Narendra Modi – 2002ರಲ್ಲಿ ನಡೆದ ಗೋಧ್ರಾ ದುರಂತಕ್ಕೆ (Godhra Train Tragedy) ಕಾರಣವಾದ ಘಟನೆಗಳ ಆಧಾರದ ಮೇಲೆ ನಿರ್ಮಾಣವಾದ ದಿ ಸಾಬರಮತಿ ರಿಪೋರ್ಟ್ (The Sabarmati Report) ಚಿತ್ರ ಬಿಡುಗಡೆಯಾಗಿದ್ದು, ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನೆಮಾದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಡಿ ಹೊಗಳಿದ್ದಾರೆ. ಈ ಸಿನೆಮಾದ ಕುರಿತು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೋದಿಯವರ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಿನೆಮಾದ ಕುರಿತು ಚರ್ಚೆಯನ್ನು ಹುಟ್ಟಿಹಾಕಿದೆ.
ಬಿಹಾರದ ಮುಜಾಫರ್ ಪುರದಿಂದ (Narendra Modi) ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ (The Sabarmati Report) ಸಾಬರಮತಿ ಎಕ್ಸ್‌ಪ್ರೆಸ್ ರೈಲು 2002ರ ಫೆ.27,ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣಕ್ಕೆ ತೆರಳಿತ್ತು. ಇದರಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು (Narendra Modi) ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್‌ಗಳಿಗೆ ಬೆಂಕಿ ಹಚ್ಚಿತ್ತು. ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. (Narendra Modi) ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ, ವರದಿಯಲ್ಲಿ ಈ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು. ಆದರೂ ಈ ದುರಂತ ಇಂದಿಗೂ ವಿವಾದದ ವಿಷಯವಾಗಿಯೇ ಉಳಿದಿದೆ ಎನ್ನಲಾಗಿದೆ.
ನರೇಂದ್ರ ಮೋದಿಯವರ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಈ ಸಿನೆಮಾದ ಕುರಿತು ಪ್ರಧಾನಿ (Narendra Modi) ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸಾಮಾನ್ಯ ಜನರು ಇದನ್ನು (The Sabarmati Report) ಸಿನಿಮಾ ಮೂಲಕ ನೋಡಬಹುದು. ಈ ಚಲನಚಿತ್ರವನ್ನು ಜನರು ನೋಡಲೇಬೇಕು. ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರತಂಡ ಶ್ರಮಿಸಿದೆ ಎಂದು ಸಿನೆಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ (Narendra Modi) ಪ್ರಧಾನಿ ನರೇಂದ್ರ ಮೋದಿಯವರ ಈ ಟ್ವೀಟ್ ಕುರಿತು ಅನೇಕರು ಟೀಕೆ ಸಹ ಮಾಡಿದ್ದಾರೆ.
ಈ ಸಿನೆಮಾವನ್ನು (The Sabarmati Report) ದಿ ಸಾಬರಮತಿ ರಿಪೋರ್ಟ್ ಧೀರಜ್ ಸರ್ನಾ ನಿರ್ದೇಶನ ಮಾಡಿದ್ದು, ಈ ಸಿನೆಮಾ ನ.15 ರಂದು ಬಿಡುಗಡೆಯಾಗಿದೆ. ವಿಕ್ರಾಂತ್ ಮಾಸಿ, ರಾಶಿ ಖನ್ನಾ, ರಿದ್ದಿ ಡೋಗ್ರಾ, ಬರ್ಕಾ ಸಿಂಗ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. (The Sabarmati Report) ಸಿನೆಮಾ ಬಿಡುಗಡೆಯಾದ ಮೊದಲನೇ ದಿನವೇ 1.10 ಕೋಟಿ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 1.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.