Tuesday, July 1, 2025
HomeNationalನಿಮ್ಮ ಡಿಗ್ರಿ ಮುಗಿದಿದೆಯಾ, ನಿಮಗಾಗಿ SIDBI Bank ಬ್ಯಾಂಕ್ ನಲ್ಲಿದೆ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ….!

ನಿಮ್ಮ ಡಿಗ್ರಿ ಮುಗಿದಿದೆಯಾ, ನಿಮಗಾಗಿ SIDBI Bank ಬ್ಯಾಂಕ್ ನಲ್ಲಿದೆ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ….!

ಪದವಿ ಮುಗಿಸಿದವರಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ. SIDBI Bank ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್‍ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಒಟ್ಟು 72 ಹುದ್ದೆಗಳು ಖಾಲಿಯಿದೆ. ಅರ್ಹರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SIDBI Bankನ ಅಧಿಕೃತ ವೆಬ್ ಸೈಟ್ sidbi.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ ವಿಧಾನ ಸೇರಿದಂತೆ ಹಲವು ಪ್ರಮುಖ ಮಾಹಿತಿ ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

SIDBI Recruitment 2024 0

SIDBI Bank ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ 72 ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್‍ 2 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪದವಿ, ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು. ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಮೊದಲಾದ ವಿವರಗಳನ್ನು ಮುಂದೆ ತಿಳಿಸಲಾಗಿದೆ. ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

SIDBI Recruitment 2024 2

  • ಹುದ್ದೆಗಳ ವಿವರ:
    • ಹುದ್ದೆಯ ಹೆಸರು: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಟೆಂಟ್ ಬ್ಯಾಂಕ್ ಆಫ್ ಇಂಡಿಯಾ
  • ಒಟ್ಟು ಹುದ್ದೆಗಳ ಸಂಖ್ಯೆ : 72
  • ಮಾಸಿಕ ವೇತನ : ರೂ 100000 ರಿಂದ ರೂ 115000
  • ವಿದ್ಯಾರ್ಹತೆ: ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಸಿಎ, ಸಿಎಂಎ, ಐಸಿಡಬ್ಲ್ಯೂಎ, ಸಿಎಫ್‌, ಇತರೆ ಪದವಿ, ಎಲ್‌ಎಲ್‌ಬಿ, ಎಂಬಿಎ, ಎಂಸಿಎ, ಪಿಜಿಡಿಎಂ ಪದವಿ ಪಾಸಾಗಿರಬೇಕು.
  • ಅರ್ಜಿ ಶುಲ್ಕ ವಿವರ:
  • ಸಾಮಾನ್ಯ ಅರ್ಹತೆ, ಒಬಿಸಿ ಅಭ್ಯರ್ಥಿಗಳಿಗೆ, ವಿಕಲಚೇತನ ಅಭ್ಯರ್ಥಿಗಳಿಗೆ ರೂ 1100 ಹಾಗೂ
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 175 ರೂ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
  • ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ಯಾಶ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಈ ವಿಧಾನಗಳಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬಹುದು.
  • ವಯಸ್ಸಿನ ಅರ್ಹತೆಗಳು:
  • ಆಫೀಸರ್ ಗ್ರೇಡ್ ಎ ಹುದ್ದೆಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
  • ಆಫೀಸರ್ ಗ್ರೇಡ್ ಬಿ ಹುದ್ದೆಗೆ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 33 ವರ್ಷ ವಯಸ್ಸು ಮೀರಿರಬಾರದು.
  • ಪ್ರಮುಖ ದಿನಾಂಕಗಳು:
  • ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 08-11-2024
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-12-2024
  • ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 02-12-2024
  • ವಯಸ್ಸಿನ ಅರ್ಹತೆ ಪರಿಗಣಿಸುವ ದಿನಾಂಕ: 08-11-2024
  • ವಿದ್ಯಾರ್ಹತೆ ಪರಿಗಣಿಸುವ ಕೊನೆ ದಿನಾಂಕ: 02-12-2024
  • ಹಂತ -1 ಆನ್‌ಲೈನ್ ಪರೀಕ್ಷಾ ದಿನಾಂಕ : 22-12-2024
  • ಹಂತ -2 ಆನ್‌ಲೈನ್ ಪರೀಕ್ಷಾ ದಿನಾಂಕ : 19-01-2024
  • ಸಂದರ್ಶನ ನಡೆಯುವ ದಿನಾಂಕ : ಫೆಬ್ರವರಿ 2025

Quick Links:

Apply Online Click Here
Official Notification Click Here
Official Website Click Here
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular