಟನೆ ನೋಡಿದರೇ ಮುಸ್ಲೀಂರು ಅನ್ನ ತಿಂದ ಮನೆಗೆ ಕನ್ನಡ ಹಾಕುವವರು ಎಂದು ಗೊತ್ತಾಗುತ್ತದೆ. ಬಾಂಗ್ಲಾದೇಶದಲ್ಲಿ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ಕೃಷ್ಣದಾಸ್ ರವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಆದರೆ ಅವರ ಮೇಲೆಯೇ ಕತ್ತಿ ಮಸಿಯುತ್ತಿದ್ದಾರೆ. ಭಾರತದ ಹಿಂದೂಗಳು ಬಾಂಗ್ಲಾದ ಮುಸ್ಲೀಂರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೇ ಅವರು ಉಳಿಯುತ್ತಾರೆಯೇ? ಈವೆರೆಗೂ ಒಬ್ಬ ಹಿಂದೂ ಸಹ ಧ್ವಂಸ ಮಾಡಲು ಹೋಗಿಲ್ಲ ಎಂದು ಹೇಳಿದ್ದಾರೆ.
ಬಾಂಗ್ಲಾದಲ್ಲಿ ತಿನ್ನಲು ಅನ್ನ ಇರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಚಿನ್ಮಯ್ ದಾಸ್ ರವರು ಎಲ್ಲರಿಗೂ ಅನ್ನ ಹಾಕಿದ್ದರು. ಆದರೆ ಅವರನ್ನೇ ಬಾಂಗ್ಲಾದವರು ಬಂಧಿಸಿದ್ದಾರೆ. ಅವರ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೋಗಿದ್ದರು. ಅವರ ಮೇಲೆ ಮುಸ್ಲೀಂರು ಹಲ್ಲೆ ಮಾಡಿದ್ದಾರೆ. ಇದೀಗ ಆ ವಕೀಲರು ಸಾಯುವ ಸ್ಥಿತಿಯಲ್ಲಿ ಇದ್ದಾರೆ. ಭಾರತದ ಹಿಂದೂಗಳು ಮುಸ್ಲೀಂರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೇ ಮುಸ್ಲೀಂರು ಉಳಿಯುತ್ತಾರಾ? ಮುಸ್ಲೀಂರು ಹಿಂದೂ ಯುವತಿಯರ ಅತ್ಯಾಚಾರ ನಡೆಸುತ್ತಿದ್ದಾರೆ. ಒಬ್ಬ ಹಿಂದೂ ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೇ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಇದೇ ರೀತಿಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೇ ಹಿಂದೂಗಳು ತಿರುಗಿಬೀಳುತ್ತಾರೆ. ಮುಂದೊಂದು ದಿನ ಬಾಂಗ್ಲಾದೇಶ, ಪಾಕಿಸ್ತಾನ ಇರುವುದಿಲ್ಲ. ಅಖಂಡ ಭಾರತ ನಿರ್ಮಾಣವಾಗುತ್ತದೆ. ಬಾಂಗ್ಲಾದೇಶದ ಸರ್ಕಾರದ ವಿರುದ್ದ ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು.