Kannada Rajyostava – ಕನ್ನಡಪರ ಹಾಗೂ ರೈತಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಮುಖ್ಯರಸ್ತೆಯಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ ಹಾಗೂ ಜಯಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ (Kannada Rajyostava) ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆ, ನೆಲ, ಜಲ ರಕ್ಷಣೆಗಾಗಿ ಹೋರಾಟ ನಡೆಸಿರುವ ಕನ್ನಡ ಪರ ಚಳವಳಿ ಹೋರಾಟಗಾರರ ವಿರುದ್ಧ ಬಾಕಿ ಇರುವ ಪ್ರಕರಣಗಳು ವಾಪಸು ಪಡೆಯಲು ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇನೆ. (Puneeth Rajkumar) ವರನಟ ಡಾ.ರಾಜ್ ಕುಮಾರ್ ರವರ ಪುತ್ರ ಡಾ.ಪುನೀತ್ ರಾಜ್ ಕುಮಾರ್ ರವರು ಅಪಾರ ಸೇವೆ ಸಲ್ಲಿಸಿದ್ದಾರೆ. ಕೇವಲ ನಟನಾಗಿ ಜನರನ್ನು ಮನರಂಜಿಸಿದ್ದು ಮಾತ್ರವಲ್ಲದೇ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡಿದ್ದಾರೆ. ಅವರ ಸಮಾಜ ಸೇವೆ ಹೇಗಿತ್ತು ಎಂಬುದರ ಬಗ್ಗೆ ಹೇಳುವುದಾದರೇ ಅವರು ಮರಣ ಹೊಂದಿದ ಬಳಿಕ ಅವರು ಕೈಗೊಂಡ ಸಾಮಾಜಿಕ ಕಾರ್ಯಕ್ರಮಗಳು ಬೆಳಕಿಗೆ ಬಂತು. ಅನೇಕ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಅವರ ಅಕಾಲಿಕ ಮರಣ (Kannada Rajyostava) ಇಡೀ ರಾಜ್ಯವನ್ನೇ ಮರಗುವಂತೆ ಮಾಡಿತ್ತು. ಅಪ್ಪು ರವರಂತೆ ಇಂದಿನ ಯುವಕರೂ ಸಹ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಡಿಬಂಡೆ ತಾಲೂಕು ಆಂಧ್ರದ ಗಡಿ ಭಾಗದಲ್ಲಿದ್ದರೂ ಇಲ್ಲಿ ಕನ್ನಡ ಜನರ ಜೀವದಲ್ಲಿ ತುಂಬಿದೆ. ಅನೇಕ ಸಾಹಿತಿಗಳು, ಕವಿಗಳು ಈ ಭಾಗದಲ್ಲಿದ್ದು, ಹಲವಾರು ಪುಸ್ತಕಗಳನ್ನು, ಕವನಗಳನ್ನು ರಚಿಸಿದ್ದಾರೆ. ಜೊತೆಗೆ ಗಡಿಭಾಗದಲ್ಲಿ ಕೇವಲ ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ಆಗಾಗ ಈ ರೀತಿಯ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆಯ ಮತ್ತಷ್ಟು ಶ್ರೀಮಂತಗೊಳಿಸಲು ಮುಂದಾಗಬೇಕೆಂದರು.
ನಂತರ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿ (Kannada Rajyostava) ಬಳಗದ ತಾಲೂಕು ಅಧ್ಯಕ್ಷ ಅಂಬರೀಶ್ ಮಾತನಾಡಿ, ಗುಡಿಬಂಡೆ ಆಂಧ್ರದ ಗಡಿ ಭಾಗದಲ್ಲಿದ್ದರೂ ಸಹ ಕನ್ನಡಾಭಿಮಾನಿಗಳು ಇಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಬಳಗದ ವತಿಯಿಂದ ಮತಷ್ಟು ಕನ್ನಡ (Kannada Rajyostava) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಕನ್ನಡ ಕಾರ್ಯಕ್ರಮಗಳಿಗೆ ಶಾಸಕರು ಸೇರಿದಂತೆ ಸ್ಥಳೀಯ ಎಲ್ಲ ಮುಖಂಡರೂ ಸಹ ಸಹಕಾರ ನಿಡುತ್ತಿದ್ದಾರೆ ಎಂದರು.
ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ನಗರ (Kannada Rajyostava) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನ್ಯೂ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ಲವ್ ರೆಡ್ಡಿ ಚಲನಚಿತ್ರದ ನಟ ಮತ್ತು ನಟಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ (Kannada Rajyostava) ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗ ಅಧ್ಯಕ್ಷ ಅಂಬರೀಶ್, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ರಾಜು, ಸದಸ್ಯ ರಾಜೇಶ್, ಬಷೀರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣ ಸ್ವಾಮಿ, ಕಸಾಪ ಅಧ್ಯಕ್ಷ ಬಿ. ಮಂಜುನಾಥ, ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ, ಆದಿರೆಡ್ಡಿ, ಪ್ರಕಾಶ್, ರಮೇಶ್, ರಿಯಾಜ್ ಪಾಷ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಬಡ್ಡು ಅಬ್ದುಲ್ ವಹಾಬ್, ಅಂಬಿಕಾ ಸೇರಿದಂತೆ ಜಯಕರ್ನಾಟಕ ಸಂಘಟನೆಯ ಹಾಗೂ ಡಾ. ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗ ಸದಸ್ಯರು ಭಾಗವಹಿಸಿದರು.