Wednesday, July 9, 2025
HomeInternationalViral News: ಓಟು ಹಾಕಿಲ್ಲ ಅಂತಾ ಬ್ರೇಕಪ್ ಮಾಡಿಕೊಂಡ ಯುವತಿ, ವೈರಲ್ ಆದ ಪೋಸ್ಟ್…!

Viral News: ಓಟು ಹಾಕಿಲ್ಲ ಅಂತಾ ಬ್ರೇಕಪ್ ಮಾಡಿಕೊಂಡ ಯುವತಿ, ವೈರಲ್ ಆದ ಪೋಸ್ಟ್…!

ಇತ್ತೀಚಿಗೆ ಹಲವಾರು ಕಾರಣಗಳಿಂದ ಜೋಡಿಗಳ ನಡುವೆ ಬ್ರೇಕಪ್ ಆಗುತ್ತಿರುತ್ತದೆ. ಇಲ್ಲೋಂದು ಘಟನೆಯ ಬಗ್ಗೆ ಕೇಳಿದರೇ ನೀವು ಸಹ ಶಾಕ್ ಆಗಬಹುದು. ಸದ್ಯ ಅಮೇರಿಕಾದ ಚುನಾವಣೆ ಭಾರಿ ಸದ್ದು ಮಾಡುತ್ತಿದ್ದು, ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸದ ಕಾರಣದಿಂದ ಬ್ರೇಕಪ್ ನಡೆದಿದೆ. ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ ಮತ ಹಾಕದ ಕಾರಣದಿಂದ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

women wants breakup for not cast vote

ಈ ಭಾರಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಭಾರಿ ಸದ್ದು ಮಾಡಿತ್ತು. ಅಮೇರಿಕಾ ಅಧ್ಯಕ್ಷ ಸ್ಥಾನಕ್ಕಾಗಿ ನ.5 ರಂದು ಮತದಾನ ನಡೆದಿತ್ತು. ರಿಪಬ್ಲಿಕನ್ ಪಾರ್ಟಿಯಿಂದ ಡೋನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಾರ್ಟಿಯಿಂದ ಕಮಲಾ ಹ್ಯಾರಿಸ್ ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಇಬ್ಬರ ನಡುವೆ ಜೋರು ಹಣಾಹಣಿ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯ ಡೋನಾಲ್ಡ್ ಟ್ರಂಪ್ ಜಯಗಳಿಸಿ ಅಮೇರಿಕಾದ ಅಧ್ಯಕ್ಷರಾಗಲಿದ್ದಾರೆ. ಆದರೆ ಈ ಚುನಾವಣೆಯಲ್ಲಿ ತನ್ನನ್ನು ಮದುವೆಯಾಗಬೇಕಾಗಿದ್ದ ವ್ಯಕ್ತಿ ಓಟು ಹಾಕಲು ನಿರಾಕರಿಸಿದ್ದಕ್ಕಾಗಿ ಯುವತಿ ತನ್ನ ನಿಶ್ಚಿತಾರ್ಥವನ್ನೇ ರದ್ದು ಮಾಡಿಕೊಂಡಿದ್ದಾಳೆ.

My (26f) fiance (26m) isn’t planning on voting for the US Presidential elections. I am having a moral crisis. Is ending our engagement over this dramatic?
byu/throwawaysadfaceidk inrelationship_advice

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಭಾವಿ ಪತಿ ಮತ ಚಲಾಯಿಸಲು ನಿರಾಕರಿಸಿದ ಕಾರಣದಿಂದ ತನ್ನ ಎಂಗೇಜ್ ಮೆಂಟ್ ಅನ್ನು ಯುವತಿ ಕ್ಯಾನ್ಸಲ್ ಮಾಡಿಕೊಳ್ಳಲು ಯುವತಿ ನಿರ್ಣಯಿಸಿದ್ದಾರೆ. ಈ ಸಂಬಂಧ ಪೋಸ್ಟ್ ಒಂದನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾಳೆ. ನಾನು ಪ್ಲೋರಿಡಾದಲ್ಲಿ ವಾಸಿಸುತ್ತಿರುವ ಯುವತಿಯಾಗಿದ್ದು, ನಾನು ಮದುವೆಯಾಗಬೇಕಿದ್ದ ಪತಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಹಾಕಲು ನಿರಾಕರಿಸಿದ್ದಕ್ಕಾಗಿ ಆತನೊಂದಿಗೆ ನನ್ನ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲು ಬಯಸಿದ್ದೇನೆ. ಎರಡೂ ಪಾರ್ಟಿಗಳ ಅಭ್ಯರ್ಥಿಗಳು ಇಷ್ಟವಾಗದ ಕಾರಣ ಆತ ಮತ ಹಾಕಲು ಒಪ್ಪುತ್ತಿಲ್ಲ. ಓಟು ಹಾಕದೇ ಇದ್ದರೇ ನಾನು ನಿಶ್ಚಿತಾರ್ಥವನ್ನು ಖಚಿತವಾಗಿ ರದ್ದು ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

women wants breakup for not cast vote 0

ಇನ್ನೂ ಈ ಫೋಸ್ಟ್ ಕಳೆದೆರಡು ದಿನಗಳ ಹಿಂದೆಯಷ್ಟೆ ಶೇರ್‍ ಮಾಡಿದ್ದು, ಭಾರಿ ವೈರಲ್ ಆಗುತ್ತಿದೆ. ಅನೇಕರು ಈ ಪೋಸ್ಟ್ ಗೆ ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಮತ ಹಾಕಬೇಕಾ ಬೇಡವಾ ಎಂಬುದು ಅವರ ವೈಯುಕ್ತಿಕ ನಿರ್ಣಯ. ಇದಕ್ಕಾಗಿ ನೀವು ಎಂಗೇಜ್ ಮೆಂಟ್ ರದ್ದು ಮಾಡುವುದು ಸರಿಯಲ್ಲ ಎಂತಲೂ, ನಿಮ್ಮಿಬ್ಬರ ನಡುವೆ ಹೊಂದಾಣಿಕೆಯಾಗದೇ ಇದ್ದರೇ ಬೇರೆಯಾಗಬೇಕೆ ವಿನಃ ಈ ರೀತಿಯಲ್ಲಿ ಬೇರೆಯಾಗುವುದು ಸರಿಯಲ್ಲ ಎಂದು ಕಾಮೆಂಟ್ ಗಳ ಮೂಲಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular