Valmiki – ಕರ್ನಾಟಕ ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯದವಾದ ವಾಲ್ಮೀಕಿ ಸಮುದಾಯದವರು ಸಂಘಟಿತರಾಗಬೇಕು, ಜೊತೆಗೆ ಪ್ರತಿಷ್ಟೆ ಹಾಗೂ ಅಹಂ ಬಿಟ್ಟು ಸಮುದಾಯ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಸಮುದಾಯ ಅಭಿವೃದ್ದಿಯಾಗುತ್ತದೆ ಎಂದು ರಾಚನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

Valmiki – ಪಟ್ಟಣದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಯಲಯದಲ್ಲಿ ಮುಂದಿನ ವರ್ಷದ ಫೆಬ್ರವರಿ ಮಾಹೆಯ 8&9ನೇ ತಾರೀಖಿನಂದು ರಾಚನಹಳ್ಳಿ ಶ್ರೀ ವಾಲ್ಮೀಕಿ ಮಠದಲ್ಲಿ ನಡೆಯಲಿರುವ 7ನೇ ವಾಲ್ಮೀಕಿ ಜಾತ್ರೆಯ (Valmiki Jathre) ಪೂರ್ವಭಾವಿ ಸಭೆ ಹಾಗೂ ಜಾತ್ರೆಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಮ್ಮ ಸಮುದಾಯ ನಾಲ್ಕನೇ ದೊಡ್ಡ ಸಮುದಾಯವಾಗಿದೆ. ಆದರೆ ನಮ್ಮ ಒಗ್ಗಟ್ಟು ಸಂಘಟನೆಯ ಕೊರತೆಯಿದೆ. ಬೇರೆ ಸಮುದಾಯದವರು ಕಡಿಮೆ ಜನಸಂಖ್ಯೆಯಿದ್ದರೂ ಸಹ ಅವರು ಅಭಿವೃದ್ದಿಯಾಗುತ್ತಿದ್ದಾರೆ. ಅದೇ ರೀತಿಯ ಒಗ್ಗಟ್ಟು, (Valmiki) ಸಂಘಟನೆ ನಮ್ಮ ಸಮುದಾಯದಲ್ಲಿ ಆಗಬೇಕಿದೆ. ನಮ್ಮ ಹೋರಾಟದ ಪ್ರತಿಫಲವಾಗಿ ಇಂದು ನಮ್ಮ ಸಮುದಾಯದಕ್ಕೆ ಶೇ.7.5 ರಷ್ಟು ಮೀಸಲಾತಿ ಸಿಕ್ಕಿದೆ. ಇದು ಒಗ್ಗಟ್ಟಿನಲ್ಲಿ ಎಷ್ಟು ಶಕ್ತಿಯಿದೆ ಎಂಬುದು ತೋರಿಸುತ್ತದೆ. ಆದ್ದರಿಂದ ವೈಯುಕ್ತಿಕವಾಗಿ ನೀವು ಯಾವುದೇ ಪಕ್ಷದವರಾಗಿರಿ, (Valmiki Jathre) ಆದರೆ ಸಮುದಾಯದ ವಿಚಾರ ಬಂದಾಗ ಎಲ್ಲವನ್ನೂ ಬದಿಗಿಟ್ಟು ಸಮುದಾಯದ ಪರ ಕೆಲಸ ಮಾಡಿ ಎಂದರು.

ಇನ್ನೂ ನಮ್ಮ ಮತಗಳನ್ನು ಪಡೆದು ಶಾಸಕರಾಗಿ, (Valmiki) ಸಚಿವರಾಗಿರುವಂತಹ ನಾಯಕರು ನಮ್ಮ ಸಮುದಾಯವನ್ನೇ ಮರೆಯುತ್ತಿದ್ದಾರೆ. ಅಂತಹ ಸರ್ಕಾರಕ್ಕೆ ಪಾಠ ಕಲಿಸಲು ಜಾಗೃತರಾಗಬೇಕು. ಮಹರ್ಷಿ ವಾಲ್ಮೀಕಿ ಜಾತ್ರೆ ಜಾಗೃತಿ ಮೂಡಿಸಲು ಜಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವಲ್ಲದ ತಳವಾರು (Valmiki) ಅಕ್ರಮವಾಗಿ ಎಸ್ಟಿ ಪ್ರಮಾಣ ಪಡೆಯುತ್ತಿದ್ದಾರೆ. ತಳವಾರ ಎಂಬ ಕಾರಣಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ನಾಯಕ ತಳವಾರರ ಸಂವಿಧಾನ ಹಕ್ಕಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಗುಡಿಬಂಡೆಯಲ್ಲಿ (Valmiki) ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು, ಆದಷ್ಟು ಶೀಘ್ರವಾಗಿ ಭವನ ನಿರ್ಮಾಣ ಮಾಡಲು ಸಮುದಾಯದವರು ಪ್ರಯತ್ನಿಸಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ಸಹ ನೀಡುತ್ತೇನೆ ಎಂದರು.

ನಂತರ ಗುಡಿಬಂಡೆ ತಾಲೂಕು ವಾಲ್ಮೀಕಿ ಸಂಘ ಸೇರಿದಂತೆ ವಾಲ್ಮೀಕಿ ಮುಖಂಡರಿಂದ ಪ್ರಸನ್ನಾನಂದ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. (Valmiki Jathre) ಇದೇ ಸಮಯದಲ್ಲಿ ವಾಲ್ಮೀಕಿ ಜಾತ್ರೆಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಎಲ್ಲರೂ ಕುಟುಂಬ ಸಮೇತರಾಗಿ ಜಾತ್ರೆಗೆ ಆಗಮಿಸುವಂತೆ ಮನವಿ ಮಾಡಿದರು. ಈ ವೇಳೆ ರಾಜ್ಯ ವಾಲ್ಮೀಕಿ ಯುವ ಪಡೆಯ ಸುಬ್ರಮಣ್ಯ, ಹೊಸಕೋಟೆಯ ಮುಖಂಡ ರಮೇಶ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಎನ್.ವಿ.ಗಂಗಾಧರ್, ಮುಖಂಡರಾದ ಬೀಚಗಾನಹಳ್ಳಿ ನರೇಂದ್ರ, ಕಡೇಹಳ್ಳಿ ಆನಂದಪ್ಪ, ಚೆಂಡೂರು ರಾಮಾಂಜಿ, ಶಂಕರ್, ಕೃಷ್ಣಪ್ಪ, ಹರಿಕೃಷ್ಣ, ರಾಮಾಂಜಿನಪ್ಪ, ಸೋಮೇನಹಳ್ಳಿ ಅಶ್ವತ್ಥಪ್ಪ, ಮಂಜುನಾಥ್, ಆದಿನಾರಾಯಣ, ಅಶ್ವತ್ಥಪ್ಪ, ನವೀನ್, ನರೇಂದ್ರ, ನಂಜುಂಡಪ್ಪ ಸೇರಿದಂತೆ ಹಲವರು ಇದ್ದರು.